Tuesday, October 22, 2024

Latest Posts

ನಾಯಿ ಓಡಿಸಲು ಹೋಗಿ ತಾನೇ ಆಯತಪ್ಪಿ ಸಾವನ್ನಪ್ಪಿದ ಯುವಕ

- Advertisement -

National News: ಸಾವು ಸಮೀಪಿಸಿದಾಗ, ನಮ್ಮ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಎಷ್ಟೇ ಬುದ್ಧಿವಂತನಾಗಿದ್ದರೂ, ಅವನಿಗೆ ಸಾವು ನೋವು ಬರಬೇಕು ಎಂದು ಬರೆದಿದ್ದರೆ, ಆತ ಆ ಕ್ಷಣ ಮೂರ್ಖನಾಗಿಬಿಡುತ್ತಾನೆ. ಕೆಲವೊಮ್ಮೆ ಅಧಿಕಪ್ರಸಂಗತನವೂ ನಮಗೆ ಸಾವು ತರುತ್ತದೆ. ಅದೇ ರೀತಿಯ ಘಟನೆಯೊಂದು, ನಡೆದಿದ್ದು, ಯುವಕನೋರ್ವ ಗೆಳೆಯನ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ. ಆ ಪಾರ್ಟಿ ನಡೆಯುತ್ತಿದ್ದ ಹೊಟೇಲ್‌ಗೆ ನಾಯಿಯೊಂದು ಬಂದಿದ್ದು, ಆ ನಾಯಿ ಓಡಿಸಲು ಹೋಗಿ, ಈ ಯುವಕ ಆಯತಪ್ಪಿ ಹೊಟೇಲ್ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.

ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು 22 ವರ್ಷದ ಉದಯ್ ಕುಮಾರ್ ಮೃತ ದುರ್ದೈವಿಯಾಗಿದ್ದಾನೆ. ಇಲ್ಲಿನ ವಿವಿ ಪ್ರೈಡ್ ಹೊಟೇಲ್‌ನಲ್ಲಿ ಬರ್ತ್‌ಡೇ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಗೆ ಉದಯ್ ಕುಮಾರ್ ತನ್ನ ಗೆಳೆಯರೊಂದಿಗೆ ಹೋಗಿದ್ದಾನೆ. ಆದರೆ ಆ ಪಾರ್ಟಿ ಹಾಲ್‌ಗೆ ನಾಯಿ ಬಂದ ಕಾರಣ, ಆ ನಾಯಿಯನ್ನು ಓಡಿಸಲು ಹೋದ ಉದಯ್, ಮೂರನೇ ಮಹಡಿಯಿಂದ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ.

ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಸಾಕ್ಷಿಯನ್ನು ನೋಡಿರುವ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

- Advertisement -

Latest Posts

Don't Miss