Thursday, October 17, 2024

Latest Posts

Health Tips: ಒತ್ತಡ ಅನ್ನೋದು ಮನುಷ್ಯನಿಗೆ ಬೇಕೇ ಬೇಕು.. ಆದ್ರೆ ಯಾಕೆ?

- Advertisement -

Health Tips: ಇಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಿಂದ ಬಳಲುತ್ತಿದ್ದಾರೆ. ಕೆಲವರಿಗೆ ಆಫೀಸು ಕೆಲಸದ ಒತ್ತಡ. ಮತ್ತೆ ಕೆಲವರಿಗೆ ಮನೆಗೆಲಸದ ಒತ್ತಡ. ಇನ್ನು ಕೆಲವರಿಗೆ ಜವಾಬ್ದಾರಿ ನಿಭಾಯಿಸುವ ಒತ್ತಡ. ಹೀಗೆ ಹಲವು ಒತ್ತಡಗಳಿದೆ. ಕೆಲವರು ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿದೆ. ಆದರೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಹೇಳುವ ಪ್ರಕಾರ, ಮನುಷ್ಯನಿಗೆ ಒತ್ತಡ ಇರಲೇಬೇಕು. ಹಾಗಾದ್ರೆ ಯಾಕೆ ಒತ್ತಡ ಇರಬೇಕು ಅಂತಾ ತಿಳಿಯೋಣ ಬನ್ನಿ..

ನಮಗಿರುವ ಒತ್ತಡವನ್ನು ನಾವು ಹೇಗೆ ಎದುರಿಸಬೇಕು, ಹೇಗೆ ಬಳಸಿಕೊಳ್ಳಬೇಕು ಅನ್ನುವ ರೀತಿ ಗೊತ್ತಿಲ್ಲದ ಕಾರಣ, ಅದು ನಮಗೆ ಹಿಂಸೆ ಅನ್ನಿಸುತ್ತದೆ. ಉದಾಹರಣೆಗೆ ಮಗು ಶಾಲೆಗೆ ಹೋಗಬೇಕು. ಅದು ಶಾಲೆಗೆ ಹೋದರಷ್ಟೇ ಒಂದು ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಆದರೆ ಶಾಲೆಗೆ ಹೋಗಿ, ವಿದ್ಯಾಭ್ಯಾಸದಲ್ಲಿ ತೊಡಗುವುದು ಒತ್ತಡವಾಗಿರುತ್ತದೆ.

ಆದರೆ ಅದು ಮಗುವಿನ ಮೇಲೆ ಉತ್ತಮ ಪರಿಣಾಮ ಬೀಳುತ್ತಿದೆಯಾ..? ಕೆಟ್ಟ ಪರಿಣಾಮ ಬೀಳುತ್ತಿದೆಯಾ ಎಂದು ನೋಡಿಕೊಳ್ಳುವುದೇ ಒತ್ತಡ. ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡುವುದು ನಮ್ಮ ಕೈಯಲ್ಲಿರುತ್ತದೆ. ಕೆಲವರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಮಾಡುವ ಕೆಲಸ ಒತ್ತಡವಾಗಿ ಪರಿಣಮಿಸುತ್ತದೆ. ಅದು ಏಕೆಂದರೆ, ನಾವು ಆ ಸಮಯದಲ್ಲಿ ಸರಿಯಾಗಿ ಆಹಾರ ಸೇವನೆ ಮಾಡಿರುವುದಿಲ್ಲ.

ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಿ, ಬಾಯಾರಿಕೆಯಾದಾಗ ನೀರು ಕುಡಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಮಾನಸಿಕ ನೆಮ್ಮದಿಯೂ ಸರಿಯಾಗಿರುತ್ತದೆ. ಆಗ ನಮಗೆ ಕೆಲಸದ ಒತ್ತಡ ಹಿಂಸೆ ಎನ್ನಿಸುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss