Monday, December 23, 2024

Latest Posts

ಸದ್ಯಕ್ಕೆ ಉಪಯೋಗವಾಗುವ ಉದ್ಯಮಗಳಿವು:ಇದನ್ನ ಆರಂಭಿಸುವ ಬಗ್ಗೆ ಇಲ್ಲಿದೆ ಮಾಹಿತಿ..!

- Advertisement -

ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಈ ರೋಗದಿಂದ ಬಚಾವಾಗೋದಕ್ಕೆ ಜನ ಪಡ್ತಾ ಇರೋ ಪಾಡು ಅಷ್ಟಿಷ್ಟಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಸುವವರ ಸಂಖ್ಯೆ ಜಾಸ್ತಿನೇ ಇದೆ. ಇದನ್ನ ಅವಕಾಶವಾಗಿ ತೆಗೆದುಕೊಂಡ ಕೆಲ ಜನ ಮಾಸ್ಕ್ ಸ್ಯಾನಿಟೈಸರ್ ರೆಡಿ ಮಾಡಿ ಒಳ್ಳೆ ಲಾಭ ಗಳಿಸಿಕೊಂಡಿದ್ದಾರೆ. ಇದರಂತೆ ನೀವು ಕೂಡ ಮಾಸ್ಕ್, ಸ್ಯಾನಿಟೈಸರ್ ಜೊತೆ ಇನ್ನು ಕೆಲ ಉದ್ಯಮ ಶುರು ಮಾಡಿ ಲಾಭ ಮಾಡಿಕೊಳ್ಳುವ ಐಡಿಯಾ ನಾವಿವತ್ತು ಕೊಡಲಿದ್ದೇವೆ. ಏನದು ಐಡಿಯಾ ಅನ್ನೋದನ್ನ ನೋಡೋಣ ಬನ್ನಿ.

ಮಾಸ್ಕ್ ಉದ್ಯಮ: ಕೊರೊನಾ ವೈರಸ್ ತಡೆಗಟ್ಟೋದ್ರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪ್ರಾತ್ರ ವಹಿಸಿದ್ದು ಮಾಸ್ಕ್. ಮಾಸ್ಕ್ ಧರಿಸದೇ ಯಾರೂ ಹೊರಬರುವಂತಿಲ್ಲ. ಹಾಗೇನಾದ್ರೂ ಬಂದ್ರೆ ಒಂದು ದಂಡ ಇಲ್ಲಾ ಜೈಲು ಗ್ಯಾರಂಟಿ. ಹೀಗಾಗಿ ಜನ ಮಾಸ್ಕ್ ಹಾಕೊಂಡೇ ತಿರುಗಾಡ್ತಾರೆ. ಈ ಮೂಲಕ ಮಾಸ್ಕ್‌ಗೆ ಬೇಡಿಕೆ ದುಪ್ಪಟ್ಟಾಗಿದೆ.
ನೀವು ಮಾಸ್ಕ್ ಉದ್ಯಮ ಆರಂಭಿಸುವುದಿದ್ದರೆ 20 ರಿಂದ 30 ಸಾವಿರ ಬಂಡವಾಳವಂತೂ ಹೂಡಲೇಬೇಕು.

ಎರಡನೇಯದಾಗಿ ಸರ್ಜಿಕಲ್ ಗೌನ್ಸ್: ಪಿಪಿಇ ಕಿಟ್‌ನಲ್ಲಿ ಮುಖ್ಯವಾಗಿ ಇರುವುದು ಸರ್ಜಿಕಲ್ ಗೌನ್. ಕೆಲ ಕಡೆ ಪಿಪಿಇ ಕಿಟ್ ಸರಿಯಾಗಿ ಪೂರೈಕೆಯಾಗುತ್ತಿಲ್ಲವೆಂಬ ದೂರಿದೆ. ಹಾಗಾಗಿ ಸರ್ಜಿಕಲ್ ಗೌನ್ ಉದ್ಯಮ ಆರಂಭಿಸಿ, ನೀವು ಅದನ್ನ ಸರಿಯಾದ ರೀತಿಯಲ್ಲಿ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ತಲುಪಿಸುವ ಕೆಲಸ ಮಾಡಿದ್ರೆ, ಉತ್ತಮ ಲಾಭ ಗಳಿಸಬಹುದು. ಇದಕ್ಕೆ ನೀವು 40 ಸಾವಿರ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ.

ಗ್ಲೌಸ್ ಉದ್ಯಮ: ಆಫೀಸ್‌ಗಳಲ್ಲಿ, ಆಸ್ಪತ್ರೆಯಲ್ಲಿ, ಕಿರಾಣಿ ಅಂಗಡಿ, ಹಣ್ಣು ತರಕಾರಿ ಮಾರುವವರು ಸೇರಿ ಹಲವರು ಗ್ಲೌಸ್ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕೆಂಬ ರೂಲ್ಸ್ ಇದೆ. ಹಾಗಾಗಿ ಗ್ಲೌಸ್‌ಗೂ ಕೂಡ ಹೆಚ್ಚಿನ ಡಿಮ್ಯಾಂಡ್ ಇದೆ. ಸಣ್ಣ ಮಟ್ಟದಲ್ಲಿ ಗ್ಲೌಸ್ ಉದ್ಯಮ ಶುರು ಮಾಡುವುದಿದ್ದರೆ 50 ಸಾವಿರ ರೂಪಾಯಿಯಾದರೂ ಬೇಕು.

ಸ್ಯಾನಿಟೈಸರ್: ಕೊರೊನಾ ಕಾಟ ಶುರುವಾದ ಮೇಲೆ ಎಲ್ಲರೂ ಮೊದಲು ಮೊರೆ ಹೋಗಿದ್ದೇ ಹ್ಯಾಂಡ್ ಸ್ಯಾನಿಟೈಸರ್‌ಗೆ. ಇದರ ಅವಶ್ಯಕತೆ ಇನ್ನು ಒಂದು ವರ್ಷವಾದ್ರೂ ಇದೆ. ಅದರ ನಂತರವೂ ಜನ ಸ್ಯಾನಿಟೈಸರ್ ಬಳಕೆ ಮಾಡಲೂಬಹುದು. ಹಾಗಾಗಿ ಹ್ಯಾಂಡ್ ಸ್ಯಾನಿಟೈಸರ್‌ ಉದ್ಯಮ ಲಾಭಕರವಾಗಿದೆ.

ಸೋಪ್ ಬ್ಯುಸಿನೆಸ್: ಈಗಂತೂ ಆಯುರ್ವೇದಿಕ್ ಸೋಪ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ. ವೆರೈಟಿ ವೆರೈಟಿ ಸೋಪ್ ಮಾಡಿ ಮಾರಬಹುದು. ಈ ಉದ್ಯಮಕ್ಕೆ 20 ಸಾವಿರ ಬಂಡವಾಳ ಹೂಡಬೇಕಾಗುತ್ತದೆ.

ಆಯುರ್ವೇದಿಕ್ ಪ್ರಾಡಕ್ಟ್: ಕೊರೊನಾ ಬಂದಾಗಿಂದ ಹೆಚ್ಚಿನ ಜನ ಆಯುರ್ವೇದದ ಮೊರೆ ಹೋಗಿದ್ದಾರೆ. ಹರ್ಬಲ್ ಟೀ, ಆಯುರ್ವೇದಿಕ್ ಸ್ನ್ಯಾಕ್ಸ್, ಜ್ಯೂಸ್‌ಗಳ ಉದ್ಯಮ ಶುರು ಮಾಡಬಹುದು. ಆದ್ರೆ ಅದಕ್ಕೆ ಲೈಸೆನ್ಸ್ ಅಗತ್ಯವಿದೆ. ಈ ಉದ್ಯಮಕ್ಕೆ 50 ಸಾವಿರ ಬಂಡವಾಳ ಹೂಡಬೇಕಾದಿತು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss