Friday, November 28, 2025

Latest Posts

ನಟ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ, ಪತ್ರ ಬರೆದ ಪ್ರಧಾನಿ ಮೋದಿ

- Advertisement -

Sandalwood News: ನಟ ಸುದೀಪ್‌ ತಾಯಿ ಒಂದು ವಾರದ ಹಿಂದಷ್ಟೇ ನಿಧನರಾಗಿದ್ದು, ಪ್ರಧಾನಿ ಮೋದಿ ಇಂದು ಸಂತಾಪ ಸೂಚಿಸಿ, ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತೀಯನ್ನು ಸುದೀಪ್ ಹಂಚಿಕೊಂಡಿದ್ದು, ನಿಮ್ಮ ಸಾಂತ್ವಾನ ನನ್ನ ಹೃದಯ ತಟ್ಟಿದೆ ಎಂದು ಹೇಳಿದ್ದಾರೆ.

ನಿಮ್ಮ ತಾಯಿಯ ನಿಧನದ ಸುದ್ದಿಯಿಂದ ನನಗೆ ತೀವ್ರ ನೋವಾಗಿದೆ. ತಾಯಿ ಅಗಲಿಕೆಯಿಂದ ಆದ ನಷ್ಟ ತುಂಬಲು ಸಾಧ್ಯವಿಲ್ಲ. ಅವರ ಜೊತೆ ಇದ್ದ ಬಾಂಧವ್ಯ ಎಂಥದ್ದು ಎಂದು ನಿಮ್ಮ ದುಃಖ ನೋಡಿ ತಿಳಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಮೋದಿ ಪತ್ರಕ್ಕೆ ಕಿಚ್ಚ ಧನ್ಯವಾದ ಸೂಚಿಸಿದ್ದಾರೆ.

ಕಳೆದ ಶನಿವಾರದಂದು ಸುದೀಪ್ ಅವರ ಸರೋಜ ಅವರು ಅನಾರೋಗ್ಯ ಕಾರಣದಿಂದ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಅವರು ಸಾವನ್ನಪ್ಪಿದ್ದರು. ಬಿಗ್‌ಬಾಸ್ ನಡೆಸಿಕೊಡಬೇಕಾದ ಕಾರಣ, ಸುದೀಪ್ ಕೊನೆ ಕ್ಷಣದಲ್ಲಿ ಅಮ್ಮನನ್ನು ಮಾತನಾಡಿಸಲು ಆಗಿರಲಿಲ್ಲ. ಸುದೀಪ್ ಶೂಟಿಂಗ್ ಮುಗಿಸಿ ಹೋಗುವಾಗ, ಅವರ ತಾಯಿಯ ಸ್ಥಿತಿ ಚಿಂತಾಜನಕವಾಗಿತ್ತು. ಮರರುದಿನ ಮುಂಜಾನೆ ಅವರು ನಿಧನರಾದರು.

- Advertisement -

Latest Posts

Don't Miss