Thursday, October 17, 2024

Latest Posts

Health Tips: ಬಂಗು ಅಂದ್ರೇನು? ಇದು ಯಾಕೆ ಬರುತ್ತೆ ಗೊತ್ತಾ?

- Advertisement -

Health Tips: ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮಬಾಧೆಯನ್ನು ಬಂಗು ಎನ್ನುತ್ತಾರೆ. ಇದು ಬರೋದು ಯಾಕೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.

ಒಂದು ಸಣ್ಣ ರೀತಿಯಲ್ಲಿ ಮೂಡಿಬರುವ ಬಂಗು, ನಮ್ಮ ಮುಖದ ಇಡೀ ಸೌಂದರ್ಯವನ್ನೇ ಹಾಳುಗೆಡುವುತ್ತದೆ. ನೀವು ಎಷ್ಟೇ ಸುಂದರವಾಗಿದ್ದರೂ, ಬಂಗು ಮೂಡಿದಾಗ, ನಿಮ್ಮ ಸೌಂದರ್ಯವನ್ನು ಅದು ಮರೆಮಾಚುತ್ತದೆ. ಇನ್ನು ಬಂಗು ಬರಲು ಕಾರಣವೇನು ಎಂದರೆ, ನಮ್ಮ ದೇಹದಲ್ಲಿ ರಕ್ತ ಶುದ್ಧವಾಗಿ ಇಲ್ಲದಿದ್ದರೆ, ಮೂತ್ರದೋಷವಿದ್ದರೆ ಬಂಗು ಬರುತ್ತದೆ.

ರಕ್ತದಲ್ಲಿ ಬ್ಯಾಕ್ಟಿರೀಯಾ ಇದ್ದರೆ, ರಕ್ತ ಶುದ್ಧವಾಗಿ ಇಲ್ಲದಿದ್ದಾಗ ಮತ್ತು ಮೂತ್ರ ಶುದ್ಧವಾಗಿ ಇಲ್ಲವಾದಾಗ, ಮೂತ್ರದಲ್ಲಿಯೂ ಸೋಂಕು ಇದ್ದಾಗ, ಬಂಗಿನ ಸಮಸ್ಯೆ ಕಾಣಿಸುತ್ತದೆ. ಯಾರು ಅಗತ್ಯಕ್ಕಿಂತ ಹೆಚ್ಚು ಟೀ ಕಾಫಿ ಕುಡಿಯುವವರು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಮಾಡುವವರಿಗೆ ಬಂಗು ಬರುವ ಸಾಧ್ಯತೆ ಇರುತ್ತದೆ.

ಇನ್ನು ಹೊಟೇಲ್ ತಿನಿಸು ಹೆಚ್ಚು ತಿನ್ನೋದು, ಆರೋಗ್ಯಕರ ಆಹಾರ ಸೇವನೆ ಕಡಿಮೆ ಮಾಡೋದು, ಕಡಿಮೆ ನೀರು ಕುಡಿಯುವ ಅಭ್ಯಾಸವಿದ್ದವರಿಗೆ ಬಂಗು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ, ಕೆಲಸ ಪೂರ್ಣಗೊಳ್ಳಬೇಕು ಅನ್ನುವ ಭರದಲ್ಲಿ ಊಟ, ತಿಂಡಿ, ನೀರನ್ನು ಹೊತ್ತಿಗೆ ಸರಿಯಾಗಿ ಸೇವಿಸದೇ ಇದ್ದರೆ, ಆಗಲೂ ನಿಮ್ಮ ಆರೋಗ್ಯದ ಜೊತೆ, ನಿಮ್ಮ ಸೌಂದರ್ಯವೂ ಹಾಳಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss