Tuesday, December 10, 2024

Latest Posts

Bigg Boss: ಹಳೇ ಸುದ್ದಿ ಕೆದಕಿ ಧನರಾಜ್ ವಿರುದ್ಧ ಹರಿಹಾಯ್ದ ಮೋಕ್ಷಿತಾ

- Advertisement -

Bigg Boss News: ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ತನ್ನನ್ನು ಆಟದಿಂದ ಹೊರಗಿಟ್ಟ ಕಾರಣ ಬಿಗ್‌ಬಾಸ್ ಸ್ಪರ್ಧಿ ಮೋಕ್ಷಿತಾ, ಧನರಾಜ್ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಸಿಟ್ಟಾದ ಮೋಕ್ಷಿತಾ, ಇದು ಪಾರ್ಷಿಯಾಲಿಟಿ ಅನ್ನೋ ರೀತಿಯಲ್ಲಿ ಮಾತನಾಡಿ, ನೀವು ಕ್ಯಾಪ್ಟನ್ ಆಗಲು ಅರ್‌ಹರೇ ಅಲ್ಲವೆಂದು ಧನರಾಜ್‌ ಮೇಲೆ ಕೂಗಾಡಿದ್ದಾರೆ.

ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ರೊಚ್ಚಿಗೆದ್ದ ಮೋಕ್ಷಿತಾ, ಸ್ಪರ್ಧಿ ಧನರಾಜ್ ವಿರುದ್ಧ ಹರಿಹಾಯ್ದಿದ್ದಾರೆ. ಹಳೆ ವಿಷಯಗಳನ್ನೆಲ್ಲ ಕೆದಕಿ, ಜಗಳವಾಡಿದ್ದಾರೆ. ಧನರಾಜ್‌ ಸೈಲೆಂಟ್ ಆಗಿರುತ್ತಾರೆ. ಕೆಲವರನ್ನಷ್ಟೇ ನಾಮಿನೇಷನ್‌ಗೆ ಆಯ್ಕೆ ಮಾಡುತ್ತಾರೆ. ಅಲ್ಲದೇ, ಅವರ ಮಾತಿನಲ್ಲಿ ಯಾವುದೇ ತೂಕವಿಲ್ಲವೆಂದು ಮೋಕ್ಷಿತಾ ಆರೋಪಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಗೌತಮಿ ಅವರನ್ನು ಎಬ್ಬಿಸಲು ಧನರಾಜ್ ದಿಂಬು ತೆಗೆದುಕೊಂಡು ತಮಾಷೆಗೆ ಹೊಡೆದಿದ್ದರು. ಅದು ಗೌತಮಿಯವರ ಹಿಂಭಾಗಕ್ಕೆ ಬಿದ್ದಿತ್ತು. ಈ ಕಾರಣಕ್ಕೆ ಗೌತಮಿ ಸಿಟ್ಟಾಗಿದ್ದರು. ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ ಮೋಕ್ಷಿತಾ, ಹೆಣ್ಣಿಗೆ ದಿಂಬಿನಿಂದ ಆ ಭಾಗಕ್ಕೆ ಹೊಡೆಯುತ್ತೀರಲ್ಲ, ನಾಚಿಕೆಯಾಗೋದಿಲ್ವಾ.? ನಿಮ್ಮಂಥವರು ಹೇಗೆ ಕ್ಯಾಪ್ಟನ್ ಆಗ್ತೀರಿ ಎಂದು ಬೈದಿದ್ದಾರೆ.

- Advertisement -

Latest Posts

Don't Miss