Sunday, December 1, 2024

Latest Posts

ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ: ಪತಿಯ ಮನೆಯವರ ವಿರುದ್ಧ ದೂರು ದಾಖಲು

- Advertisement -

Hubli News: ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದೇ ಇದ್ದ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ವಿಶಾಲ ನಗರದಲ್ಲಿ ಈ ಘಟನೆ ನಡೆದಿದ್ದು, ಹೀನಾ ಕೌಸರ(28) ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿಯಾದ ಯುವತಿಯಾಗಿದ್ದಾಳೆ.

ನಾಲ್ಕು ಜನ‌ ಸೇರಿ ನನ್ನ‌ ಮಗಳನ್ನ ಕೊಲೆ ಮಾಡಿದ್ದಾರೆಂದು ಯುವತಿ ತಂದೆ ದೂರು ನೀಡಿದ್ದಾರೆ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದಿನ್ ‌ರೊಂದಿಗೆ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತ್ರ ವರದಕ್ಷಿಣೆ ‌ತರುವಂತೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ನಂತರ ಹಿರಿಯರು ಈ ಹಿಂದೆ ಹಲವು ಬಾರಿ ಎರಡೂ ಕುಟುಂಬದ ನಡುವೆ ರಾಜಿ ಸಂಧಾನ ಮಾಡಿದ್ದರು.  ಆದ್ರೂ ವರದಕ್ಷಿಣೆ ಕಿರುಕುಳ ನಿಲ್ಲಲಿಲ್ಲ. ನಿನ್ನೆಯೂ ವರದಕ್ಷಿಣೆ ತರುವಂತೆ ಮಗಳೊಂದಿಗೆ ಜಗಳವಾಡಿದ್ದಾರೆ. ನಮ್ಮ ತವರು ಮನೆಯವರು ವರದಕ್ಷಿಣೆ ತರಲಾಗಲ್ಲ ಎಂದು ಯುವತಿ ಹೇಳಿದ್ದಾಳೆ. ಜಗಳವಾಡಿ ನಾಲ್ಕು ಜನ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ಯುವತಿಯ ತಂದೆ ಆರೋಪ ಮಾಡಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಂಡ ಮಹಮ್ಮದ್ ಅಜರುದ್ದಿನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದನಿ ಶಬ್ಬೋ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss