Tuesday, December 3, 2024

Latest Posts

ಮಣಿಪುರ ಹಿಂಸಾಚಾರಕ್ಕೆ ಅಸಲಿ ಕಾರಣ – ಮೈತೇಯಿ-ಕುಕಿ ಗಲಭೆ ಯಾಕೆ?

- Advertisement -

ಹೆಣ್ಣು, ಹೊನ್ನು, ಮಣ್ಣು, ಜಗತ್ತಿನಲ್ಲಿ ಯಾವುದೇ ಹೊಡೆದಾಟ, ಬಡಿದಾಟ, ಯುದ್ಧಗಳು ನಡೆದ್ರೂ ಈ ಮೂರು ಕಾರಣಕ್ಕೆ ಮಾತ್ರ. ತ್ರೇತಾಯುಗ ದ್ವಾಪರ ಯುಗದಿಂದಲೂ ನಡೆದುಬಂದಿರೋ ಸಂಘರ್ಷ ಇದು. ಹೆಣ್ಣಿಂದ, ಹೆಣ್ಣಿಗಾಗಿ ರಾಮಾಯಣ, ರಾಮ ರಾವಣರ ಯುದ್ಧ ನಡೀದ್ರೆ.. ಮಣ್ಣಿಗಾಗಿ ಮಹಾ ಭಾರತ ಯುದ್ಧ ನಡೀತು.. ಈ ಕಲಿಯುಗದಲ್ಲೂ ಇದು ಮುಂದುವರೆದುಕೊಂಡು ಬಂದಿದೆ. ಇಂಥದ್ದೇ ಕಾರಣಕ್ಕೆ ಭಾರತದ ಈಶಾನ್ಯ ರಾಜ್ಯ ಮಣಿಪುರದಲ್ಲೂ ಸುಮಾರು ವರ್ಷಗಳಿಂದ ನಿರಂತರ ಗಲಭೆ ನಡೀತಿದೆ.. ಅದ್ರಲ್ಲೂ ಮಣಿಪುರ ಹಿಂಸಾಚಾರಕ್ಕೆ ಸುಳ್ಳು ಸುದ್ದಿಗಳದ್ದೇ ದೊಡ್ಡ ಪಾತ್ರ.. ಮಣಿಪುರದಲ್ಲಿ ಹಿಂಸಾಚಾರ ನಡೆಯೋಕೆ ಏನ್ ಕಾರಣ? ಅಲ್ಲಿರೋ ಮೂರು ಪ್ರಮುಖ ಸಮುದಾಯದ ನಡುವೆ ಪ್ರತಿ ಬಾರಿಯೂ ಬೆಂಕಿ ಹೊತ್ತಿಕೊಳ್ಳೋದು ಏಕೆ ಎಲ್ಲವನ್ನೂ ವಿವರಿಸಿದ್ದೀವಿ ಪೂರ್ತಿಯಾಗಿ ಓದಿ.

ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಪ್ರಕೃತಿ ಸೌಂದರ್ಯವನ್ನೇ ಹೊದ್ದು ಮಲಗಿರೋ ರಾಜ್ಯಗಳು. ಇದ್ರಲ್ಲಿ ಮಯನ್ಮಾರ್ ದೇಶದ ಗಡಿಗೆ ಹೊಂದಿಕೊಂಡಿರುವುದು ಮಣಿಪುರ ರಾಜ್ಯ. ಸದಾ ಹಸಿರಿನಿಂದ ಕೂಡಿರೋ ಈ ರಾಜ್ಯದಲ್ಲಿ ಈಗ ಬೆಂಕಿ ಕಾಣಿಸಿಕೊಳ್ತಿದೆ.. ಇಲ್ಲಿರೋ ಮೂರು ಪ್ರಬಲ ಸಮುದಾಯಗಳು ತಮ್ಮ ತಮ್ಮಲ್ಲೇ ಹೊಡೆದಾಡಿಕೊಳ್ತಿದ್ದಾರೆ. ಮಣಿಪುರದಲ್ಲಿ ಪ್ರಮುಖವಾಗಿ 3 ಬುಡಕಟ್ಟು ಸಮುದಾಯಗಳಿವೆ. ಮೈತೇಯಿ, ಕುಕಿ ಹಾಗು ನಾಗಾ ಸಮುದಾಯ ಇಲ್ಲಿದೆ.

ಮೈತೇಯಿ, ಕುಕಿ ಘರ್ಷಣೆಗೆ ಕಾರಣ
ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣ ಆಗಿದ್ದು ಕಳೆದ ವರ್ಷ ನಡೆದ ಒಂದು ಘಟನೆ.. ಹಾಗೇ ಸರ್ಕಾರದ ನಿರ್ಧಾರ. ಹೈಕೋರ್ಟ್ ಕೊಟ್ಟ ಮೀಸಲಾತಿ ತೀರ್ಪು.. ಮಣಿಪುರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯವೇ ಪ್ರಬಲರು. ಇಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 53ರಷ್ಟು ಮೈತೇಯಿ ಸಮುದಾಯವಿದೆ. ಆದರೆ, ಮಣಿಪುರದ ಒಟ್ಟು ಭೂ ಪ್ರದೇಶದಲ್ಲಿ ಈ ಮೈತೇಯಿ ಜನರ ಬಳಿ ಇರೋದು ಶೇ.10ರಷ್ಟು ಭೂಮಿ ಮಾತ್ರ.. ಇನ್ನು ಕುಕಿ ಸಮುದಾಯದ ಜನ ಶೇ.25ರಷ್ಟಿದ್ರೆ, ನಾಗಾ ಬುಡಕಟ್ಟಿನ ಜನ ಶೇ.15ರಷ್ಟಿದ್ದಾರೆ. ಇವರ ಸಂಖ್ಯೆ ಕಡಿಮೆ ಇದ್ರೂ, ಅವ್ರು ಇರೋ ಪ್ರದೇಶಗಳಲ್ಲಿ ಹೆಚ್ಚಿನ ಭೂ ಪ್ರದೇಶವನ್ನ ಅವ್ರು ಹೊಂದಿದ್ದಾರೆ.. ಈ ಚಿಕ್ಕ ರಾಜ್ಯದಲ್ಲಿ ಭೂ ಹಂಚಿಕೆಯಲ್ಲಿ ಆಗಿರೋ ಅಸಮಾನತೆಯೇ ಇವ್ರ ಈ ಸಿಟ್ಟಿಗೆ ಮೊದಲ ಕಾರಣ.. ಮೈತೇಯಿ ಸಮುದಾಯ ಹೆಚ್ಚು ಇರೋ ಪ್ರದೇಶ ಕೂಡ ಸಂಪತ್ಭರಿತ ಆಗಿದೆ. ಕಣಿವೆ ಪ್ರದೇಶದಲ್ಲಿ ಅವ್ರಿದ್ದಾರೆ.. ಕುಕಿ ಬುಡಕಟ್ಟು ಸಮುದಾಯ ಹೆಚ್ಚಾಗಿ ಗುಡ್ಡಗಾಡು ಭಾಗದಲ್ಲಿ ನೆಲಸಿದ್ದಾರೆ.. ಅವ್ರ ಪ್ರದೇಶ ಜಾಸ್ತಿ ಇದ್ರೂ ಕೂಡ ಅವ್ರ ಅಭಿವೃದ್ಧಿ ಕಡಿಮೆ..

ಈಗ ಅಭಿವೃದ್ಧಿ ಹೊಂದಿರೋ ಕಣಿವೆ ಭಾಗದ ಮೈತೇಯಿ ಸಮುದಾಯ, ಬೇರೆ ಭಾಗದಲ್ಲೂ ಜಮೀನು ಖರೀದಿಸ್ಬೇಕು ಅಂತ, ಕುಕಿ ಜನ ಇರೋ ಕಡೆ ಬರ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲೂ ನಮ್ಮ ಸಮುದಾಯ ಇರಬೇಕು ಅಂತ ಬಯಸಿದ್ರು.. ಶೇ.53ರಷ್ಟು ಜನಸಂಖ್ಯೆ ಇರುವ ಮೈತೇಯಿಗಳಿಗೆ ಚಿಕ್ಕ ಪ್ರದೇಶ ಸಾಕಾಗದ ಕಾರಣ ಗುಡ್ಡಗಾಡು ಜಾಗದಲ್ಲೂ ಭೂಮಿ ಒತ್ತುವರಿಗೆ ಮುಂದಾದ್ರು.. ಆದ್ರೆ ಮಣಿಪುರ ಗುಡ್ಡಗಾಡು, ಅರಣ್ಯ ಪ್ರದೇಶ ಆದ್ದರಿಂದ ಅಲ್ಲಿ ಒತ್ತುವರಿ, ಭೂಮಿ ಖರೀದಿ ಮಾಡುವಂತಿಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇದರ ಜೊತೆಗೆ ಮೇಲ್ವರ್ಗಕ್ಕೆ ಸೇರಿದ ಮೈತೇಯಿ ಸಮುದಾಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನೂ ಕೇಳುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಮಣಿಪುರ ಹೈಕೋರ್ಟ್ ಮೈತೇಯಿ ಸಮುದಾಯದ ಪರವಾಗಿ ನಿಂತಿತ್ತು. ಕಳೆದ ವರ್ಷ ಮೇನಲ್ಲಿ ಮೈತೇಯಿ ಸಮುದಾಯಕ್ಕೆ ವಿಶೇಷ ಅವಕಾಶ ಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟಿತ್ತು.

ಈ ಘರ್ಷಣೆ ಶುರುವಾಗಿದ್ದು ಕೂಡ ಆಗಿನಿಂದ್ಲೇ.. ಒಂದು ವೇಳೆ ಮೈತೇಯಿ ಸಮುದಾಯದ ಜನರು ಕುಕಿ ಸಮುದಾಯವೇ ಹೆಚ್ಚಾಗಿರುವ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಖರೀದಿಗೆ ಮುಂದಾದ್ರೆ ಕುಕಿ ಸಮುದಾಯಕ್ಕೆ ಹಿನ್ನಡೆ ಆಗುತ್ತದೆ. ಜೊತೆಯಲ್ಲೇ ಸರ್ಕಾರಿ ಉದ್ಯೋಗದಲ್ಲೂ ವಿಶೇಷ ಮೀಸಲಾತಿ ಸಿಕ್ಕರೆ, ಕುಕಿ ಹಾಗೂ ನಾಗಾ ಸಮುದಾಯದ ಪಾಲನ್ನು ಕಿತ್ತುಕೊಂಡಂತೆ ಆಗುತ್ತೆ. ಆದರೆ, ಬಹುಸಂಖ್ಯಾತರಾಗಿರುವ ಮೈತೇಯಿ ಸಮುದಾಯದ ಜನರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಹಾಗೂ ಭೂಮಿಯ ಅಗತ್ಯತೆ ಇರುವ ಕಾರಣ ಅವರಿಗೆ ಸೌಲಭ್ಯ ಸಿಗಬೇಕು ಅನ್ನೋದು ಕೋರ್ಟ್ ನಿಲುವಾಗಿತ್ತು

ಸೇಡಿಗೆ ಸೇಡು.. ಮುಯ್ಯಿಗೆ ಮುಯ್ಯಿ
ಮೈತೇಯಿ ಸಮುದಾಯಕ್ಕೆ ತಮ್ಮ ಪ್ರದೇಶದಲ್ಲಿ ಭೂಮಿ ಹೊಂದೋದು ಹಾಗೇ, ಅವ್ರಿಗೆ ಹೆಚ್ಚಿನ ಮೀಸಲಾತಿ ಕೊಡೋದು ಕುಕಿ ಸಮುದಾಯಕ್ಕೆ ಇಷ್ಟ ಆಗಿರಲಿಲ್ಲ.. ಹೀಗಾಗಿ ಕುಕಿ ಹಾಗೇ ನಾಗಾ ಸಮುದಾಯ ಒಟ್ಟಿಗೆ ಸೇರಿ ಮೈತೇಯಿ ಸಮುದಾಯವನ್ನೇ ಟಾರ್ಗೆಟ್ ಮಾಡಿದ್ರು.. ಕುಕೀ ಸಮುದಾಯ ಬಂದೂಕನ್ನ ಕೈಗೆತ್ತಿಕೊಂಡ್ರು. ಮೈತೇಯಿ ಸಮುದಾಯದ ಜನರನ್ನ ಅಪಹರಣ ಮಾಡೋಕೆ ಮುಂದಾದ್ರು.. ಎರಡೂ ಸಮುದಾಯಗಳು, ಮಣಿಪುರ ಸರ್ಕಾರದ ಪೊಲೀಸ್ ಇಲಾಖೆಯ ಶಸ್ತ್ರಾಗಾರದಿಂದಲೇ ಬಂದೂಕು, ಮದ್ದು ಗುಂಡುಗಳನ್ನ ದೋಚಿದ್ರು.. ಅವನ್ನೇ ಹಿಡಿದು ಈಗ ಪರಸ್ಪರ ಹೊಡೆದಾಡ್ತಿದ್ದಾರೆ.

ಪೊಲೀಸರಿಂದಲೇ ದೋಚಿದ ಬಂದೂಕುಗಳನ್ನ ಹಿಡಿದ ಕುಕಿ ಹಾಗೂ ಮೈತೇಯಿ ಸಮುದಾಯ ಸಂಘರ್ಷದಲ್ಲಿ ತೊಡಗಿದ್ರು. ಮೊದಲಿಗೆ ಜಿರೀಬಾಮ್ ಅನ್ನೋ ಜಿಲ್ಲೆಯಲ್ಲಿ ಜಮಾಂಗೀಯ ಸಂಘರ್ಷ ಹೆಚ್ಚಾಗ್ತಾ ಹೋಯ್ತು.. ಕುಕಿ ಸಮುದಾಯ ಮೈತೇಯಿ ಸಮುದಾಯದ ಮಹಿಳೆಯನ್ನ ಕೊಂದು ಹಾಕಿದ್ರು.. ರೈತನನ್ನ ಹೊಲದಲ್ಲೇ ಕೊಚ್ಚಿ ಕೊಂದರು. ಅತ್ಯಾಚಾರಗಳು ನಡೆದ್ವು. ಇದಕ್ಕೆ ಪ್ರತಿಯಾಗಿ ಕಳೆದ ವರ್ಷ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನ ಅರೆಬೆತ್ತಲು ಮಾಡಿ ಮೆರವಣಿಗೆ ಮಾಡಿಬಿಟ್ಟರು.. ಇದು ಉರಿಯೋ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯ್ತು.. ಅರೆಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದವ್ರ ಮನೆಗಳಿಗೆ ಕುಕಿಗಳು ಬೆಂಕಿ ಹಚ್ಚಿದ್ರು.. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅನ್ನೋದು ಹೆಚ್ಚಾಗ್ತಾ ಹೋಯ್ತು.

1 ವರ್ಷದಲ್ಲಿ 300 ಜನರ ಸಾವು
ಮೈತೇಯಿಗಳು ಅರಂಬಾಯ್ ಟೆಂಗೋಲ್ ಅನ್ನೋ ಸಂಘಟನೆಯನ್ನ ಕಟ್ಟಿಕೊಂಡಿದ್ರು.. ಈ ಸಂಘಟನೆಯವ್ರು ಕುಕಿಗಳ ಮೇಲೆ ಮುಗಿಬೀಳ್ತಿದ್ರು.. ಕುಕಿಗಳು ಕೂಡ ಬಂಡುಕೋರರ ಗುಂಪಿತ್ತು. ಮೈತೇಯಿಗಳನ್ನ ಅಪಹರಿಸಿ ಅತ್ಯಾಚಾರವೆಸಗೋದು ಮಾಡ್ತಿದ್ರು.. ಕಳೆದ 1 ವರ್ಷದಲ್ಲಿ ಇದೇ ರೀತಿ ಎರಡೂ ಸಮುದಾಯದ 300 ಜನ ಅಲ್ಲಿ ಜೀವ ಬಿಟ್ಟಿದ್ದಾರೆ.. ಈ ಸಂಘರ್ಷದಲ್ಲಿ ಮೂರೂ ಸಮುದಾಯದಿಂದ 60 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ

ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಈ ಗಲಭೆ ಕಂಟ್ರೋಲ್ ಮಾಡೋದ್ರಲ್ಲಿ ವಿಫಲ ಆಗಿದ್ದು, ಮತ್ತೆ ಸಂಘರ್ಷ ಮುಂದುವರಿದಿದೆ. ಕೆಲ ದಿನಗಳ ಹಿಂದೆ ಮೈತೇಯಿ ಸಮುದಾಯದ 6 ಜನರ ಶವ ನದಿಯೊಂದರಲ್ಲಿ ಪತ್ತೆ ಆಯ್ತು.. ಇದ್ರಿಂದ ಮತ್ತೆ ಜೆರಿಬಾಮ್ ಜಿಲ್ಲೆ ಮತ್ತೆ ಅಗ್ನಿಕುಂಡದಂತೆ ಆಗಿದೆ.. ಮೈತೇಯಿ ಸಮುದಾಯಕ್ಕೆ ನ್ಯಾಯ ಕೊಡ್ಬೇಕು ಪ್ರತಿಭಟನೆಗಳು ನಡೆದು, 6 ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮೀಡಿಯಾಗಳಿಂದಲೇ ಗಲಭೆಗೆ ಪ್ರಚೋದನೆ
ಮಣಿಪುರದ ಹಿಂಸಾಚಾರ ಇಷ್ಟರ ಮಟ್ಟಿಗೆ ಜಾಸ್ತಿ ಆಗೋಕೆ ಅಲ್ಲಿನ ಮೀಡಿಯಾಗಳು ಕೂಡ ಕಾರಣ. ಸೋಷಿಯಲ್ ಮೀಡಿಯಾ, ಸ್ಥಳೀಯ ಪತ್ರಿಕೆಗಳು, ಟಿವಿಯಲ್ಲೂ ಸುಳ್ಳುಸುದ್ದಿಗಳೇ ಹರಿದಾಡ್ತಿದೆ. ಕುಕಿ ಸಮುದಾಯ, ಮೈತೇಯಿ ಸಮುದಾಯದವರ ಪರವಾಗಿಯೇ ಹಲವು ಪತ್ರಿಕೆಗಳು ಕಾರ್ಯ ನಿರ್ವಹಿಸ್ತಿವೆ. ಒಂದೊಂದು ಸಮುದಾಯದ ಪತ್ರಿಕೆಗಳು ತಮ್ಮ ಸಮುದಾಯದ ಪರ ಮಾತ್ರ ಸುದ್ದಿ ಹಾಕಿ ಇನ್ನೊಂದು ಸಮುದಾಯವನ್ನ ಕೆಟ್ಟಾದಾಗಿ ತೋರಿಸಲಾಗುತ್ತೆ.. ಇದರಿಂದ ಪ್ರಚೋದನೆಗಳು ಹೆಚ್ಚಿ ಘರ್ಷಣೆ ಮುಂದುವರೆಯುತ್ತಿದೆ.

ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರ ಹಿಂಸಾಚಾರ ತಡೆಯೋಕೆ ದೃಢ ನಿರ್ಧಾರ ಕೈಗೊಂಡಿದ್ದಾರೆ.. ಜನಾಂಗೀಯ ಗಲಭೆ ತಡೆಯೋಕೆ 5000 ಸಾವಿರ ಯೋಧರನ್ನ ಮಣಿಪುರಕ್ಕೆ ಕಳಿಸ್ತಿದೆ.. ಈಗಾಗ್ಲೇ ಮಣಿಪುರದಲ್ಲಿ 20 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆಗಳ ಯೋಧರಿದ್ದಾರೆ.. ಈಗ 20 ಹೆಚ್ಚುವರಿ ಅರೆಸೇನಾ ತುಕಡಿಗಳನ್ನ ಕಳಿಸಲಾಗುತ್ತಿದೆ.. ಇದ್ರಲ್ಲಿ 15ಸಿಆರ್​ಪಿಎಫ್ ತುಕಡಿಗಳಿದ್ರೆ, 5 ಬಿಎಸ್​ಎಫ್ ಕಂಪನಿಗಳಿದೆ.. ಇಷ್ಟೆಲ್ಲಾ ಸೈನಿಕರನ್ನೇ ಮಣಿಪುರಕ್ಕೆ ನುಗ್ಗಿಸಿದ್ಮೇಲೆ ಅಲ್ಲಿ ಇನ್ನೆಷ್ಟು ರಕ್ತದೋಕುಳಿ ಹರಿಯುತ್ತೋ ಅನ್ನೋ ಆತಂಕ ಇದೆ.. ಸೈನಿಕರು ಮತ್ತು ನಾಗರಿಕರ ನಡುವಿನ ಘರ್ಷಣೆಗೂ ಕಾರಣ ಆಗುವ ಆತಂಕ ಇದೆ.

 

 

- Advertisement -

Latest Posts

Don't Miss