ಶತಕೋಟ್ಯಧೀಶ್ವರ ವಾರೆನ್ ಬಫೆಟ್ ತನ್ನ ನಿಧನ ಬಳಿಕ ತನ್ನೆಲ್ಲಾ ಆಸ್ತಿ ಹೇಗೆ ಹಂಚಿಕೆಯಾಗಬೇಕು ಅನ್ನೋದ್ರ ಮಾಹಿತಿಯನ್ನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಆ ಮೂಲಕ ಪೋಷಕರಿಗೆ ವಿಲ್ ಬರೀಯೋ ಬಗ್ಗೆ ಕಿವಿ ಮಾತು ಹೇಳಿದ್ದಾರೆ.
ಅಂದಹಾಗೆ 94 ವರ್ಷದ ಹೂಡಿಕೆದಾರ ವಾರೆನ್ ಬಿಫೆಟ್ ದಿ ಬರ್ಕ್ ಶೈರ್ ಹಾಥ್ ವೇ ಸಿಇಒ ಆಗಿದ್ದು, ಈ ಕುರಿತಾಗಿ ಪತ್ರವೊಂದನ್ನ ಕಂಪೆನಿ ಜಾಲತಾಣದಲ್ಲಿ ಪ್ರಕಟಿಸಿದೆ.
ನಿಧನದ ಬಳಿಕ ತಮ್ಮ ಕುಟುಂಬದ 4 ಫೌಂಡೇಶನ್ ಗಳಿಗೆ 1.1 ಶತಕೋಟಿ ಡಾಲರ್ ಹಂಚಿಕೆಯಾಗಲಿದೆ. ಬಳಿಕ ಹಂತ ಹಂತವಾಗಿ ಉಳಿದ ಷೇರುಗಳು 71,69 ಮತ್ತು64 ವಯಸ್ಸಿನ ತಮ್ಮ ಮೂರು ಮಕ್ಕಳಿಗೆ ಹಂಚಿಕೆಯಾಗಲಿದೆ ಅಂತ ಅಂದಿದ್ದಾರೆ. ಇದೇ ವೇಳೆ ತಮ್ಮ ಉದ್ದೇಶಗಳನ್ನು ಈಡೇರಿಸಲು ಮಕ್ಕಳು ವಿಫಲರಾಗದಂತೆ ನೋಡಿಕೊಳ್ಳಲು ಮೂವರು ಟ್ರಸ್ಟಿಗಳನ್ನು ನೇಮಿಸಿದ್ದೇನೆ ಅಂತ ಬರೆದುಕೊಂಡಿದೆ.
ಇನ್ನು ಪೋಷಕರಿಗೂ ಸಲಹೆ ನೀಡಿದ್ದು. ಸಾಧಾರಣ ಇಲ್ಲವೇ ಭಾರಿ ಪ್ರಮಾಣದಲ್ಲಿ ಆಸ್ತಿ ಹೊಂದಿದ್ರೂ ನಿಮ್ಮ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಅವರ ಮುಂದೆ ನಿಮ್ಮ ವಿಲ್ ಓದಿ ಹೇಳಿ. ಇದ್ರಿಂದ ಭವಿಷ್ಯದಲ್ಲಿ ತಪ್ಪು ಕಲ್ಪನೆಗಳು ದೂರಾಗಿ , ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ ಅಂದಿದ್ದಾರೆ.


