Thursday, October 17, 2024

Latest Posts

Navaratri Special: ನವರಾತ್ರಿಯ ಮೂರನೇ ದಿನ ಪೂಜಿಸಲ್ಪಡುವ ಚಂದ್ರಘಂಟಾ ದೇವಿ ಯಾರು..?

- Advertisement -

Spiritual: ನವರಾತ್ರಿಯ ಮೊದಲ ಮತ್ತು ಎರಡನೇಯ ದಿನದಂದು ಶೈಲಪುತ್ರಿ ಮತ್ತು ಬ್ರಹ್ಮಚಾರಿಣಿಯನ್ನು ಆರಾಧಿಸಲಾಗುತ್ತದೆ. ಮೂರನೇಯ ದಿನವಾದ ಇಂದು, ಪಾರ್ವತಿಯ ಇನ್ನೊಂದು ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಯಾರು ಈ ಚಂದ್ರಘಂಟಾ..? ಆಕೆ ಈ ರೂಪವನ್ನು ತಾಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ನವದುರ್ಗೆಯರಲ್ಲಿ ಒಬ್ಬಳಾದ ಚಂದ್ರಘಂಟಾ ದೇವಿ ಚಂದ್ರನಷ್ಟು ಕಾಂತಿಯುತಳಾದವಳು ಎಂಬ ಕಾರಣಕ್ಕೆ, ಆಕೆಯನ್ನು ಚಂದ್ರಘಂಟಾ ಎಂದು ಕರೆಯಲಾಗುತ್ತದೆ. ಈಕೆಯನ್ನು ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿನಿಂದಲೂ ಕರೆಯಲಾಗುತ್ತದೆ.

ಸಿಂಹವಾಹಿನಿಯಾಗಿರುವ ಚಂದ್ರಘಂಟಾ ದೇವಿ, 10 ಕೈಗಳನ್ನು ಹೊಂದಿದ್ದಾಳೆ. ಕಮಲ, ಬಿಲ್ಲು, ಬಾಣ, ಜಪಮಾಲೆ, ಕಮಂಡಲ, ತ್ರಿಶೂಲ, ಗಧೆ, ಖಡ್ಗ್‌ವನ್ನು ಹಿಡಿದಿದ್ದಾಳೆ. ಈಕೆ ಈ ರೂಪ ತಾಳಲು ಕಾರಣವೇನು ಎಂದರೆ, ಶಿವ ತನ್ನ ಗಣಗಳೊಂದಿಗೆ ಪಾರ್ವತಿಯನ್ನು ವರಿಸಲು ಬರುತ್ತಾನೆ. ಶಿವ ಮತ್ತು ಶಿವನ ದಿಬ್ಬಣದ ಅವತಾರವನ್ನು ನೋಡಿ, ಪಾರ್ವತಿ ತಲೆತಿರುಗಿ ಬೀಳುತ್ತಾಳೆ.

ಏಕೆಂದರೆ, ಶಿವ ಮತ್ತು ಅವನ ಗಣಗಳು ವಿಕಾರ ರೂಪದಲ್ಲಿ ಇರುತ್ತಾರೆ. ಆಗ ಪಾರ್ವತಿ, ಸಾವರಿಸಿಕೊಂಡು, ಚಂದ್ರಘಂಟಾಳ ರೂಪ ತಾಳಿ, ಶಿವನಲ್ಲಿ ಸೌಮ್ಯ ಸ್ವರೂಪಿಯಾಗಿ ಬಂದು, ತನ್ನನ್ನು ವರಿಸುವಂತೆ ಕೇಳಿಕೊಳ್ಳುತ್ತಾಳೆ. ಬಳಿಕ ಚಂದ್ರ ಸೌಮ್ಯನಾಗಿ ಚಂದ್ರಘಂಟಾಳನ್ನು ವರಿಸುತ್ತಾನೆ.

- Advertisement -

Latest Posts

Don't Miss