Sunday, October 20, 2024

Latest Posts

ಯಾವೆಲ್ಲಾ ಸಮಸ್ಯೆಗಳಿಗೆ ವೈದ್ಯರ ಅವಶ್ಯಕತೆ ಇಲ್ಲ: ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರಿಂದ ವಿವರಣೆ

- Advertisement -

Health Tips: ಗ್ಯಾಸ್ಟಿಕ್ ಆದಾಗ, ಹಲವರು ಬೇರೆ ಬೇರೆ ಮದ್ದುಗಳನ್ನು ತೆಗೆದುಕೊಂಡು, ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಗ್ಯಾಸ್ಚಿಕ್ ಸಮಸ್ಯೆಗೆಲ್ಲ ಮದ್ದು, ವೈದ್ಯರ ಅವಶ್ಯಕತೆ ಇರುವುದಿಲ್ಲ ಅಂತಾರೆ, ಪಾರಂಪರಿಕ ವೈದ್ಯೆ ಡಾ.ಪವಿತ್ರ.

ನಾವು ಹೆಚ್ಚು ಮಸಾಲೆ ಪದಾರ್ಥ ಸೇವಿಸಿದಾಗ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದಾಗ, ಮಲವಿಸರ್ಜನೆ ಸರಿಯಾಗಿ ಆಗದಿದ್ದಾಗ, ಖಾಲಿ ಹೊಟ್ಟೆಯಲ್ಲಿ ಚಾ, ಕಾಫಿ ಸೇವನೆ ಮಾಡಿದಾಗ, ಹೀಗೆ ಹಲವು ಕಾರಣಗಳಿಂದ ನಮಗೆ ಗ್ಯಾಸ್ಟಿಕ್ ಸಮಸ್ಯೆ ಬರುತ್ತದೆ. ಹಾಗಾಗಿ ನಾವು ಈ ಎಲ್ಲ ಚಟಗಳನ್ನು ಬಿಟ್ಟರೆ, ಗ್ಯಾಸ್ಚಿಕ್ ಸಮಸ್ಯೆ ತಾನಾಗಿಯೇ ಸರಿಯಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ, ಉಗುರು ಬೆಚ್ಚಗಿನ ನೀರು ಕುಡಿಯುವುದು. ಆರೋಗ್ಯಕರ ಆಹಾರ ಸೇವನೆ ಮಾಡುವುದು, ನಾರಿನಂಶ ಇರುವ ಪದಾರ್ಥ ತಿನ್ನುವುದು, ತಂಪಾದ ಆಹಾರ, ಪೇಯ ಸೇವನೆ ಮಾಡುವುದು, ಆದಷ್ಟು ನೀರು ಕುಡಿಯುವುದು ಮಾಡಿದಾಗ, ನಾವು ಗ್ಯಾಸ್ಟಿಕ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಇನ್ನು ಉಪವಾಸ ಮಾಡುವಾಗಲೂ, ಕೆಲವು ಆಹಾರ ಸೇವನೆ, ನೀರಿನ ಸೇವನೆ ಬಗ್ಗೆ ನಾವು ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಬೇಕು. ಏಕೆಂದರೆ, ನಿದ್ರಾಹೀನತೆ ಸಮಸ್ಯೆಯಿಂದಲೂ ಗ್ಯಾಸ್ಟಿಕ್ ಸಮಸ್ಯೆ ಬರುವುದು ಹೆಚ್ಚು. ಏಕೆಂದರೆ, ನಿದ್ರೆಗೆಟ್ಟಷ್ಟು ಹೊತ್ತು ನಮಗೆ ಹಸಿವಾಗುತ್ತದೆ. ಆದರೆ ಆ ಹೊತ್ತಿನಲ್ಲಿ ಏನನ್ನೂ ಸೇವಿಸಲಾಗದಿದ್ದಾಗ, ನಮ್ಮ ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡು ಗ್ಯಾಸ್ಟಿಕ್ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡಿ, ಸರಿಯಾದ ಹೊತ್ತಿಗೆ ನಿದ್ರಿಸಬೇಕು ಅಂತಾರೆ ವೈದ್ಯರು.

ಇನ್ನು ನಿಮಗೆ ಗ್ಯಾಸ್ಟಿಕ್ ಸಮಸ್ಯೆಯಾದ ದಿನ ನೀವು ಗಟ್ಟಿ ಆಹಾರವನ್ನನು ಸಂಪೂರ್ಣ ತ್‌ಯಜಿಸಿ, ಗಂಜಿ ಸೇವನೆ ಮಾಡಿ. ಮಜ್ಜಿಗೆ, ಎಳನೀರಿನ ಸೇವನೆ ಮಾಡಿ. ದೇಹಕ್ಕೆ ತಂಪಾದ ಆಹಾರ ಸಿಗುವಂತೆ ಮಾಡಬೇಕು. ಮಸಾಲೆ ಪದಾರ್ಥ, ರೊಟ್ಟಿ, ಚಪಾತಿ, ಖಾರ ತಿಂಡಿ, ಟೀ- ಕಾಫಿ ಸೇವನೆ ಮಾಡಬೇಡಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss