Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಬಡವರ ಸಂಜೀವಿನಿ ಎಂದು ಹೆಸರು ಗಳಿಸಿರುವ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರೀ ಉತ್ತರ ಕರ್ನಾಟಕದ ಜನರಷ್ಟೇ ಅಲ್ಲ, ಉತ್ತರಕನ್ನಡದ ಜನರೂ ಬರುತ್ತಾರೆ.
ಆದರೆ ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ದುಡ್ಡು ಕೊಟ್ಟರಷ್ಟೇ ಒಳ್ಳೆಯ ಚಿಕಿತ್ಸೆ ಕೊಡಲಾಗುತ್ತದೆ. ಇಲ್ಲಿನ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ, ಚಿಕಿತ್ಸೆ ಪಡೆಯಲು ಬಂದ ರೋಗಿಯ ಬಳಿ 500 ರಿಂದ 5000 ವರೆಗೂ ಚಿಕಿತ್ಸಾ ವೆಚ್ಚ ಕೇಳುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಚಿಕಿತ್ಸೆ ಪಡೆದ ಬಳಿಕ, ಡಿಸ್ಚಾರ್ಜ್ ಆಗಲೂ ಲಂಚ ನೀಡಲೇಬೇಕಾಗಿದೆ .
ಇನ್ನು ಇಲ್ಲಿನ ಆಸ್ಪತ್ರೆಯಲ್ಲಿ ಎಲ್ಲ ವಿಭಾಗದ ಸಿಬ್ಬಂದಿ ಅದೆಷ್ಟು ರಾಜಾರೋಷವಾಗಿ ಹಣ ಪೀಕುತ್ತಾರೆ ಎಂದರೆ, ಅವರಿಗೆ ಯಾವುದೇ ಅಧಿಕಾರಿಗಳ ಭಯವಿಲ್ಲ. ಯಾಕಂದ್ರೆ ಮೇಲಾಧಿಕಾರಿಗಳಿಗೆ ಯಾವುದೇ ವಿಷಯ ಗೊತ್ತಿಲ್ಲ ಅಂತೇನಿಲ್ಲ. ಎಲ್ಲರಿಗೂ ಎಲ್ಲ ವಿಷಯ ಗೊತ್ತಿದೆ. ಆದರೂ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ.
ಇಲ್ಲಿನ ಚಿಕಿತ್ಸೆ ಬಗ್ಗೆ ಮಾತನಾಡಬೇಕು ಅಂದ್ರೆ, ಈ ಹಿಂದೆ ಇವರ ವಿರುದ್ಧ ಇರುವ ಕೇಸ್ಗಳ ಲೀಸ್ಟ್ ತೆಗೆದು ನೋಡಬೇಕು. ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ, ರೋಗಿಗಳಿಗೆ ಮಲಗಲು ವ್ಯವಸ್ಥೆ ಇಲ್ಲ ಅನ್ನೋ ಆರೋಪಗಳಂತೂ ಸರ್ವೇಸಾಮಾನ್ಯ. ಲಂಚ ತೆಗೆದುಕೊಳ್ಳುತ್ತಾರೆ ಅನ್ನೋ ಆರೋಪ ಹಲವು ವರ್ಷಗಳಿಂದ ಇದ್ದರೂ, ಇವರ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋದು ಮಾತ್ರ ವಿಪರ್ಯಾಸದ ಸಂಗತಿ.