Horscope:ಶುಕ್ರನ ಅತ್ಯಂತ ಇಷ್ಟದ ರಾಶಿಗಳು ಇವು!

ಶುಕ್ರದೇವ ಸುಖದ ಸುಪತ್ತಿಗೆ ಹಾಗೂ ರಾಜರಂತ ಜೀವನವನ್ನೇ ಆನಂದಿಸುವಂತೆ ಮಾಡೋ ಅಧಿಪತಿ.ಅದರಲ್ಲೂ ಜ್ಯೋತಿಷ್ಯದ ಪ್ರಕಾರ, ಜನ್ಮನಕ್ಷತ್ರದಲ್ಲಿ ಶುಕ್ರ ದೇವ ಶುಭ ಸ್ಥಾನದಲ್ಲಿದ್ರೆ,ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೀಬಹುದು.ಅಲ್ಲದೇ ಶುಕ್ರದೆಸೆ ಇರೋ ಜನರು ಹಣವಂತರು ಆಗ್ತಾರೆ ಅನ್ನೋ ನಂಬಿಕೆ ಇದೆ.ಮುಖ್ಯವಾಗಿ ಈ ಗ್ರಹವನ್ನು ಪ್ರಣಯ,ಸಂಪತ್ತು,ಐಷಾರಾಮಿ ಜೀವನದ ರಾಜ ಎನ್ನುತ್ತಾರೆ. ಶುಕ್ರನಿಗೆ ತುಂಬಾನೇ ಇಷ್ಟವಾಗುವ ಕೆಲವೊಂದು ರಾಶಿಗಳಿವೆ.ಹಾಗಿದ್ರೆ ಆ ರಾಶಿಗಳು ಯಾವ್ಯಾವುದು ಹೇಳ್ತೀವಿ

 

ಅಂದಹಾಗೆ ಶುಕ್ರ ಗ್ರಹವನ್ನು ಗುರುವಿನ ನಂತರದ ಮಂಗಳಕರ ಗ್ರಹ ಎನ್ನಲಾಗುತ್ತೆ. ಶುಕ್ರಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗ್ಬೇಕಾದ್ರೆ ಸುಮಾರು 23 ದಿನಗಳನ್ನ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ, ಶುಕ್ರ ಗ್ರಹವು ಉಚ್ಛ ಸ್ಥಾನದಲ್ಲಿರುತ್ತವೆ. ಹೀಗಾಗಿನೇ ಲಕ್ಷ್ಮಿ ದೇವತೆಯ ಅನುಗ್ರಹವನ್ನು ಹೊಂದುತ್ತಾರೆ ಮತ್ತು ಎಂದಿಗೂ ಪಡೆಯಲಾಗದ ಸಂಪತ್ತನ್ನು ಸಹ ಶುಕ್ರದೆಸೆ ಇರೋ ರಾಶಿಯವ್ರು ಪಡೀತಾರೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನಿಗೆ ತುಂಬಾ ಇಷ್ಟವಾಗುವ ಕೆಲವು ರಾಶಿಗಳಿವೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಶುಕ್ರ ಸಂಕ್ರಮವು ತುಂಬಾ ಅದೃಷ್ಟವಾಗಿದೆ. ಆದ್ದರಿಂದ ಪ್ರತಿ ಬಾರಿ ಈ ಗ್ರಹ ಸಂಕ್ರಮಣದಂದು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ಅನುಗ್ರಹಿಸುತ್ತೆ. ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಐಷಾರಾಮಿ ಜೀವನ ನಡೆಸುತ್ತಾರೆ. ಅಲ್ಲದೆ, ಅವರ ಜೀವನದಲ್ಲಿ ಸಂತೋಷವು ದ್ವಿಗುಣಗೊಳ್ಳುತ್ತದೆ.

 

ತುಲಾ: ತುಲಾ ರಾಶಿಯವರಿಗೆ ಶುಕ್ರ ಸಂಕ್ರಮಣವೂ ಅತ್ಯಂತ ಮಂಗಳಕರ. ಈ ಸಮಯದಲ್ಲಿ, ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವು ತುಲಾ ರಾಶಿಯವರಿಗೆ ಅನಿರೀಕ್ಷಿತ ಪ್ರಯೋಜನಗಳನ್ನು ತರುತ್ತದೆ. ಅಲ್ಲದೆ ವೃತ್ತಿಯ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ, ಬುದ್ಧಿವಂತಿಕೆಯು ಹೆಚ್ಚಾಗುತ್ತದೆ.

 

ಮೀನ: ಶುಕ್ರನಿಗೆ ಮೀನ ರಾಶಿಯವರೆಂದರೆ ತುಂಬಾ ಇಷ್ಟ. ಈ ಕಾರಣದಿಂದಲೇ ಅನಿರೀಕ್ಷಿತ ಲಾಭವನ್ನು ಪಡೆಯುವಂತೆ ಮಾಡುತ್ತಾನೆ ಸಂಪತ್ತಿನ ಅಧಿಪತಿ. ಇದಲ್ಲದೆ, ಜೀವನದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದರೂ, ಅವುಗಳನ್ನು ಎದುರಿಸುವ ಶಕ್ತಿ ಈ ರಾಶಿಯವರಲ್ಲಿರುತ್ತದೆ.

About The Author