- Advertisement -
Hubli News: ಹುಬ್ಬಳ್ಳಿ: ಸಿಎಂ ಕುರ್ಚಿ ಖಾಲಿ ಇದ್ದರೇ ಅಲ್ವಾ..? ಸಿಎಂ ಬದಲಾವಣೆ ವಿಚಾರ. ಇದೆಲ್ಲಾ ಮಾಧ್ಯಮದ ಸೃಷ್ಟಿ. ನಮ್ಮಲ್ಲಿ ಸಿಎಂ ಬದಲಾವಣೆ ವಿಚಾರವೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.
ಹೆಸ್ಕಾಂ ಕಚೇರಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಾಸನದಲ್ಲಿ ನಡೆಯುತ್ತಿರುವ ಅಹಿಂದ ಸಮಾವೇಶದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ ಎಂದರು.
ಸಿಎಂ, ಡಿಸಿಎಂ ಸಿಡಬ್ಲುಸಿ ಮೆಂಬರ್ ಇದ್ದಾರೆ. ಈ ನಿಟ್ಟಿನಲ್ಲಿ ಮೀಟಿಂಗ್ ಅಟೆಂಡ್ ಆಗಲು ದೆಹಲಿಗೆ ಹೋಗಿದ್ದಾರೆ. ಸಿಎಂ ಖುರ್ಚಿ ಖಾಲಿ ಇದ್ದರೇ ಅಲ್ವಾ ಬದಲಾವಣೆ ವಿಚಾರ. ಇದೆಲ್ಲಾ ಮಾಧ್ಯಮದ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಬೆಳವಣಿಗೆ ಇಲ್ಲ. ಅಷ್ಟಕ್ಕೂ ನಮ್ಮದು ಹೈ ಕಮಾಂಡ್ ಪಕ್ಷವಾಗಿದ್ದು, ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಅದು ಹೈ ಕಮಾಂಡ್ ತೆಗೆದುಕೊಳ್ಳುತ್ತದೇ ಎಂದು ಅವರು ಹೇಳಿದರು.
- Advertisement -