ಗರ್ಭಾವಸ್ಥೆಯಲ್ಲಿ ಕೆಲ ಮಹಿಳೆಯರು ಅನೇಕ ಸಮಸ್ಯೆಗಳನ್ನ ಎದುರಿಸ್ತಾರೆ, ಅದರಲ್ಲಿ ರಕ್ತದೊತ್ತಡ ಕಡಿಮೆಯಾಗುವುದು ಕೂಡ ಒಂದು. ಈ ಸಮಯದಲ್ಲಿ ಮಹಿಳೆಯರಿಗೆ ಬಿ.ಪಿ ಸಾಮಾನ್ಯ ಸ್ಥಿತಿಯಲ್ಲಿರಬೇಕು. ಇಲ್ಲವಾದ್ರೆ ಕೆಲವೊಂದು ಸಂದರ್ಭದಲ್ಲಿ ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ.ಗರ್ಭಿಣಿಯರು ಯಾವುದನ್ನು ಹೆಚ್ಚಾಗಿ ತಿನ್ನಬೇಕು ಅದರಿಂದಾಗೋ ಪ್ರಯೋಜನಗಳೇನು ತೋರೀಸ್ತೀವಿ
ಅಂದಹಾಗೆ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಬಿಪಿ ಕಡಿಮೆಯಾಗೋದು ಸಹಜ. ಅನೇಕ ವೈದ್ಯರು ಕೂಡ ಗರ್ಭಿಣಿ ಮಹಿಳೆಯರಿಗೆ ಲೋ ಬಿಪಿ ಮೆಡಿಸಿನ್ ಕೋಡೋದಿಲ್ಲ. ತೀರ ಸಮಸ್ಯೆ ಪ್ರಾರಂಭವಾದ್ರೆ ಮಾತ್ರ ಮೆಡಸಿನ್ ಮೊರೆ ಹೋಗಬಹುದು. ಇಲ್ಲವಾದ್ರೆ ಪೌಷ್ಠಿಕ ಆಹಾರ ಮತ್ತು ಜ್ಯೂಸ್ ಮುಖಾಂತರ ಲೋ ಬಿಪಿಯಿಂದ ನಿರಾಳವಾಗಬಹುದು
ಗರ್ಭಾವಸ್ಥೆಯಲ್ಲಿ ಬಿಪಿ ಕಡಿಮೆಯಾದರೆ ಪ್ರತಿದಿನ ರಾತ್ರಿ ಒಣದ್ರಾಕ್ಷಿಗಳನ್ನು ನೆನೆಸಿ ಬೆಳಗ್ಗೆ ತಿನ್ನಬೇಕು. ಈರೀತಿ ದಿನನಿತ್ಯ ಮಾಡೋದ್ರಿಂದ ಬಿಪಿ ಸುಧಾರಿಸುತ್ತದೆ. ಅಲ್ಲದೆ ತುಳಸಿ ಎಲೆಗಳನ್ನ ತೆಗೆದು ಅದನ್ನ ರಸ ಮಾಡಿ ಅದಕ್ಕೆ ಜೇನು ತುಪ್ಪ ಸೇರಿಸಿ ಕುಡಿದ್ರೆ ಬಿಪಿ ಸಾಮಾನ್ಯಗೊಳಿಸಲು ಸಹಾಯ ಮಾಡುತ್ತವೆ. ಯಾಕಂದ್ರೆ ತುಳಸಿ ಎಲೆಗಳಲ್ಲಿ ವಿಟಮಿನ್ ʼಸಿʼ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಪ್ಯಾಂಟೊಥೆನಿಕ್ ಆಮ್ಲವಿದೆ.
ಗರ್ಭಿಣಿಯರು ಅತೀ ಹೆಚ್ಚು ಹಸಿರು ಎಲೆಗಳ ತರಕಾರಿಗಳು ತಿನ್ನಬೇಕು ,ಇದು ಕಬ್ಬಿಣಾಂಶವನ್ನು ಹೊಂದಿರುತ್ತವೆ. ಇವುಗಳನ್ನು ತಿನ್ನುವುದರಿಂದ ರಕ್ತಹೀನತೆ ದೂರವಾಗಿ ಬಿಪಿ ಕೂಡ ಸಾಮಾನ್ಯ ಸ್ಥಿತಿಗೆ ಬರುತ್ತೆ. ಇನ್ನು ದಾಳಿಂಬೆ, ಬಾಳೆಹಣ್ಣು, ಸೇಬು ಮತ್ತು ಪೇರಳೆ ಮುಂತಾದ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ʼಸಿʼ ಸಮೃದ್ಧವಾಗಿರೋದ್ರಿಂದ ಇದನ್ನ ಇಂದ್ರೆ ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.
ಮಜ್ಜಿಗೆ ಕುಡಿಯೋ ಅಭ್ಯಾಸ ಕೂಡ ಬಿಪಿ ಕೂಡ ನಾರ್ಮಲ್ ಆಗುವಂತೆ ಮಾಡುತ್ತೆ. ಗರ್ಭಾವಸ್ಥೆಯಲ್ಲಿ ಕಡಿಮೆ ಬಿಪಿ ಸಮಸ್ಯೆ ಇರೋರು, ಬಿಪಿಯನ್ನು ಸಾಮಾನ್ಯಗೊಳಿಸಲು ಮಜ್ಜಿಗೆ ಟೇಸ್ಟಿ ಮತ್ತು ಈಸೀ ಪರಿಹಾರವಾಗಿದೆ. ಹಾಗೇನೆ ಮೊಟ್ಟೆ ಕೂಡ ತುಂಬಾನೇ ಉಪಕಾರಿ ಅದರಲ್ಲಿರೋ ಪ್ರೋಟೀನ್, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶ ಬಿಪಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಲ್ಲದೇ ವಿಟಮಿನ್ ಬಿ-12 ಸಹ ಇರೋದ್ರಿಂದ ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಮೊಟ್ಟೆ ತಿಂದರೆ ರಕ್ತಹೀನತೆ ಬರುವುದಿಲ್ಲ ಮತ್ತು ಬಿಪಿ ಕೂಡ ನಾರ್ಮಲ್ ಆಗುತ್ತದೆ.
ಅಂದಹಾಗೆ ಡಾರ್ಕ ಚಾಕೋಲೇಟ್ ಗಳು ಕೂಡ ಬಿಪಿ ಸಮತೋಲನಕ್ಕೆ ಉತ್ತಮ ಹಾಗೂ ಇನ್ಸ್ಟಾನ್ಟ್ ಪರಿಹಾರ. ಯಾಕಂದ್ರೆ ಡಾರ್ಕ್ ಚಾಕೋಲೇಟ್ ಗಳು ಫ್ಲಾವನಾಲ್ಗಳನ್ನ ಹೊಂದಿರುತ್ತವೆ .ಹಾಗಂತ ಇದನ್ನ ಹೆಚ್ಚು ತಿನ್ನೋದು ಕೂಡ ಒಳ್ಳೇದಲ್ಲ.ಹಾಗೇನೆ ಚೀಸ್ ಗೆ ಸ್ವಲ್ಪ ಉಪ್ಪು ಹಾಕಿ ಪನ್ನೀರ್ ಜೊತೆ ತಿಂದ್ರೆ ಅದೂ ಬಿಪಿ ಸಮಸ್ಯೆಗೆ ಬೆಸ್ಟ್ ಪರಿಹಾರವಾಗಿದೆ. ಇನ್ನು ಯಾವುದು ಬೇಡ ಸಿಂಪಲ್ ಆಂಡ್ ಬೆಸ್ಟ್ ಬೇಕು ಅನ್ನೋರಿಗೆ ಮನೆಯಲ್ಲೇ ಇರೊ ಉಪ್ಪಿಗೆ ನೀರನ್ನ ಬೆರಸಿ ಸೀಮಿತ ಪ್ರಮಾಣದಲ್ಲಿ ಸೇವಿಸಿದ್ರೆ ಲೋ ಬಿಪಿ ಹಾಠಾತ್ ಕಡಿಮೆಯಾಗುತ್ತದೆ….