www.karnatakatv.net : ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ.. ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಹಾಗಾಗಿ ಇದೀಗ ಚಾಪ್ಟರ್ 2 ಬಗ್ಗೆ ಕೂಡ ಸಿನಿಪ್ರಿಯರಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಇದೆ.. ಕೆಲ ದಿನಗಳ ಹಿಂದಷ್ಟೇ ಯಶ್ ಹಾಗೂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.. ಆ ಫೋಟೋದಲ್ಲಿ ಯಶ್ ಕೊಂಚ ಸಣ್ಣಗಾದಂತೆಯೂ ಕಾಣುತ್ತಿದ್ರು.. ಯಶ್ ಹೀಗೆ ತಮ್ಮ ಲುಕ್ ನಲ್ಲಿ ಬದಲಾವಣೆ ಮಾಡಿಕೊಂಡಿರುವುದೇ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ..

ಕೆಜಿಎಫ್ ಚಾಪ್ಟರ್ 1ನಲ್ಲಿ ನಾಯಕ ಗರುಡನನ್ನು ಕೊಂದು ನರಾಚಿಯಲ್ಲಿ ತನ್ನ ಅಧಿಪತ್ಯವನ್ನ ಸಾಧಿಸುತ್ತಾನೆ.. ಈಗ ನಿರ್ಮಾಣಗೊಳ್ತಿರುವ ಕೆಜಿಎಫ್ ಚಾಪ್ಟರ್ 2ನಲ್ಲಿ ಅದರ ಮುಂದುವರೆದ ಭಾಗ ಇರಲಿದ್ಯಂತೆ.. ಇದಕ್ಕಾಗಿ ಯಶ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ.. ವಿಶೇಷ ಅಂದ್ರೆ ಕೊಂಚ ಫ್ಲಾಶ್ ಬ್ಯಾಕ್ ಗೆ ಹೋಗಿ ಟೀನೇಜ್ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ.. ಅದಕ್ಕಾಗಿ ಅವರು ಈಗಾಗ್ಲೇ ಸುಮಾರು 14 ಕೆ.ಜಿ ತೂಕ ಇಳಿಸಿಕೊಂಡಿದ್ದು ಮತ್ತಷ್ಟು ಸ್ಲಿಮ್ ಆಗಿದ್ದಾರೆ.. ಈ ಹಿಂದೆ ಚಿತ್ರದ ಎರಡನೇ ಭಾಗದಲ್ಲಿ ಚಿಕ್ಕ ವಯಸ್ಸಿನ ಭಾಗ ಬರುತ್ತೆ, ಅದ್ರಲ್ಲಿ ನಾನು ಚಿಕ್ಕ ಹುಡುಗನ ರೀತಿ ಕಾಣ್ಬೇಕು ಅಂತ ತಮ್ಮ ಪರ್ಸನಲ್ ವರ್ಕೌಟ್ ಟ್ರೇನರ್ ಪಾನಿಪುರಿ ಕಿಟ್ಟಿಗೆ ಹೇಳಿದ್ರಂತೆ.. ಹಾಗಾಗಿ ಲಾಕ್ ಡೌನ್ ಗಿಂತ್ಲೂ ಮೊದಲು ಯಶ್ ಪ್ರತಿದಿನ ಬೆಳಗ್ಗೆ 2 ಗಂಟೆ ಹಾಗೂ ಸಂಜೆ ಎರಡು ಗಂಟೆಗಳ ವರ್ಕೌಟ್ ಮಾಡ್ತಿದ್ರಂತೆ.. ಆಗ ಯಶ್ ಎಲ್ಲೇ ಚಿತ್ರೀಕರಣಕ್ಕೆ ಹೋದ್ರೂ ಕಿಟ್ಟಿ ಅವರೂ ಸಹ ಅವರ ಜೊತೆಗಿರ್ತಿದ್ರಂತೆ.. ಯಶ್ ಅವರಿಗೆ ತಮ್ಮ ಕೆಲಸದ ಬಗ್ಗೆ ಬಹಳ ಡೆಡಿಕೇಶನ್ ಇದೆ ಹಾಗಾಗಿನೇ ಅವರಿಗೆ ಅಷ್ಟು ಬೇಗ ರಿಸಲ್ಟ್ ಸಿಕ್ಕಿದೆ..
ಲಾಕ್ ಡೌನ್ ಗೆ ಮೊದಲು ಚಿತ್ರೀಕರಣ ಇಲ್ಲದ ಸಮಯದಲ್ಲಿ ಯಶ್ ಬೆಳಗ್ಗೆ ಹಾಗೂ ಸಂಜೆ ಕಿಟ್ಟಿ ಅವರ ಜಿಮ್ ಗೆ ಹೋಗಿ ವರ್ಕೌಟ್ ಮಾಡ್ತಿದ್ರು.. ಆದ್ರೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಚಿಕ್ಕ ಮಕ್ಕಳು, ವಯಸ್ಸಾದವ್ರು ಇರುವ ಕಾರಣ ಜೊತೆಗೆ ಜಿಮ್ ಕೂಡ ತೆಗೆದಿರದ ಕಾರಣದಿಂದ ಮನೆಯಲ್ಲೇ ಸಾಧ್ಯವಾದಷ್ಟು ವರ್ಕೌಟ್ ಮಾಡಿದ್ರು.. ಅಲ್ಲದೆ ಆಹಾರದ ವಿಷ್ಯದಲ್ಲೂ ಡಯಟ್ ಫಾಲೋ ಮಾಡಿದ್ರು.. ಹಾಗಾಗಿ ಅಷ್ಟು ಬೇಗ ಯಶ್ ತಮ್ಮ ಲುಕ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಿದೆ.. ಕೊರೋನಾ ಹಾವಳಿ ಇಲ್ಲದೇ ಹೋಗಿದ್ರೆ, ಇಷ್ಟೊತ್ತಿಗಾಗ್ಲೇ ಚಿತ್ರೀಕರಣ ಮುಗಿದು ಸಿನಿಮಾ ರಿಲೀಸ್ ಗೆ ರೆಡಿಯಾಗಿರ್ತಿತ್ತು.. ಅಕ್ಟೋಬರ್ 23ಕ್ಕೆ ಚಿತ್ರವನ್ನ ರಿಲೀಸ್ ಮಾಡಲು ಚಿತ್ರತಂಡ ಕೂಡ ಪ್ಲಾನ್ ಮಾಡಿತ್ತು.. ಬಟ್ ಕೊರೋನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಶೂಟಿಂಗ್ ತಡವಾಗ್ತಿದೆ.. ಚಿತ್ರದ ಇನ್ನೂ ಒಂದಷ್ಟು ದಿನಗಳ ಶೂಟಿಂಗ್ ಬಾಕಿ ಇದೆ.. ಇನ್ನೇನು ಕೆಲ ದಿನಗಳಲ್ಲೇ ಮತ್ತೆ ಚಿತ್ರೀಕರಣ ಆರಂಭವಾಗಲಿದ್ದು, ಯಶ್ ಮತ್ತೆ ಕಠಿಣ ವರ್ಕೌಟ್ ಶುರು ಮಾಡಲಿದ್ದಾರಂತೆ..
ಕೆಜಿಎಫ್ ಚಾಪ್ಟರ್ 2ನಲ್ಲಿ ಸಾಕಷ್ಟು ವಿಶೇಷತೆಗಳಿವೆ.. ಬಾಲಿವುಡ್ ಕಲಾವಿದರಾದ ಸಂಜಯ್ ದತ್ ಹಾಗೂ ನಟಿ ರವೀನಾ ಟಂಡನ್ ಕೂಡ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಈಗಾಗ್ಲೇ ಹೊರಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟರ್ಸ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿರುವ ಕುತೂಲವನ್ನ ದುಪ್ಪಟ್ಟು ಮಾಡಿವೆ.. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯಲ್ಲಿರುವ ಸಿನಿಪ್ರಿಯರು ಚಿತ್ರದ ಟ್ರೇಲರ್ ಹಾಗೂ ಆಡಿಯೋ ಯಾವಾಗ ಬಿಡುಗಡೆಯಾಗಲಿದೆ ಅಂತ ಕಾಯ್ತಿದ್ದಾರೆ.. ಚಿತ್ರತಂಡ ಚಿತ್ರದ ಅಫೀಶಿಯಲ್ ಟ್ರೇಲರ್ ನ್ನ ರಿವೀಲ್ ಮಾಡೋ ಮೊದಲೇ ಫ್ಯಾನ್ಸ್ ತಾವೇ ವಿಭಿನ್ನ ರೀತಿಯಲ್ಲಿ ಟ್ರೇಲರ್ ಗಳನ್ನ ಸಿದ್ಧಪಡಿಸಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದು, ಅವೆಲ್ಲವೂ ಲಕ್ಷಾಂತರ ವೀಕ್ಷಣೆ ಪಡೆದಿವೆ.. ಅಂದ್ಮೇಲೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಹೇಗಿದೆ ಅನ್ನೋದು ಅದ್ರಲ್ಲೇ ಗೊತ್ತಾಗುತ್ತೆ.. ಅಂದಹಾಗೆ ವಿಜಯ್ ಕಿರಂದೂರು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.. ಬಿಗ್ ಬಜೆಟ್ ನಲ್ಲಿ ತಯಾರಾಗ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಈ ಐದೂ ಭಾಷೆಗಳಲ್ಲೂ ಮೂಡಿಬರಲಿದೆ..
ಚಂದನ, ಸಿನಿಮಾ ಬ್ಯುರೋ, ಕರ್ನಾಟಕ ಟಿವಿ
