Tuesday, December 17, 2024

Latest Posts

AREKANUT CROP : ಅಡಕೆಯಿಂದ ಕ್ಯಾನ್ಸರ್, ಅಧ್ಯಯನಕ್ಕೆ ಮುಂದಾದ ಕೇಂದ್ರ

- Advertisement -

ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನ ಕಾನ್ಯರ್ ಪಟ್ಟಿಗೆ ಸೇರ್ಪಡೆಗೊಳಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಅಡಕೆ ಬೆಳೆಗಾರರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ರು. ಸದ್ಯ ಈ ಬಗ್ಗೆ ಕೊನೆಗೂ ಕೇಂದ್ರ ಸರ್ಕಾರ ಮಹತ್ವದ ದಿಟ್ದ ಹೆಜ್ಜೆ ಇರಿಸಿದೆ.

 

ಹೌದು ವಿಶ್ವ ಆರೋಗ್ಯ ಸಂಸ್ಥೆ ಕೆಲವು ದಿನಗಳ ಹಿಂದೆ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಅಂತ ಅಂದಿದ್ದು, ಅಡಿಕೆ ಬೆಳೆಗಾರರಲ್ಲಿ ಕಳವಳ ಮೂಡಿಸಿತ್ತು. ಸಂಪೂರ್ಣ ಅಧ್ಯಯನ ನಡೆ ಸದೆ, ಅಡಿಕೆ ಒಂದು ಭಾಗ ಮಾತ್ರವೇ ಆಗಿರುವ ತಂಬಾಕು ಸಹಿತ ಪಾನ್‌, ಪಾನ್‌ ಮಸಾಲಾ, ಗುಟ್ಕಾ ಇತ್ಯಾದಿ ಸೇವಿಸುವುದರಿಂದ ಕ್ಯಾನ್ಸರ್‌ ಉಂಟಾಗುವ ವಿಷಯವನ್ನಷ್ಟೇ ಎತ್ತಿಕೊಂಡು ಈ ರೀತಿಯ ವರ್ಗೀಕರಣ ಮಾಡಿದ್ದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಸದ್ಯ ಅಡಕೆ ಆರೋಗ್ಯ ಪರಿಣಾಮ ಬೀರುತ್ತೋ ಇಲ್ವೋ ಅನ್ನೋದನ್ನ ಅಧ್ಯಯನ ಮಾಡೋದಕ್ಕೆ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಸುಮಾರು 10 ಕೋಟಿ ರು. ಘೊಷಿಸಿದೆ.

 

 

ಅಂದಹಾಗೆ ಕಾಸರಗೋಡಿನ ಇಂಡಿಯನ್ ಕೌನ್ಸಿಲ್ ಆಫ್ ಆಗ್ರಿಕಲ್ಚರ್ ರೀಸರ್ಚ್ ನಡಿ ಕಾಸರಗೊಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ನೇತೃತ್ವದಲ್ಲಿ ಅಧ್ಯಯನ ನಡೆಯಲಿದೆ. ಇನ್ನು ಈ ಅಧ್ಯಯನಕ್ಕೆ ಸಿಪಿಸಿಆರ್ ಐ ನಿರ್ದೇಶನದ ಡಾ.ಕೆ.ಬಿ.ಹೆಬ್ಬಾರ್ ನೇತೃತ್ವದ ವಿಜ್ಣಾನಿಗಳ ತಂಡ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ.

 

ಇನ್ನು ಈ ಅಧ್ಯಯನಕ್ಕೆ 3.15 ಕೋಟಿ ರು. ನಂತೆ 3 ಹಂತಗಳಲ್ಲಿ ಹಣ ಬಿಡುಗಡೆಯಾಗಲಿದೆ. ದೇಶದ ಪ್ರತಿಷ್ಠಿತ ಏಮ್ಸ್ ನಂತಹ 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ಅಡಕೆ ಬಗ್ಗೆ ಆಳವಾದ ಅಧ್ಯಯನ ನಡೆಯಲಿದೆ. ಅಷ್ಟೇ ಅಲ್ಲದೇ ಮೂರು ವರ್ಷದದಲ್ಲಿ ಅಧ್ಯಯನ ಪೂರ್ಣಗೊಳಿಸಲು ಕಾಲಾವಕಾಶ ಮಾಡಿಕೊಡಲಾಗಿದೆ.

 

 

ವಿಶ್ವ ಆರೋಗ್ಯ ಸಂಸ್ಥೆಗೆ ಇದೂವರೆಗೆ ಗುಟ್ಕಾ ಅಥವಾ ತಂಬಾಕು ಸಹಿತ ಅಡಕೆ ಬಗ್ಗೆ ನಡೆಸಿದ ಅಧ್ಯಯನ ವರದಿ ಸಲ್ಲಿಸಲಾಗಿದೆ. ಅದರ ಆಧಾರದಲ್ಲೇ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ಅಂಶವನ್ನ ಹೇಳಲಾಗಿದೆ. ಇದೇ ಮೊದಲ ಬಾರಿಗೆ ಅಡಕೆ ಹಾಗೂ ಅದರ ಸೇವನೆ ಕುರಿತು ಅಧ್ಯಯನ ನಡೆಯಲಿದೆ.

ಮೊದಲ ಹಂತದಲ್ಲಿ ಅಡಕೆಯ ಸ್ಯಾಂಪಲ್ ನಾ ಪಡೆದು ಅಧ್ಯಯನ ನಡೆಸಲಾಗುವುದು. ಬರೀ ಅಡಕೆ ,ಅಡಕೆ ತಿನ್ನುವವರ ಮೇಲೆಯೂ ಮೇಲೆಯೂ ಪ್ರಯೋಗಗಳು ಪರೀಕ್ಷೆಯೂ ನಡೆಯಲಿದೆ. ಅಡಕೆ ತಿನ್ನುವುದರಿಂದ ಹಾಗೂ ಗುಟ್ಕಾ ಸೇವನೆಯಿಂದ ದಂತ ಕ್ಯಾನ್ಸರ್ ಸಂಭವಿಸಿರುವ ಬಗ್ಗೆಯೂ ದಂತ ವೈದ್ಯಕೀಯ ಆಸ್ವತ್ರೆಗಳಲ್ಲಿ ಅಧ್ಯಯನ ನಡೆಯಲಿದೆ. ಮುಂದಿನ ಹಂತಗಳಲ್ಲಿ ಇಲಿ, ಹಲ್ಲಿ ಮುಂತಾದವುಗಳ ಮೇಲೂ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ಕೊನೆ ಹಂತದಲ್ಲಿ ಸಮಗ್ರ ಅಧ್ಯಯನ ನಡೆದು ಅಡಕೆ ಆರೋಗ್ಯಕ್ಕೆಉತ್ತಮ ಹೌದೋ ಇಲ್ವೋ ಅನ್ನೋದು ಗೊತ್ತಾಗಬೇಕಿದೆ.

- Advertisement -

Latest Posts

Don't Miss