Friday, July 4, 2025

Latest Posts

ಸಹನಟಿಯರ ಕೈಗೆ ಉಗುಳುತ್ತಿದ್ದರಂತೆ ಅಮೀರ್ ಖಾನ್.. ಈ ವರ್ತನೆಗೆ ಕಾರಣವೇನು..?

- Advertisement -

Bollywood News: ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಅಮೀರ್ ಖಾನ್ ತಾವು ತಮ್ಮ ಸಹನಟಿಯರ ಕೈಗಳ ಮೇಲೆ ಉಗಿಯುತ್ತಿದ್ದುದನ್ನು ಸಮರ್ಥಿಸಿಕೊಂಡು ತಮಾಷೆಯಾಗಿ ಮಾತನಾಡಿದ್ದಾರೆ. ನಾನು ಕೈ ಮೇಲೆ ಉಗುಳಿದ ನಟಿಯರೆಲ್ಲ ನಂಬರ್ ಒನ್ ನಟಿಯರಾಗಿದ್ದಾರೆಂದು ಹೇಳಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ನಿಮ್ಮ ಕೈ ನೋಡಿ ಭವಿಷ್ಯ ಹೇಳುತ್ತೇನೆ ಎಂದು ನಟಿಯರಿಗೆ ಹೇಳಿ, ಅವರು ಕೈ ತೋರಿಸಿದ ಬಳಿಕ, ಕೈ ಮೇಲೆ ಉಗಿದು, ಆಮೀರ್ ಅಲ್ಲಿಂದ ಓಡಿ ಹೋಗುತ್ತಿದ್ದರಂತೆ. ಈ ಬಗ್ಗೆ ಹಲವು ನಟಿಯರು ಕೂಡ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಈ ಬಗ್ಗೆ ಟ್ರೋಲ್ ಆಗಿದ್ದು, ಫ್ಲಾಪ್ ಆಗಿದ್ದ ಸಿನಿಮಾಗಳ ಮೇಲೆ ಉಗಿದಿದ್ದರೆ, ಅವುಗಳು ಹಿಟ್ ಆಗುತ್ತಿದ್ದವೇನೋ ಎಂದು ನೆಟ್ಟಿಗರು, ಆಮೀರ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಬಾಲಿವುಡ್‌ನಲ್ಲಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿ, ಸೈ ಎನ್ನಿಸಿಕೊಂಡಿರುವ ಅಮೀರ್ ಖಾನ್, ಈ ವಯಸ್ಸಿನಲ್ಲಿ ಈ ರೀತಿಯಾಗಿ ಹೇಳಿಕೆ ಕೊಡುತ್ತಿರುವುದು ಸರಿಯಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss