Saturday, July 12, 2025

Latest Posts

Hubli News: ಬೆಳ್ಳಂ ಬೆಳಗ್ಗೆ ಸದ್ದು ಮಾಡಿದ ಹುಬ್ಬಳ್ಳಿ ಪೊಲೀಸರ ಗುಂಡು..

- Advertisement -

Hubli News: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರ ಗುಂಡು ಸದ್ದು ಮಾಡಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಕಳ್ಳರ ಕಾಲಿಗೆ ಗುಂಡೇಟು ಬಿದ್ದಿದೆ.

ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹೆಚ್ಚಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಅಲ್ಲದೇ, ಗೋಕುಲ್‌ ಗ್ರಾಮದ ಮನೆಯೊಂದರ ಡಕಾಯಿತಕ್ಕೆ 5-6 ಜನರ ತಂಡ ಪ್ಲಾನ್ ಮಾಡಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿ, ಸೀತಾರಾಮ್ ಕಾಳೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ಆತ ಇನ್ನುಳಿದ ಆರೋಪಿಗಳು ಎಲ್ಲಿರುತ್ತಾನೆಂದು ಹೇಳಿದ್ದಾನೆ.

ಹಾಗಾಗಿ ರೇವಡಿಹಾಳ ಮಾರ್ಗಕ್ಕೆ ಪೊಲೀಸರು, ಸೀತಾರಾಮನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ದಾಳಿ ಮಾಡಿ ಪೊಲೀಸರಿಂದ ಎಸ್ಕೇಪ್ ಆಗಲು ಆರೋಪಿ ಪ್ರಯತ್ನಿಸಿದ್ದಾನೆ. ಗೋಕುಲ್ ಪೊಲೀಸ್ ಠಾಣೆಯ ಪಿಎಸ್ ಐ ಸಚಿನ್ ಸೀತಾರಾಮ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಕಾನ್‌ಸ್ಟೇಬಲ್‌ ವಸಂತ ಗುಡಿಗೇರಿಗೂ ಗಾಯವಾಗಿದ್ದು, ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳ ಮತ್ತು ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ.

- Advertisement -

Latest Posts

Don't Miss