Saturday, November 29, 2025

Latest Posts

ಹಸ್ತದಲ್ಲಿ ವಿಷ್ಣು ರೇಖೆ ಇದ್ದವರ ಜೀವನ ಹೇಗಿರತ್ತೆ ಗೊತ್ತಾ..?

- Advertisement -

ಕೈಯಲ್ಲಿರುವ ರೇಖೆ ನೋಡಿ ಮನುಷ್ಯನ ಇಡೀ ಭವಿಷ್ಯವನ್ನೇ ಹೇಳುವ ತಾಕತ್ತು ಜ್ಯೋತಿಷ್ಯಕ್ಕಿದೆ. ಹಸ್ತ ರೇಖೆಯಲ್ಲಿರುವ ಕೆಲ ಚಿಹ್ನೆಗಳು ಮನುಷ್ಯನ ಜೀವನ ಹೇಗಿರುತ್ತದೆ ಎಂದು ಹೇಳಬಲ್ಲವು. ಅವುಗಳಲ್ಲಿ ವೈ ಚಿಹ್ನೆ ಕೂಡ ಒಂದು. ಹಾಗಾದ್ರೆ ವೈ ಚಿಹ್ನೆ ಹೊಂದಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.

ಹೆಣ್ಣು ಮಕ್ಕಳು ತಮ್ಮ ಎಡಗೈ ಮತ್ತು ಗಂಡು ಮಕ್ಕಳು ತಮ್ಮ ಬಲಗೈನಲ್ಲಿ ಈ ವೈ ಚಿಹ್ನೆ ಇದೆಯಾ ಎಂದು ನೋಡಿಕೊಳ್ಳಿರಿ.

ವೈ ರೇಖೆಯನ್ನ ಜ್ಯೋತಿಷ್ಯದಲ್ಲಿ ವಿಷ್ಣು ರೇಖೆ ಎಂದು ಹೇಳಲಾಗುತ್ತದೆ. ಈ ರೇಖೆ ಹೊಂದಿದವರು ತಮ್ಮ ಜೀವನವನ್ನ ತಮ್ಮವರಿಗಾಗಿ ಮೀಸಲಿಡುತ್ತಾರೆ. ತಮ್ಮವರ ಖುಷಿಗಾಗಿ ತಮ್ಮ ಜೀವನ ತ್ಯಾಗ ಮಾಡುವ ಸ್ವಭಾವ ವೈ ರೇಖೆ ಹೊಂದಿರುವವರಿಗಿರುತ್ತದೆ.

ಪೂಜೆ ಪುನಸ್ಕಾರಕ್ಕೆ ಹೆಚ್ಚು ಮಹತ್ವವನ್ನು ಇವರು ನೀಡುತ್ತಾರೆ. ಅಲ್ಲದೇ ದೇವರಲ್ಲಿ ನಂಬಿಕೆ ಹೊಂದಿದವರಾಗಿರ್ತಾರೆ.

https://youtu.be/1Yb1QvPP-iQ

ಇವರು ಶ್ರಮಜೀವಿಗಳಾಗಿರ್ತಾರೆ. ಶ್ರಮಪಡದೇ ಇವರಿಗೇನು ಲಭಿಸೋದಿಲ್ಲ. ಹಾಗಾಗಿ ಕೈ ಕೆಸರಾದರೇ ಬಾಯಿ ಮೊಸರು ಎಂಬಂತೆ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬರುವ ಸ್ವಭಾವ ಇವರದ್ದಾಗಿರುತ್ತದೆ.

ಇವರು ಹಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅಂದರೆ ಕಷ್ಟಪಟ್ಟು ದುಡಿಯುತ್ತಾರೆ. ಸಿಕ್ಕ ಸಿಕ್ಕಲ್ಲೆಲ್ಲ ಖರ್ಚು ಮಾಡುವ ಸ್ವಭಾವ ಇವರದ್ದಾಗಿರುವುದಿಲ್ಲ. ಆದ್ರೆ ದುಡಿದು ಹಣ ಕೂಡಿಡಬೇಕು ಅನ್ನುವ ಸ್ವಭಾವ ಇವರದ್ದು.

ಮತ್ತೊಬ್ಬರ ಕಷ್ಟವನ್ನ ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡುವ ಬುದ್ಧಿ ವೈ ರೇಖೆ ಹೊಂದಿರುವವರದ್ದಾಗಿರುತ್ತದೆ. ನಂಬಿಕೆಗೆ ಹೆಸರಾದ ಇವರು ತಾವು ಮಾಡಿದ ಸಹಾಯವನ್ನು ಯಾರಲ್ಲಿಯೂ ಹೇಳಿಕೊಳ್ಳುವ ಸ್ವಭಾವ ಇವರದ್ದಾಗಿರುವುದಿಲ್ಲ.

ಈ ರೇಖೆಯುಳ್ಳವರು ಹೆಚ್ಚಾಗಿ ಪ್ರೇಮ ವಿವಾಹವಾಗುತ್ತಾರೆ ಎನ್ನಲಾಗಿದೆ. ಅಲ್ಲದೇ ತಮ್ಮ ಬಾಳ ಸಂಗಾತಿಯ ಮೇಲೆ ಹೆಚ್ಚು ನಂಬಿಕೆ ಪ್ರೀತಿ ಇಟ್ಟಿರುತ್ತಾರೆ. ಸಂಸಾರದಲ್ಲಿ ಕಲಹ ಅನ್ನೋದು ಕಾಮನ್ ಆಗಿರುತ್ತದೆ. ಆದ್ರೆ ಪ್ರೀತಿ ಎಂದೂ ಕಡಿಮೆಯಾಗುವುದಿಲ್ಲ.

ಮತ್ತೊಬ್ಬರಿಗೆ ಕೇಡು ಬಯಸುವಂಥ ಸ್ವಭಾವ ಇವರದ್ದಾಗಿರುವುದಿಲ್ಲ. ಇವರು ತಮ್ಮ ಮನಸ್ಸಿನಲ್ಲಿ ಬರುವ ಒಳ್ಳೆಯ ಅಭಿಪ್ರಾಯವನ್ನ ಹೇಳಿಬಿಡುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss