Hyderabad: ಬೀದಿಬದಿ ಮಾರಾಟ ಮಾಡುತ್ತಿದ್ದ ಮೊಮೋಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 20 ಜನ ಅಸ್ವಸ್ಥಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ಬಂಜಾರ ಹೀಲ್ಸ್ ಫುಡ್ ಸ್ಟೇಶನ್ ಬಳಿ ಈ ಘಟನೆ ನಡೆದಿದ್ದು, ದೆಹಲಿ ಮೊಮೋಸ್ ಎಂಬ ಹೆಸರಿನ ಅಂಗಡಿಯಲ್ಲಿ ಈ ಮಹಿಳೆ ಸೇರಿ, ಹಲವರು ಮೊಮೋಸ್ ತಿಂದಿದ್ದಾರೆ. ಆದರೆ ಮಹಿಳೆ ಹೆಚ್ಚಾಗಿ ಮೊಮೋಸ್ ತಿಂದ ಕಾರಣ, ಆಕೆಗೆ ಹೊಟ್ಟೆ ನೋವು ಶುರುವಾಗಿದೆ. ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದರೂ ಕೂಡ, ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾರೆ.
ಇನ್ನುಳಿದ 20 ಜನ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದಾಗ, ಬಂಜಾರ್ ಹೀಲ್ಸ್‌ನಲ್ಲಿ ಫುಡ್ ಸ್ಟೇಶನ್‌ನಲ್ಲಿ ಹಲವರು ಪರವಾನಗಿ ಪಡೆಯದೇ, ಅಂಗಡಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಅಂಥ ಹೊಟೇಲ್‌ಗಳಲ್ಲಿ ದೆಹಲಿ ಮೊಮೋಸ್ ಕೂಡ ಒಂದು. ಹಾಗಾಗಿ ಅಲ್ಲಿರುವ ಅಂಗಡಿಗಳಲ್ಲಿ ಆಹಾರ ಮಾರಾಟ ಮಾಡುವುದನ್ನು ನಿಲ್ಲಿಸಲು ಆದೇಶ ನೀಡಲಾಗಿದೆ.