Thursday, December 26, 2024

Latest Posts

ಸಿದ್ದರಾಮಯ್ಯ ಸರ್ಕಾರ ವಕ್ಫಗೆ ಕುಮ್ಮಕ್ಕು ನೀಡಿದೆ: ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ನಮ್ಮ ಪಕ್ಷದ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ ವಕ್ಪ ವಿರುದ್ದ ದ್ವನಿ ಎತ್ತಿದ್ದಾರೆ. ಯತ್ನಾಳ ಧರಣಿ ಆರಂಭ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿ ಇವತ್ತು ಕೇಂದ್ರದಿಂದ ಕಮೀಟಿ ಬರ್ತಿದೆ. ಇವತ್ತು ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದೆ. ಸಿದ್ದರಾಮಯ್ಯ ಸರ್ಕಾರ ವಕ್ಫಗೆ ಕುಮ್ಮಕ್ಕು ನೀಡಿದೆ. ಇದನ್ನು ಹೇಳೋಕೆ ಇವತ್ತು ಅವಕಾಶ ಸಿಕ್ಕಿದೆ. ಇದು ನಿಮ್ಕ ಹೋರಾಟದ ಫಲ. ನಿಮಗೆ ಅಭಿನಂದನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ನಿಮ್ಮ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ರೈತರಿಗೆ ನ್ಯಾಯ ಸಿಗತ್ತೆ. ವಕ್ಫ ತಿದ್ದುಪಡಿ ಮಾಡೋಕೆ ಕೇಂದ್ರ ರೆಡಿಯಾಗಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಆಗಬಹುದು. ಸಿಎಮ್ ಲೋಕಾಯುಕ್ತ ವಿಚಾರಣೆ ಬಗ್ಗೆ ಕಾಮೆಂಟ್ ಮಾಡಲ್ಲ. ಆರೋಪಕ್ಕೆ ಒಳಗಾದವರು ವಿಚಾರಣೆ ಒಳಗಾಗೋದು ಸಹಜ. ಸಿದ್ದರಾಮಯ್ಯ ಕೂಡಾ ಕಾನೂನಿಗೆ ತಲೆಬಾಗಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

- Advertisement -

Latest Posts

Don't Miss