Tuesday, September 23, 2025

Latest Posts

CREDIT CARD: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ. ಶೇಕಡಾ 30ಕ್ಕಿಂತ ಹೆಚ್ಚಿನ‌ ಬಡ್ಡಿ ವಿಧಿಸಬಹುದು

- Advertisement -

ಕ್ರೆಡಿಟ್ ಕಾರ್ಡ್ ನ ಬಾಕಿಗಳ ಮೇಲೆ ಇನ್ಮುಂದೆ ಬ್ಯಾಂಕುಗಳು ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಹುದು. ಇಂತಿಷ್ಟೇ ಬಡ್ಡಿ ವಿಧಿಸಬೇಕು ಅಂತ ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯಲೇಶನ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ವರ್ಷಕ್ಕೆ ಶೇ.30 ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು.ಒಂದು ವೇಳೆ ಹಾಗೆ ಮಾಡಿದ್ರೆ ಅದು ಗ್ರಾಹಕರ ಶೋಷಣೆಯಾಗಿರುತ್ತದೆ ಅಂತ ಎನ್ ಸಿ ಡಿ ಆರ್ ಸಿ 16 ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.

 

ಇನ್ನು ಎನ್ ಸಿ ಡಿ ಆರ್ ಸಿ ನೀಡಿದ್ದ ತೀರ್ಪು, ಆರ್ ಬಿ ಐ ಅಧಿಕಾರದಲ್ಲಿ ಮೂಗು ತೂರಿಸಿದಂತಾಗುತ್ತಿತ್ತು. ಅದ್ರೊಂದಿಗೆ ಬ್ಯಾಂಕು ಹಾಗೂ ಗ್ರಾಹಕರ ಮಧ್ಯೆ ನಡೆದಿರುವ ಒಪ್ಪಂದದ ಕರಾರುಗಳನ್ನು ಬದಲಿಸಲು ಎನ್ ಸಿ ಡಿ ಆರ್ ಸಿಗೆ ಅಧಿಕಾರವಿಲ್ಲ ಅಂತ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಹೇಳಿದೆ.

ಇನ್ನು ಬಡ್ಡಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕಾಲ ಕಾಲಕ್ಕೆ ಮನದಟ್ಟು ಮಾಡಿರುತ್ತದೆ. ಅಲ್ಲದೇ ದೇಶದ ಯಾವುದೇ ಬ್ಯಾಂಕ್ ಕೂಡ ಆರ್.ಬಿ.ಐ. ಸೂಚನೆಯನ್ನ ಇಲ್ಲಿಯವರೆಗೂ ಮೀರಿಲ್ಲ ಅಂತ ಅಭಿಪ್ರಾಯಪಟ್ಟಿದೆ.

ಎನ್ ಸಿ ಡಿ ಆರ್ ಸಿ ನೀಡಿದ್ದ ಆದೇಶದ ವಿರುದ್ಧ 2008ರ ಜುಲೈನಲ್ಲಿ ಸಿ.ಟಿ ಬ್ಯಾಂಕ್ ,ಅಮೆರಿಕನ್ ಎಕ್ಸ್ ಪ್ರೆಸ್, ಎಚ್ ಎಸ್ ಬಿ ಸಿ ಮತ್ತು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕುಗಳು ಸುಪ್ರೀಂ ಕೋರ್ಟ್ನ ಮೇಟ್ಟಿಲೇರಿದ್ದವು. ಇನ್ನು ಡಿ.20 ಕ್ಕೆ ನ್ಯಾಯಾಲಯವು ಈ ಮಹತ್ವದ ತೀರ್ಪನ್ನ ನೀಡಿದೆ

- Advertisement -

Latest Posts

Don't Miss