Friday, November 8, 2024

Latest Posts

ಅಧಿಕಾರಕ್ಕೆ ಬಂದ್ರೆ ಮಸೀದಿಗಳ ಧ್ವನಿವರ್ಧಕ ತೆಗೆದು ಹಾಕುತ್ತೇನೆ: ರಾಜ್ ಠಾಕ್ರೆ

- Advertisement -

Mumbai: ಮಹಾರಾಷ್ಟ್ರದಲ್ಲಿ ನವೆಂಬರ್‌ 20ಕ್ಕೆ ಚುನಾವಣೆ ನಡೆಲಿದ್ದು, 23ಕ್ಕೆ ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯ ಪ್ರಚಾರದ ವೇಳೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಮಾತನಾಡಿದ್ದು, ನಾವು ಅಧಿಕಾರಕ್ಕೆ ಬಂದ್ರೆ ಮಸೀದಿಗಳ ಧ್ವನಿವರ್ಧಕ ತೆಗೆದು ಹಾಕುತ್ತೇವೆ ಎಂದಿದ್ದಾರೆ.

ರಾಜ್ ಠಾಕ್ರೆ ಈ ಬಗ್ಗೆ ಈ ಮೊದಲೇ ಪ್ರಸ್ತಾಪಿಸಿದ್ದರು. ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸಿಎಂ ಆಗಿದ್ದಾಗ, ಹಲವು ಮಸೀದಿಗಳ ಧ್ವನಿವರ್ಧಕ ತೆಗೆಸಿದ್ದ ಕಾರಣಕ್ಕೆ, ಅವರ ಹಲವು ಬೆಂಬಲಿಗರ ವಿರುದ್ಧ 16 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು.

ಇನ್ನು ಪ್ರಚಾರದ ವೇಳೆ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ ಠಾಕ್ರೆ, ಸಂತ ಶರದ್ ಪವಾರ್ ಎಂದಿದ್ದಾರೆ. ಅಲ್ಲದೇ, ಉದ್ಧವ್ ಠಾಕ್ರೆ ಶಿವಾಜಿ ಮಹಾರಾಜರಿಗಾಗಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದರ ಬಗ್ಗೆ ಮಾತನಾಡಿದ ರಾಜ್ ಠಾಕ್ರೆ, ದೇವಸ್ಥಾನದಲ್ಲಿ ಪ್ರತಿಮೆಗಳು ಸಾಕಾಗುವುದಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ಬಾರಿ ನಮ್ಮ ಪಕ್ಷ ಯಾವುದೇ ಮೈತ್ರಿ ಇಲ್ಲದೇ, ಸ್ಪರ್ಧಿಸಲಿದ್ದಾರೆಂದು ಹೇಳಿದ್ದಾರೆ.

- Advertisement -

Latest Posts

Don't Miss