Recipe: ಬೇಕಾಗುವ ಸಾಮಗ್ರಿ: 5ರಿಂದ 6 ಜವಾರಿ ಕ್ಯಾಪ್ಸಿಕಂ, 2 ಈರುಳ್ಳಿ, ಒಂದು ಸ್ಪೂನ್ ಖಾರದ ಪುಡಿ, ಗುರೆಳ್ಳು ಪುಡಿ, ಹುರಿಗಡಲೆ ಪುಡಿ, ಚಿಟಿಕೆ ಅರಿಶಿನ, ಸ್ವಲ್ಪ ಬೆಲ್ಲ, ಕೊಂಚ ಹುಣಸೆರಸ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರ ಹೆಚ್ಚು ಬೇಕಾಗಿದ್ದಲ್ಲಿ ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಕರಿಬೇವು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಕ್ಯಾಪ್ಸಿಕಂನ್ನು ಎರಡರಿಂದ 3 ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ನೀರು ಹಾಕದೇ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಜೀರಿಗೆ, ಕರಿಬೇವನ್ನು ಹಾಕಿ, ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಈರುಳ್ಳಿ ಹಾಕಿ ಹುರಿದುಕೊಳ್ಳಿ.
ಬಳಿಕ ಕರಿಬೇವು ಹಾಕಿ ರೆಡಿ ಮಾಡಿದ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ. ನಂತರ ಕ್ಯಾಪ್ಸಿಕಂ ಉಪ್ಪು ಹಾಕಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿಕೊಳ್ಳಿ. ಹುಣಸೆ ರಸ, ಬೆಲ್ಲ, ಖಾರದ ಪುಡಿ, ಅರಿಶಿನ ಹಾಕಿ ಮಿಕ್ಸ್ ಮಾಡಿ. ಬಳಿಕ ಕೊಂಚ ನೀರು ಹಾಕಿ, 5 ನಿಮಿಷ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿ.
ಬಳಿಕ ಗುರೆಳ್ಳಿನ ಪುಡಿ, ಹುರಿಗಡಲೆ ಪುಡಿ ಹಾಕಿ ಮಿಕ್ಸ್ ಮಾಡಿ. ಇವೆರಡು ಪುಡಿ ಸೇರಿಸಿ ಅರ್ಧ ಕಪ್ ಇರಬೇಕು. ಏಕೆಂದರೆ, ಈ ಪಲ್ಯಕ್ಕೆ ರುಚಿ ಮತ್ತು ಕಲರ್ ಕೊಡುವುದೇ ಈ ಪುಡಿಗಳು. ಕೊನೆಗೆ ಕೊತ್ತೊಂಬರಿ ಸೊಪ್ಪು ಉದುರಿಸಿ, ಗ್ಯಾಸ್ ಆಫ್ ಮಾಡಿ, ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿಡಿ. ಈಗ ಘಮಘಮಿಸುವ ಕ್ಯಾಪ್ಸಿಕಂ ಪಲ್ಯ ರೆಡಿ. ಚಪಾತಿ, ರೊಟ್ಟಿಯೊಂದಿಗೆ ಇದನ್ನು ಸವಿಯಬಹುದು.