Monday, December 23, 2024

Latest Posts

ನೀವು ಚಿಪ್ಸ್ ಉದ್ಯಮ ಶುರು ಮಾಡುವುದಿದ್ದರೆ ಇಲ್ಲಿದೆ ಕೆಲ ಟಿಪ್ಸ್..!

- Advertisement -

ಚಿಪ್ಸ್, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ತಿನ್ನೋ ತಿಂಡಿ ಅಂದ್ರೆ ಚಿಪ್ಸ್. ಒಮ್ಮೆ ತಿಂದ್ರೆ ತಿಂತಾನೇ ಇರ್ಬೇಕು ಅನ್ನೋ ಟೇಸ್ಟ್ ಹೊಂದಿದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ಆಲೂ ಚಿಪ್ಸ್ ಅಂದ್ರೆ ಎಲ್ಲರ ಫೇವರಿಟ್. ನೀವು ಆಲೂ ಚಿಪ್ಸ್ ಮಾಡೋದ್ರಲ್ಲಿ ನಿಪುಣರಾಗಿದ್ರೆ, ಪ್ರೊಫೆಶನಲ್‌ ಆಗಿ ಚಿಪ್ಸ್ ಉದ್ಯಮ ಆರಂಭಿಸಲು ಕೆಲ ಐಡಿಯಾಗಳು ಇಲ್ಲಿದೆ ನೋಡಿ.

ಆಲೂ ಚಿಪ್ಸ್ ಮಾಡೋಕ್ಕೆ ಆಲೂ, ಉಪ್ಪು, ವಿವಿಧ ತರಹದ ಮಸಾಲೆ, ಖಾರದ ಪುಡಿ ಇತ್ಯಾದಿ ಬೇಕಾಗುತ್ತದೆ. ಇದರೊಂದಿಗೆ ಕೆಲ ಮಷಿನ್, ಆಲೂ ಕಟರ್ ಅವಶ್ಯಕತೆ ಇರುತ್ತದೆ.

ಮೊದಲನೆಯದಾಗಿ ಆಲೂ ಪೀಲರ್ ಮಷಿನ್ ತೆಗೆದುಕೊಳ್ಳಬೇಕಾಗುತ್ತದೆ. ಈ ಮಷಿನ್‌ನಲ್ಲಿ ಆಲೂ ಮತ್ತು ನೀರು ಹಾಕಿ ಮಷಿನ್ ಆನ್ ಮಾಡಿದ್ರೆ, ಆಲೂಗಡ್ಡೆಯ ಮೇಲಿನ ಸಿಪ್ಪೆ, ಮಣ್ಣು ಎಲ್ಲ ಕ್ಲೀನ್ ಆಗಿ ಸಿಪ್ಪೆ ರಹಿತ ಕ್ಲೀನ್ ಆಲೂ ಸಿಗುತ್ತದೆ.

ಈ ಆಲೂವನ್ನ ಚಿಪ್ಸ್ ಲೇಯರ್ ಮಾಡಿಕೊಳ್ಳಲು ಆಲೂ ಸ್ಲೈಸರ್ ಮಷಿನ್ ಬೇಕಾಗುತ್ತದೆ. ಈ ಮಷಿನ್‌ನಿಂದ ಸ್ವಲ್ಪ ಸಮಯದಲ್ಲೇ ಆಲೂವನ್ನು ಚಿಕ್ಕ ಚಕ್ಕ ಸ್ಲೈಸ್ ಮಾಡಿಕೊಳ್ಳಬಹುದು. ಸಮಯ ಹಿಡಿದರೂ ನಡೆಯುತ್ತದೆ ಅಂದರೆ, ಆಲೂ ಕಟರ್‌ನಲ್ಲೇ ಆಲೂವನ್ನ ಸ್ಲೈಸ್ ಮಾಡಿಕೊಳ್ಳಬಹುದು.

ಇನ್ನು ಮೂರನೇಯದಾಗಿ ಆಲೂವಿನಲ್ಲಿರುವ ನೀರನ್ನ ಪೂರ್ತಿ ಪ್ರಮಾಣದಲ್ಲಿ ಒಣಗಿಸಲು ಡ್ರೈಯರ್ ಮಷಿನ್ ಬಳಸಬಹುದು.

ಈಗ ಚಿಪ್ಸ್ ಕರಿಯಲು ನಾರ್ಮಲ್ ಪ್ಯಾನ್ ಬಳಸಿ ಇಲ್ಲದೇ ಮಷಿನ್ ಕಡಾಯಿ ಬಳಸಬಹುದು. ಚಿಪ್ಸ್ ರೆಡಿಯಾದ ಬಳಿಕ ಅದರಲ್ಲಿ ನಾನಾ ತರಹದ ಮಸಾಲೆ ಬಳಸಿ, ಚಿಪ್ಸ್ ಪ್ಯಾಕೆಟ್ ತಯಾರಿಸಿ. ನಿಮ್ಮ ಬ್ರ್ಯಾಂಡ್ ನೇಮ್ ರೆಜಿಸ್ಟರ್ ಮಾಡಿಸಿ, ಲೈಸೆನ್ಸ್ ಪಡೆದು ಈ ಪ್ಯಾಕೇಟ್‌ಗೆ ಬ್ರ್ಯಾಂಡ್ ನೇಮ್ ಬಳಸಿ, ಪ್ಯಾಕಿಂಗ್ ಮಷಿನ್ ಸಹಾಯದಿಂದ ಪ್ಯಾಕ್ ಮಾಡಿ ಮಾರಬಹುದು.

ಈ ಮಷಿನ್‌ಗಳನ್ನ ನಿಮ್ಮ ಮನೆಯಲ್ಲಿ ಚಿಕ್ಕ ಕೋಣೆಯಲ್ಲಿಟ್ಟು ಬಳಸಬಹುದು. ಇನ್ನು ಮಷಿನ್‌ಗಳ ಬೆಲೆ ನೋಡೋದಾದ್ರೆ, ಆಲೂ ಪೀಲರ್ ಮಷಿನ್ ಬೆಲೆ 15 ಸಾವಿರ ರೂಪಾಯಿ ಇರುತ್ತದೆ. ಸ್ಲೈಸರ್ ಮಷಿನ್ ತೆಗೆದುಕೊಳ್ಳುವುದಿದ್ದರೆ 20 ಸಾವಿರ ರೂಪಾಯಿಯಾಗುತ್ತದೆ. ಡ್ರೈಯರ್ ಮಷಿನ್‌ಗೆ 22 ಸಾವಿರ ರೂಪಾಯಿಯಾಗುತ್ತದೆ. ಇಲೆಕ್ಟ್ರಿಕಲ್ ಕಡಾಯಿಗೆ 11 ಸಾವಿರ ರೂಪಾಯಿಯಾಗುತ್ತದೆ. ಮತ್ತು ಪ್ಯಾಕಿಂಗ್ ಮಷಿನ್ 2ರಿಂದ 3 ಸಾವಿರ ರೂಪಾಯಿಗೆ ಸಿಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss