Thursday, November 21, 2024

Latest Posts

Recipe: ಉತ್ತರ ಕರ್ನಾಟಕ ಶೈಲಿಯ ಶೇಂಗಾ ಸಾರು ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 2 ಟೊಮೆಟೋ, 1 ಈರುಳ್ಳಿ, 1 ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3 ಸ್ಪೂನ್ ಎಣ್ಣೆ, ಅರ್ಧ ಕಪ್ ಹುರಿದುಕೊಂಡ ಶೇಂಗಾ, ಒಗ್ಗರಣೆಗೆ , ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು, ಹಿಂಗು, ಕೊಂಚ ಅರಿಶಿನ, ಧನಿಯಾಪುಡಿ, ಖಾರ ಬೇಕಾದಷ್ಟು ಖಾರದಪುಡಿ, ಸಣ್ಣ ತುಂಡು ಬೆಲ್ಲ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ ಬಾಣಲೆಯಲ್ಲಿ 3 ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು, ಹಿಂಗು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಟೊಮೆಟೋ ಹಾಕಿ ಹುರಿಯಿರಿ. ಟೊಮೆಟೋ, ಈರುಳ್ಳಿ ಬೆಂದ ಬಳಿಕ, ಉಪ್ಪು, ಅರಿಶಿನ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.

ಬಳಿಕ ಹುಣಸೆ ರಸ, ಬೆಲ್ಲ, ಬೇಕಾದಷ್ಟು ನೀರು ಹಾಕಿ ಕುದಿಸಿ. ಸಾರು ಕುದಿ ಬಂದ ಬಳಿಕ, ಹುರಿದಿಟ್ಟುಕೊಂಡ ಶೇಂಗಾವನ್ನು ತರಿ ತರಿಯಾಗಿ ಪುಡಿ ಮಾಡಿ, ಸಾರಿಗೆ ಸೇರಿಸಿ. ಕೊಂಚ ಧನಿಯಾ ಪುಡಿ ಸೇರಿಸಿ, ಮತ್ತೆ ಕುದಿಸಿ. ಕೊನೆಗೆ ಕೊಂಚ ಕೊತ್ತೊಂಬರಿ ಸೊಪ್ಪನ್ನು ಹಾಕಿ, ಮುಚ್ಚಳ ಮುಚ್ಚಿಟ್ಟರೆ, ಘಮ ಘಮಿಸುವ ಶೇಂಗಾ ಸಾರು ರೆಡಿ. ಇದನ್ನು ಬಿಸಿ ಬಿಸಿ ಅನ್ನ, ತುಪ್ಪದ ಜೊತೆ ಸವಿಯಬಹುದು.

- Advertisement -

Latest Posts

Don't Miss