Political News: ನಿಖಿಲ್ ಸದ್ಯ ದೆಹಲಿ ಪ್ರವಾಸದಲ್ಲಿದ್ದು, ಇಂದು ಬಿಜೆಪಿ ಹೈಕಮಾಂಡ್ ನಾಯಕರನ್ನು ನಿಖಿಲ್ ಭೇಟಿಯಾಗಿದ್ದಾರೆ. ವಿಷಯದ ಪ್ರಕಾರ, ನಿಖಿಲ್ ಕುಮಾರ್ ಜೆಡಿಎಸ್ ರಾಜ್ಯಾಧ್ಯಕ್ಷವಾಗುವುದು ಕನ್ಫರ್ಮ್ ಆಗಿದ್ದು, ಹೀಗಾಗಿಯೇ ಅವರು ಬಿಜೆಪಿ ನಾಯಕರನ್ನು ಭೇಟಿಯಾದರು ಎನ್ನಲಾಗಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ, ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್, ಬಿ.ಎಲ್.ಸಂತೋಷ್ ಸೇರಿ ಹಲವು ಬಿಜೆಪಿ ನಾಯಕರನ್ನು ನಿಖಿಲ್ ಭೇಟಿಯಾಗಿದ್ದಾರೆ. ಜೆಡಿಎಸ್ ರಾಾಜ್ಯಾಧ್ಯಕ್ಷರಾಗುವ ಮುನ್ನ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್, ಬಿಜೆಪಿ ವರಿಷ್ಠ ನಾಯಕರೂ, ಕೇಂದ್ರ ಸರ್ಕಾರದ ಗೌರವಾನ್ವಿತ ಗೃಹ ಸಚಿವರೂ ಆಗಿರುವ ಶ್ರೀ ಅಮಿತ್ ಶಾ ಜೀ ಅವರನ್ನು ಸಂಸತ್ ಭವನದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲವರ್ಧನೆ ಮಾಡುವ ದೃಷ್ಟಿಯಿಂದ ಮಾನ್ಯರು ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ನೀಡಿದರು. ಅವರ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ. ಶ್ರೀ ಅಮಿತ್ ಶಾ ಜೀ ಅವರ ಸಂಘಟನಾ ಚತುರತೆ, ನಾಯಕತ್ವ ಗುಣಗಳು ನನ್ನನ್ನು ಒಳಗೊಂಡಂತೆ ಅಸಂಖ್ಯಾತ ಯುವಜನರಿಗೆ ಪ್ರೇರಣಾದಾಯಕ ಎಂದು ಬರೆದುಕೊಂಡಿದ್ದಾರೆ.