Hubli News: ಹುಬ್ಬಳ್ಳಿ: ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾವು ಅವರ ಕೈ ಕೆಳಗೆ ಕೆಲಸ ಮಾಡ್ತಿದಿವಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬರವಣಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿ,
ಸದ್ಯ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರವನ್ನು ನೀವು ಅವರನ್ನೇ ಕೇಳಿ. ಪೂರ್ಣ ಬಹುಮತ ಇದೆ, ನಿಮಗೆ ಅವಕಾಶ ಇದೆಯಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ
ಸಿದ್ದರಾಮಯ್ಯ ಸಿಎಂ ಇದಾರಲ್ಲಾರೀ ಎಂದರು.
ಎರಡು ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಜಮ್ಮು ಕಾಶ್ಮೀರ ಚುನಾವಣೆ ಮೇಲೆ ನಮಗೆ ವಿಶ್ವಾಸ ಇತ್ತು, ಹಾಗೂ ಹರಿಯಾಣದಲ್ಲಿ ನಾವು ಗೆಲ್ಲಬೇಕಾಗಿತ್ತು. ಆದ್ರೆ ಮತದಾದರ ತೀರ್ಪು ಅಂತಿಮ. ಹರಿಯಾಣದಲ್ಲಿ ನಾವು ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಅಲ್ಲಿಯ ಮತದಾರರು ನಮ್ಮ ಕೈ ಹಿಡಿಯುತ್ತಾರೆ ಅಂತಾ ಅಂದ್ಕೊಂಡಿದ್ವಿ, ಹಿಡಿದಿಲ್ಲ. ಹರಿಯಾಣದಲ್ಲಿ 50 ಸೀಟ್ ನಿರೀಕ್ಷೆ ಮಾಡಿದ್ವಿ. ಆದರೆ ಅಲ್ಲಿ ನಮ್ಮ ವಿರುದ್ಧವಾಗಿ ಮತಗಳು ಬಂದಿವೆ. ಇನ್ನೂ ಜಮ್ಮು ಕಾಶ್ಮೀರದಲ್ಲಿ ನಾವು ಅಧಿಕಾರ ಹಿಡಿಯುವ ವಿಶ್ವಾಸವಿತ್ತು. ಅದರಂತೆ ಇಂಡಿಯಾ ಅಲೈನ್ಸ್ ಮತಗಳು ಸಿಕ್ಕಿವೆ. ಬಹು ವರ್ಷಗಳ ನಂತರ ಚುನಾವಣೆ ನಡೆದಿದೆ, ಅಲ್ಲಿಯ ಪ್ರಜೆಗಳು ಪ್ರಜಾಪ್ರಭುತ್ವ ಉಳಿಸಿದ್ದಾರೆ. ಹರಿಯಾಣ ರಿಸಲ್ಟ್ ಕುರಿತು ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ನಾವು ಈಗ ಎಚ್ಚರಿಕೆಯಿಂದ ಹೆಜ್ಕೆ ಇಡಬೇಕಾಗಿದೆ ಎಂದರು.
ಎಕ್ಸೀಟ್ ಪೋಲನ್ನುನಾನು ಯಾವತ್ತು ನಂಬಿಲ್ಲ, ಮುಂದೆಯೂ ನಂಬಲ್ಲ. ರಾಜ್ಯದಲ್ಲಿನ ಮೂರು ಉಪಚುನಾವಣೆ ಕ್ಷೇತ್ರಗಳಿಗೆ ಶೀಘ್ರದಲ್ಲೇ ಟಿಕೆಟ್ ಫೈನಲ್ ಮಾಡುತ್ತೇವೆ ಎಂದರು.