Monday, October 27, 2025

Latest Posts

ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ ಕ್ರಿಕೇಟಿಗ ಯಜುವೇಂದ್ರ ಚಹಲ್ ಪತ್ನಿ

- Advertisement -

Cricket News: ಕ್ರಿಕೇಟಿಗ ಯಜುವೇಂದ್ರ ಚಹಲ್ ಪತ್ನಿ ಧನುಶ್ರೀ ತೆಲುಗು ಚಿತ್ರರಂಗದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಧನುಶ್ರೀ ಅತ್ಯುತ್ತಮ ಡಾನ್ಸರ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಹಾಕುತ್ತಿದ್ದರು. ಅಲ್ಲದೇ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಇವರ ನೃತ್ಯದಿಂದಲೇ ಪ್ರಸಿದ್ಧರಾಗಿರುವ ಕಾರಣ, ನೃತ್ಯಕ್ಕೆ ಸಂಬಂಧಿಸಿದ ಕಥೆಯುಳ್ಳ, ಆಕಾಶಂ ಧಾಟಿ ವಸ್ತಾವ ಎಂಬ ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಸಿನಿಮಾದಲ್ಲಿ ಡಾನ್ಸ್ ಮಾಸ್ಟರ್ ಯಶ್ ನಾಯಕನಾಗಿದ್ದು, ಧನುಶ್ರೀ ನಾಯಕಿಯಾಗಿದ್ದಾರೆ. ಇವರೊಂದಿಗೆ ಇನ್ನಿಬ್ಬರು ನಾಯಕಿಯೂ ಇರಲಿದ್ದಾರೆ. ಮಲೆಯಾಳಿ ನಟಿ ಕಾರ್ತಿಕಾ ಮತ್ತು ಸಿರತ್ ಕಪೂರ್ ಎಂಬ ನಟಿಯರು ಇವರೊಂದಿಗೆ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ಮುಂಬೈನಲ್ಲಿ ಅರ್ಧ ಶೂಟಿಂಗ್ ಮುಗಿದಿದ್ದು, ಇನ್ನರ್ಧ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯಲಿದೆ.

- Advertisement -

Latest Posts

Don't Miss