Wednesday, February 5, 2025

Latest Posts

ಬೆಳಗಾವಿ ಅಧಿವೇಶನದಲ್ಲಿ ದಿವಂಗತ ಉದ್ಯಮಿ ರತನ್ ಟಾಟಾಗೆ ಸಂತಾಪ ಸೂಚನೆ

- Advertisement -

ಇನ್ನುBelagavi News: ಬೆಳಗಾವಿಯಲ್ಲಿ ಇಂದು ಚಳಿಗಾಲದ ಅಧಿವೇಶನದ ಮೊದಲ ದಿನವಾಗಿದ್ದು, ಈ ವರ್ಷ ನಮ್ಮೆಲ್ಲರನ್ನೂ ಅಗಲಿದ ಉದ್ಯಮಿ ರತನ್ ಟಾಟಾರ ಸಾವಿಗೆ ಸಂತಾಪ ಸೂಚಿಸಲಾಯಿತು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರತನ್ ನವಲ್ ಟಾಟಾ, ಭಾರತ ದೇಶ ಕಂಡಂಥ ಓರ್ವ ಖ್ಯಾತ ಕೈಗಾರಿಕೋದ್ಯಮಿ. ಮುಂಬೈನಲ್ಲಿ ಜನಿಸಿ, ಇಲ್ಲಿಯೇ ಶಾಲಾ ಶಿಕ್ಷಣ ಮುಗಿಸಿ, ವಿದೇಶದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಭಾರತಕ್ಕೆ ಬಂದು, ಇಲ್ಲಿನ ಉದ್ಯಮವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತರಾದರು.

ಟಾಟಾ ಟೆಲಿ ಸರ್ವಿಸಸ್ ಮತ್ತು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಕೂಡ ಸ್ಥಾಪಿಸಿದರು. ಇನ್ನು ಸಾಾಮಾನ್ಯ ಜನರೂ ಕೂಡ ಕಾರಿನಲ್ಲಿ ಓಡಾಡಬೇಕು ಎಂದು ನ್ಯಾನೋ ಎಂಬ ಕಾರನ್ನು ಬಿಡುಗಡೆ ಮಾಡಿದ್ದರು. ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೊಟ್ಟು ಕೇಂದ್ರ ಸರ್ಕಾರ ಅವರನ್ನು ಗೌರವಿಸಿದೆ. ಬರೀ ಉದ್ಯಮಿಯಲ್ಲದೇ, ಮಾನವತಾವಾದಿಯೂ ಆಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss