Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ. ಸಂಬಂಧದಲ್ಲಿದ್ದಾರೆ ಅನ್ನೋದು ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಪ್ರೂವ್ ಆಗುತ್ತಲೇ ಇದೆ. ಆದರೆ ಇವರಿಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿಯೇ ಇಲ್ಲ.
ಕೆಲ ದಿನಗಳ ಹಿಂದೆ ರಶ್ಮಿಕಾ ದೇವರಕೊಂಡ ಮನೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಿದ್ದು, ತಮ್ಮ ಫೋಟೋ ತೆಗೆದಿದ್ದು, ವಿಜಯ್ ಸಹೋದರ ಅಂತಾ ತಾವೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದರು. ಆದರೆ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಮಾತ್ರ ಸ್ಪಷ್ಟನೆ ನೀಡಿರಲಿಲ್ಲ.
ಆದರೆ ಪುಷ್ಪ 2 ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಶ್ಮಿಕಾ, ನಿರೂಪಕಿ ಕೇಳಿದ ಬಗ್ಗೆ ಪ್ರತಿಕ್ರಿಯಿಸಿದ್ದು ಇದು ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿರೂಪಕಿ ರಶ್ಮಿಕಾ ಮತ್ತು ವಿಜಯ್ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, ರಶ್ಮಿಕಾ ಇದು ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ಅಂದ್ರೆ ಇಬ್ಬರ ನಡುವೆ ಸಂಬಂಧ ಇರುವುದು ಫಿಕ್ಸ್ ಅಂತಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಿರೂಪಕಿ ಒಂದಾದ ಮೇಲೋಂದರಂತೆ ಪ್ರಶ್ನೆ ಕೇಳಿ ಕೊನೆಗೆ, ನೀವು ಚಿತ್ರರಂಗದವರನ್ನು ಮದುವೆಯಾಗುತ್ತೀರಾ ಅಥವಾ ಚಿತ್ರರಂಗದಲ್ಲಿ ಇಲ್ಲದಿರುವರನ್ನು ಮದುವೆಯಾಗುತ್ತೀರಾ ಎಂದು ಕೇಳಿದಾಗ, ಅದು ಎಲ್ಲರಿಗೂ ಗೊತ್ತು ಎಂದು ರಶ್ಮಿಕಾ ಹೇಳಿದ್ದಾರೆ. ಬಳಿಕ ಈ ಬಗ್ಗೆ ಇಲ್ಲಿ ಹೆಚ್ಚು ಚರ್ಚೆ ಮಾಡೋದು ಬೇಡಾ, ನಾವಿಬ್ರೆೇ ಮತ್ತೆ ಮಾತಾಡೋಣ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮೂಲಕ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಇಂಡೈರೆಕ್ಟ್ ಆಗಿ ಒಪ್ಪಿಕೊಂಡಿದ್ದಾರೆ.