Tuesday, December 3, 2024

Latest Posts

Financial Tips: ಆರ್ಥಿಕವಾಗಿ ಸಧೃಡರಾಗಲು ಇಲ್ಲಿದೆ ಉಪಾಯ

- Advertisement -

Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ ಮನುಷ್ಯ ದುಡಿದು ದುಡ್ಡು ಮಾಡಿ ಇಡುವುದು ತುಂಬಾ ಮುಖ್ಯ. ಹಾಗಾಗಿ ನಾವಿಂದು ಆರ್ಥಿಕವಾಗಿ ಸಧೃಡವಾಗಲು ಏನು ಬೇಕು ಎಂಬ ಬಗ್ಗೆ ಹೇಳಲಿದ್ದೇವೆ.

ನೀವು ದುಡಿದ ದುಡ್ಡಿನಲ್ಲಿ ಶೇ.50 ಹಣವನ್ನು ನೀವು ಕೂಡಿಡಬೇಕು. ಅಂದ್ರೆ, ಅದನ್ನು ಉತ್ತಮ ರೀತಿಯಲ್ಲಿ ಇನ್ವೆಸ್ಟ್ ಮಾಡಬೇಕು. ಹಣವನ್ನು ಮನೆಯಲ್ಲೇ ಇಟ್ಟರೆ, ಅಥವಾ ಬ್ಯಾಂಕ್‌ನಲ್ಲೇ ಇಟ್ಟರೆ ಅದು ಇದ್ದ ಹಾಗೆ ಇರುತ್ತದೆ. ಆದರೆ ನೀವು ಅದನ್ನು ಎಫ್‌ಡಿ, ಮ್ಯೂಚ್ಯೂವಲ್ ಫಂಡ್ ಸೇರಿ, ಇನ್ನು ಬೇರೆ ಬೇರೆ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದರಿಂದ ಹಣದಲ್ಲಿ ಏರಿಕೆಯಾಗುತ್ತದೆ.

ಉಳಿದ ಶೇ.50ರಲ್ಲಿ ಶೇ.25ರಷ್ಟು ನಿಮ್ಮ ಅವಶ್ಯಕತ ಖರ್ಚುಗಳಿಗೆ ಉಪಯೋಗಿಸಿ. ಅಂದ್ರೆ, ಕಿರಾಣಿ ಅಂಗಡಿ, ತರಕಾರಿ ಖರ್ಚು, ಬಾಡಿಗೆ ಹೀಗೆ ಪ್ರತಿದಿನದ ಖರ್ಚಿಗೆ ಬಳಸಿ. ಇನ್ನುಳಿದ ಶೇ.25ರಷ್ಟು ಹಣದಲ್ಲಿ ಕೊಂಚ ನಿಮ್ಮ ಜೀವನದ ಖುಷಿಗಾಗಿ ಇನ್ನುಳಿದ ಸಣ್ಣ ಪ್ರಮಾಣದ ಹಣವನ್ನು ದಾನಕ್ಕಾಗಿ ಮೀಸಲಿಡಿ. ಬಡವರಿಗೆ, ಅನಾಥರಿಗೆ ದಾನ ಮಾಡಿ. ಇದು ದುಡ್ಡು ಉಳಿಸುವ ವಿಧಾನ.

ಇನ್ನು ನೀವು ದುಡ್ಡನ್ನು ಉಳಿತಾಯ ಮಾಡುವಾಗ ಎಲ್ಲಿಯೂ ಮೋಸ ಹೋಗುತ್ತಿಲ್ಲವೆಂಬುದನ್ನು ಅರಿತುಕೊಂಡಿರಬೇಕು. ಕೆಲವರು ಚೀಟಿಗೆ ದುಡ್ಡು ಹಾಕಿ, ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ನೀವು ಉಳಿತಾಯ ಮಾಡುವ ಹಣ ಎಷ್ಟು ಸೇಫ್ ಎಂಬುದು ನಿಮಗೆ ಗೊತ್ತಿರಬೇಕು. ಏಕೆಂದರೆ, ಅದು ನಿಮ್ಮ ಜವಾಬ್ದಾರಿ.

ದುಡ್ಡು ಉಳಿಸುವ ಯೋಗ್ಯತೆ ಇದ್ದರೂ ಹಲವರು ಆ ಅವಕಾಶ ಕಳೆದುಕೊಳ್ಳಲು ಕಾರಣವೇನು ಎಂದರೆ, ಅನಾವಶ್ಯಕ ವಸ್ತುಗಳನ್ನು ಖರೀದಿಸುವ ಶೋಕಿ ಹೊಂದಿರುವುದು. ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲ ಖರೀದಿಸುವುದು. ಇಂಥ ತಪ್ಪಿನಿಂದಲೇ, ನಾವು ಲಕ್ಷಾಂತರ ರೂಪಾಯಿ ಸುಮ್ಮನೆ ಹಾಳು ಮಾಡಿರುತ್ತೇವೆ. ಹಾಗಾಗಿ ಯೋಚಿಸಿ, ಅವಶ್ಯಕತೆ ಇರುವ ವಸ್ತುಗಳನ್ನಷ್ಟೇ ಖರೀದಿಸಬೇಕು. ಈ ನಿಯಮಗಳನ್ನು ನೀವು ಅಳವಡಿಸಿಕೊಂಡಾಗ, ನೀವು ಆರ್ಥಿಕವಾಗಿ ಸಧೃಡವಾಗಲು ಸಾಧ್ಯವಾಗುತ್ತದೆ.

- Advertisement -

Latest Posts

Don't Miss