Saturday, October 19, 2024

Latest Posts

ಉಪಚುನಾವಣೆ: ಎರಡು ಮೂರು ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ: ಬಿ.ವೈ.ವಿಜಯೇಂದ್ರ

- Advertisement -

Hubli News: ಹುಬ್ಬಳ್ಳಿ: ಉಪ ಚುನಾವಣೆ ಎಲ್ಲಾ ಕ್ಷೇತ್ರಗಳಿಗೂ ಆದಷ್ಟು ಬೇಗ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವದು. ನಾಡಿದ್ದು, ನಾನೂ ಕೂಡ ದೆಹಲಿಗೆ ತೆರಳಿಲಿದ್ದು, ವರಿಷ್ಟರೊಂದಿಗೆ ಚರ್ಚಿಸಿ ಎರಡು ಮೂರು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯಾರಿಗೆ ಟಿಕೇಟ್ ನೀಡಬೇಕೆನ್ನುವುದನ್ನು
ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಿಗ್ಗಾವಿಯಲ್ಲಿ ಎಷ್ಟೇ ಆಕಾಂಕ್ಷಿಗಳಿದ್ದರೂ ಬಸವರಾಜ ಬೊಮ್ಮಾಯಿ ಮನಸ್ಸಿನಲ್ಲಿ ಏನಿದೆ ಮುಖ್ಯ. ಅಲ್ಲಿ ಯಾರಿಗೆ ಟಿಕೇಟ್ ನೀಡಬೇಕೆಂದು ಬೊಮ್ಮಾಯಿ ಅಭಿಪ್ರಾಯ ಪಡೆದು ಮುಂದುವರೆಯಲಾಗುವದು ಎಂದರು.

ಚನ್ನಪಟ್ಟಣದ ಟಿಕೇಟ್ ಆಯ್ಕೆಯಲ್ಲಿ ಹೈಕಮಾಂಡ್ ಕುಮಾರಸ್ವಾಮಿ ಅಭಿಪ್ರಾಯ ಪ್ರಮುಖ ಎಂದಿದೆ. ಹೀಗಾಗಿ ಅಲ್ಲಿ ಯಾರಿಗೆ ಟಿಕೇಟ್ ನೀಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸು ಪಡೆದಿರುವುದುದು ಹುಡುಗಾಟಿಕೆ ವಿಚಾರವಲ್ಲ. ಸರ್ಕಾರದ ಈ ನಿರ್ಧಾರದಿಂದ ಜನತೆಯಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ಉಂಟಾಗಿದೆ. ಎನ್ ಎಐ ತನಿಖೆ ನಡೆಸುತ್ತಿದ್ದರು ಕೇಸ್ ವಾಪಸು ಪಡೆದಿದ್ದಾರೆ . ಇವರು ಎಂತಹ ದುಷ್ಟರು. ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುತ್ತೆವೆ ಎಂದರು.

ಮುಡಾ ಹಗರಣದಲ್ಲಿ ಸಿಎಂಗೆ ಈಗ ಜ್ಞಾನೋದಯವಾಗಿದೆ.

ಮುಡಾ ಹಗರಣದಲ್ಲಿ ಸಿಎಂ ಅವರಿಗೆ ಈಗ ಜ್ಞಾನೋದಯವಾಗಿದೆ. ಸಿಎಂ ಅವರು ಕೆಸರೇ ಗ್ರಾಮದಿಂದ ಕೆಸರು ಹಚ್ಚಿಕೊಂಡಿದ್ದಾರೆ. ರಾಜ್ಯದ ಸಿಎಂ ಪ್ರಕರಣದ ಎ1 ಆರೋಪಿ ಆಗಿದ್ದು ಆದ್ರೂ ಸಹ ಇಲ್ಲಿಯವರೆಗೆ ರಾಜಿನಾಮೆ ನೀಡುತ್ತಿಲ್ಲ. ಸಿಎಂ ಭಂಡತನದಿಂದ ಹೊರಗೆ ಬಂದು ಗೌರಯುತವಾಗಿ ರಾಜಿನಾಮೆ ನೀಡಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸಿಎಂ ಸಿದ್ಧರಾಮಯ್ಯರ ಪಾಪದ ಕೊಡ ತುಂಬಿದ್ದು. ಯಾವತ್ತು ರಾಜಿನಾಮೆ ನೀಡತ್ತಾರೆ?. ಸಿಎಂ ಸಿದ್ದರಾಮಯ್ಯ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ .ಯಾವ ಪುರುಷಾರ್ತಕ್ಕೆ ಸೈಟ್ ವಾಪಸು ನೀಡಿದ್ದಿರಿ ಸಿಎಂ ಅವರೇ. ಮುಡಾ ಸೈಟ್ ಪ್ರಕರಣ ಎಲ್ಲಾ ರೂವಾರಿ ನೀವೆ ಎಂದು ಆರೋಪಿಸಿದರು.

ಕೆ ಎಸ್ ಈಶ್ವರಪ್ಪ ಹೊಸ ಸಂಘಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಏನು ಮಾಡಬೇಕು ಎನ್ನುವದರಲ್ಲಿ ಸ್ವತಂತ್ರರಿದ್ದಾರೆ‌. ಅವರು ಈಗ ಬಿಜೆಪಿ ಪಕ್ಷದಲ್ಲಿ ಇಲ್ಲ. ಸಂಘಟನೆ ಮಾಡುವ ಉತ್ಸಾಹದಲ್ಲಿ ಇದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು.

- Advertisement -

Latest Posts

Don't Miss