ಹೀಗೆಲ್ಲಾ ಮಾಡಿದ್ರೆ ಕಪಾಳಕ್ಕೆ ಬಾರಿಸಿ: ಪಾಪರಾಜಿಗಳ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ಆಕ್ರೋಶ

Bollywood News: ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ರೀಲ್ಸ್ ನೋಡಿರುತ್ತೀರಿ. ಆದರಲ್ಲಿ ಪಾಪರಾಜಿಗಳು ಯಾವ ರೀತಿ ಸೆಲೆಬ್ರಿಟಿಗಳ ಬಳಿ ಮಾತನಾಡುತ್ತಾರೆ, ನಟಿಯರು ಹಿಂದಿರುಗಿ ಹೋಗವಾಗ ಎಷ್ಟು ಅಸಭ್ಯವಾಗಿ ಅವರ ಹಿಪ್ ಶಾರ್ಟ್ಸ್‌ ತೆಗೆದುಕ“ಳ್ಳುತ್ತಾರೆ ಅಂತಾ ನೀವು ನೋಡಿರುತ್ತೀರಿ.

ನಟಿ ಜಾನ್ಹವಿ ಕಪೂರ್ ಸೇರಿ ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪಾಪರಾಜಿಗಳ ನಡೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್ ವೇದಿಕೆಯಲ್ಲಿ ಮಾತನಾಡುವ ವೇಳೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್, ಈ 1 ಟ್ರೆಂಡ್ ಶುರುವಾಗಿ, ಗಾಡಿಯಿಂದ ಇಳಿಯುವಾಗ ಮತ್ತು ಗಾಡಿಯಲ್ಲಿ ಹತತಿ ಕೂರುವಾಗ, ನಟಿಯರ 1 ಹಿಪ್ ಶಾರ್ಟ್ಸ್ ತೆಗೆಯುತ್ತಾರೆ. ಮತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಇದು ಯಾರು ಎಂದು ಗುರುತಿಸಿ ಎಂದು ಹೇಳುತ್ತಾರೆ.

ಇವರು ಲೈಕ್ಸ್, ಶೇರ್, ಕಾಮೆಂಟ್ಸ್‌ಗಾಗಿ ಈ ರೀತಿ ಮಾಡುತ್ತಾರೆ. ಆದರೆ ಇದರಿಂದ ಅದೆಷ್ಟೋ ನಟಿಯರಿಗೆ ಮುಜುಗರವಾಗುತ್ತದೆ. ಮಹೇಶ್ ಮಾಂಜ್ರೇಕರ್ ಅವರ ಮಗಳು ಸೇರಿ ಹಲವು ನಟಿಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನಿಮ್ಮ ಜತೆ ಯಾವುದಾದರೂ ಪಾಾಪರಾಜಿ ಈ ರೀತಿ ಮಾಡಿದ್ರೆ, ನಿಮ್ಮ ಹಿಂದಿನಿಂದ ಹಿಪ್ ಶಾರ್ಟ್ ತೆಗೆಯುತ್ತಿದ್ದಾರೆಂದು ತಿಳಿದರೆ, ಕಪಾಳಕ್ಕೆ ಬಾರಿಸಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

About The Author