Bollywood News: ಗುಲ್ಶನ್ ದೇವಯ್ಯ. ಇಷ್ಟು ವರ್ಷ ಬಾಲಿವುಡ್ ನಟನಾಗಿ ಮಿಂಚಿ, ಇದೀಗ ಕಾತಾರದ ಮೂಲಕ ಕನ್ನಡ ಸಿನಿಮಾಗೆ ಲಗ್ಗೆ ಇಟ್ಟಿದ್ದಾರೆ. ಕಾಂತಾರದಲ್ಲಿ ಕೆಲಸಕ್ಕೆ ಬಾರದ ರಾಜ ಕುಲಶೇಖರ್‌ನ ಪಾತ್ರಕ್ಕೆ ಬಣ್ಣ ಹಚ್ಚಿ ಸೈ ಎನ್ನಿಸಿಕ“ಂಡಿರುವ ಗುಲ್ಶನ್‌ಗೆ ಕನ್ನಡ ಸರಿಯಾಗಿ ಬರೋದಿಲ್ಲ. ಆತನೂ ಬಾಲಿವುಡ್ ಮಂದಿ ರೀತಿ, ಕರ್ನಾಟಕದಲ್ಲಿ ಜನಿಸಿದರೂ ಕನ್ನಡ ಮಾತನಾಡಲು ಮುಜುಗರ ಪಡುವ ಸೋ ಕಾಲ್ಡ್ ಸೆಲೆಬ್ರಿಟಿಗಳ ರೀತಿ ಅಂತಾನೇ ಹಲವರು ಅಂದಿಕ“ಂಡಿದ್ರು.
ಆದರೆ ಕನ್ನಡದ ಕೆಲ ಚಾನೆಲ್‌ಗಳು ಮಾಡಿದ ಸಂದರ್ಶನದಲ್ಲಿ ಗುಲ್ಶನ್ ದೇವಯ್ಯಾ ಅದೆಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡಿದ್ದಾರೆಂದರೆ, ಅವರ ಸಂದರ್ಶನ ನೋಡಿದ ಎಲ್ಲರೂ ಹೇಳಿದ್ದು 1 ಮಾತು. ವಾವ್ ಇವರ ಕನ್ನಡ ಎಷ್ಟು ಸ್ಪಷ್ಟವಾಗಿದೆ.. ಕನ್ನಡದ ನಿರ್ದೇಶಕರ ಕಣ್ಣಿಗೆ ಇವರ್ಯಾಕೆ ಬಿದ್ದಿಲ್ಲ ಅಂತ.
ಇದು ಗುಲ್ಶನ್ ಮಾತನಾಡುವ ಸವಿಗನ್ನಡದ ಬಗ್ಗೆಯಾದ್ರೆ, ಗುಲ್ಶನ್ ಮುಂಚೆ ಎಲ್ಲ ಬಾಲಿವುಡ್ ಸೆಲೆಬ್ರಿಟಿಗಳ ಮನೆಗೆ ಪಾರ್ಟಿಗೆ ಹೋಗುವಾಗ, ತುಂಬಾ ಮುಜುಗರ ಅನುಭವಿಸುತ್ತಿದ್ದರಂತೆ. ಹೀಗಂತ ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ.
ಗುಲ್ಶನ್ ಬಾಲಿವುಡ್ ನಟ ಶಾರುಖ್ ಖಾನ್ ಮನೆಗೆ ಪಾರ್ಟಿಗೆಂದು ಹೋಗಿದ್ದರು. ಅಲ್ಲಿ ಗೌರಿ ಮತ್ತು ಶಾರುಖ್ ಇವರನ್ನು ಆದರದಿಂದ ಬರ ಮಾಡಿಕ“ಂಡು, ಚೆನ್ನಾಗಿಯೇ ಮಾತನಾಡಿಸಿದ್ದರು. ಆದರೂ ಗುಲ್ಶನ್‌ಗೆ ಇಲ್ಲಿ ಯಾಕಾದ್ರೂ ಬಂದೆ ಅಂತಲೇ ಅನ್ನಿಸಿತ್ತಂತೆ.
ಯಾಕೆ ಹಾಗೆ ಅನ್ನಿಸಿತು ಅಂತಾ ಕೇಳಿದ್ರೆ, ಗುಲ್ಶನ್ ಆ ಸಮಯದಲ್ಲಿ ಬಾಲಿವುಡ್‌ನಲ್ಲಿ ಅಷ್ಟು ಹೆಸರು ಮಾಡಿರಲಿಲ್ಲ. ಅವರು ಬೆರಳೆಣಿಕೆಯಷ್ಟು ಸಿನಿಮಾದಲ್ಲಿ ಚಿಕ್ಕ ಚಿಕ್ಕ ಪಾತ್ರವನ್ನು ಮಾಡುತ್ತಿದ್ದರು. ಆದರೆ ಅಲ್ಲಿ ಪಾರ್ಟಿಗೆ ಬಂದವರೆಲ್ಲ ಪ್ರಸಿದ್ಧರು. ಆ ಪ್ರಸಿದ್ಧರ ಪಾರ್ಟಿಯಲ್ಲಿ ಭಾಗವಹಿಸುವಷ್ಟು ನಾನು ಅರ್ಹನಲ್ಲ ಅಂತಲೇ ಅವರಿಗೆ ಅನ್ನಿಸಿತ್ತಂತೆ. ಆದರೆ ಈಗ ಹಾಗನ್ನಿಸುವುದಿಲ್ಲ. ಕಾಂತಾರದ ಮೂಲಕ ನನಗೆ ನನ್ನದೇ ಆದ ಪ್ರಸಿದ್ಧಿ ಬಂದಿದೆ. ಈಗ ನನಗೆಲ್ಲೂ ಮುಜುಗರವಾಗುವುದಿಲ್ಲ ಎಂದು ಗುಲ್ಶನ್ ಹೇಳಿದ್ದಾರೆ.

