Thursday, December 12, 2024

Latest Posts

ಈ ರಾಶಿಯವರು ಶಿಕ್ಷಕ ವೃತ್ತಿ ಮಾಡಲು ಯೋಗ್ಯರು, ಉತ್ತಮ ಶಿಕ್ಷಕರಾಗಬಲ್ಲರು

- Advertisement -

Spiritual: ಕೆಲವು ರಾಶಿಯವರಿಗೆ ಕೆಲವು ಗುಣಗಳಿರುತ್ತದೆ. ಕೆಲವರು ಜೀವನದಲ್ಲಿ ಏನೇ ಕಷ್ಟ ಬಂದರೂ ಸದಾ ನಗು ನಗುತ್ತಲಿರುತ್ತಾರೆ. ಇನ್ನು ಕೆಲವರಿಗೆ ಜೀವನದಲ್ಲಿ ಎಲ್ಲ ಸುಖವಿದ್ದರೂ, ಇನ್ನೊಬ್ಬರ ಜೀವನ ಕಂಡು ಹೊಟ್ಟೆ ಉರಿ ಪಟ್ಟುಕೊಂಡಿರುತ್ತಾರೆ. ಈ ರೀತಿ ಒಬ್ಬೊಬ್ಬರದ್ದು ಒಂದೊಂದು ಗುಣ. ಇನ್ನು ಯೋಗ್ಯತೆ ಬಗ್ಗೆ ಮಾತನಾಡುವುದಾದರೆ, ಬೇರೆ ಬೇರೆ ರಾಶಿಯವರಿಗೆ, ಬೇರೆ ಬೇರೆ ಟ್ಯಾಲೆಂಟ್ ಇರುತ್ತದೆ. ಇಂದು ನಾವು ಯಾವ ರಾಶಿಯವರಿಗೆ ಶಿಕ್ಷಕರಾಗುವ ಅರ್ಹತೆ ಇರುತ್ತದೆ. ಪಾಠ ಹೇಳಿಕೊಡುವುದರಲ್ಲಿ ಯಾವ ರಾಶಿಯವರು ನಿಸ್ಸೀಮರು ಅಂತಾ ಹೇಳಲಿದ್ದೇವೆ.

ಮೇಷ ರಾಶಿ: ಮೇಷ ರಾಶಿಯವರು ಅತ್ಯುತ್ತಮ ಶಿಕ್ಷಕರಾಗುವ ಅರ್ಹತೆ ಹೊಂದಿರುತ್ತಾರೆ. ಅವರು ಇತರರಿಗೆ ಹೇಳಿಕೊಡುವ ರೀತಿಯಿಂದಲೇ, ಅವರೊಬ್ಬ ಉತ್ತಮ ಶಿಕ್ಷಕರಾಗಬಹುದು ಎಂದು ಹೇಳಬಹುದು. ಯಾಕಂದ್ರೆ ಈ ರಾಶಿಯವರಿಗೆ ಹೆಚ್ಚು ತಾಳ್ಮೆ. ತಾಳ್ಮೆಯಿಂದ ಮಕ್ಕಳಿಗೆ ಪಾಠ ಮಾಡುವ ಅರ್ಹತೆ ಇವರಿಗಿರುತ್ತದೆ. ಪುಟ್ಟ ಮಕ್ಕಳಿಗೆ ಬುದ್ಧಿ ಹೇಳುವುದಾಗಲಿ, ಶಿಕ್ಷಣಕ್ಕೆ ಸಂಬಂಧಿಸಿದ್ದನ್ನು ಹೇಳಿಕೊಡುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರಿಗೂ ತಾಳ್ಮೆ ಹೆಚ್ಚು. ಹಾಗಾಗಿ ಅವರು ಕೂಡ ಮಕ್ಕಳೊಂದಿಗೆ ಸ್ನೇಹಿತರಂತೆ ಇರುವ ಗುಣ ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯವರು ಶಿಕ್ಷಕರಾಗುವ ಗುಣ ಹೊಂದಿರುತ್ತಾರೆ. ಅಲ್ಲದೇ ಒಮ್ಮೆ ತುಲಾ ರಾಶಿಯವರು ಒಬ್ಬರ ಜೊತೆ ಮಾತನಾಡಿದರೂ ಸಾಕು, ಅವರನ್ನು ನೆನಪಿಟ್ಟುಕೊಳ್ಳುವ ಮಟ್ಟಿಗೆ ಅವರ ಮಾತಿನ ಧಾಟಿ ಆಕರ್ಷಿತವಾಗಿರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯವರು ಕೂಡ ತಿಳಿಸಿ ಹೇಳುವುದರಲ್ಲಿ ಜಾಣರು. ತಾವೂ ಹಲವು ವಿಷಯಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು, ಇತರರಿಗೂ ಆ ಬಗ್ಗೆ ತಾಳ್ಮೆಯಿಂದ ವಿವರಿಸುವ ಗುಣ ಅವರಿಗಿರುತ್ತದೆ. ಗಮನ ಸೆಳೆಯುವಂತೆ ಅವರು ವಿಷಯವನ್ನು ವಿವರಿಸುತ್ತಾರೆ. ಹಾಗಾಗಿ ಇವರು ಕೂಡ ಶಿಕ್ಷಕರಾಗುವುದಕ್ಕೆ ಉತ್ತಮರು.

ಧನು ರಾಶಿ: ಧನು ರಾಶಿಯವರು ಹೇಳಿಕೊಡುವುದಕ್ಕಿಂತ ಹೆಚ್ಚಾಗಿ, ಕಲಿತುಕೊಳ್ಳುವ ಗುಣ ಹೊಂದಿರುತ್ತಾರೆ. ಹಲವು ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು. ನೀತಿ ನಿಯಮಗಳನ್ನು ಅರಿತು ನಡೆಯುವುದು. ಥಟ್ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುವುದು. ಇತ್ಯಾದಿ ಗುಣಗಳು ಇವರನ್ನು ಜಾಣರನ್ನಾಗಿ ಮಾಡಿರುತ್ತದೆ. ಇದೇ ಜಾಣತನವೂ ಇವರ ಮಾತಿನಲ್ಲಿ ಕಾಣುತ್ತದೆ. ಹಾಗಾಗಿ ಇವರು ಕೂಡ ಉತ್ತಮ ಶಿಕ್ಷಕರಾಗಬಹುದು.

- Advertisement -

Latest Posts

Don't Miss