ಸರ್ಕಾರಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರೆಬೆಲ್ ಟೀಂ ಭೇಟಿಗೆ ನಿರಾಕರಿಸಿದ್ದಾರೆ. ಇದು ಯತ್ನಾಳ್ ತಂಡದ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ, ರಾಜ್ಯಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಜತೆಗೆ ಮಾತ್ರ ಗುರುವಾರ ಮಧ್ಯ ರಾತ್ರಿಯವರೆಗೂ ಚರ್ಚೆ ನಡೆಸಿದ್ದು, ಭಿನ್ನಮತ ಚಟುವಟಿಕೆ ವಿರುದ್ಧ ವಿಜಯೇಂದ್ರ ಖಡಕ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ವಿಪಕ್ಷನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಕೆಲವು ನಾಯಕರೊಂದಿಗೆ ಮುಖಾ ‘ಮುಖಿ ಚರ್ಚೆ ನಡೆಸಿದ್ದಾರೆ.ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಡ್ಡಾ ಅವರನ್ನು ವಿಜಯೇಂದ್ರ, ಅಶೋಕ್, ಛಲವಾದಿ ನಾರಾಯ ಣಸ್ವಾಮಿ ಬರಮಾಡಿಕೊಂಡರು. ಆದರೆ, 9.30 ರ ಸುಮಾರಿಗೆ ವಿಮಾನ ನಿಲ್ದಾಣ ದಿಂದ ವಿಜಯೇಂದ್ರ ಜತೆಗೆ ಹೊರಟ ನಡ್ಡಾ ದಾರಿಯುದ್ದಕ್ಕೂ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು.
10.30ರಿಂದ 11.45ರ ವರೆಗೂ ನಿಮ್ಹಾನ್ಸ್ ಅತಿಥಿಗೃಹದಲ್ಲಿ ನಡ್ಡಾ ಹಾಗೂ ವಿಜಯೇಂದ್ರ ಮಾತುಕತೆ ನಡೆಸಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಪಕ್ಷ ಸಂಘಟನೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದಾರೆ.
ಯತ್ನಾಳ್ ನನ್ನ ವಿರುದ್ದ ಮಾತ್ರವಲ್ಲ, ಕೇಂದ್ರ ಸಚಿವರಾಗಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿರುದ್ದವೇ ಟೀಕಿಸಿದ್ದರು. ಯಡಿಯೂರಪ್ಪ ಅವರೂ ಯತ್ನಾಳ್ ಬಾಯಿಗೆ ಆಹಾರವಾಗಿದ್ದಾರೆ. ಈಗ ನನ್ನನ್ನು ಕಾಡುತ್ತಿದ್ದಾರೆ. ಯತ್ನಾಳ್ ಮಾತಿನಿಂದ ಎಲ್ಲರಿಗೂ ಮುಜುಗರ ಸೃಷ್ಟಿಯಾಗುತ್ತಿದೆಯೇ ವಿನಃ ಪಕ್ಷಕ್ಕಂತೂ
ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ವಕ್ಸ್ ಪ್ರತ್ಯೇಕ ಹೋರಾಟಕ್ಕೆ ಬ್ರೇಕ್ ಹಾಕುವಂತೆ ನಾವು ಒತ್ತಾಯ ಮಾಡಿದ್ದೆವು ಎಂದು ವಿಜಯೇಂದ್ರ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ರೆಬೆಲ್ಸ್ ಟೀಂ ಪರವಾಗಿ ಮಾಜಿ ಸಚಿವ ಅರವಿಂದ ಲಿಂಬಾ ವಳಿ ನಡ್ಡಾ ಅವರ ಬಳಿ ಸಮಾಯಾವಕಾಶ ಕೋರಿದ್ದರು. ಆದರೆ, ಭಿನ್ನರ ಪರವಾಗಿ ಯಾರಿಗೂ ಅವರು ಅವಕಾಶ ನೀಡಿಲ್ಲ. ಇದು ಯತ್ನಾಳ್ ಬಣದ ಆಕ್ರೋಶಕ್ಕೆ ಕಾರಣವಾಗಿದ್ದು, ವಕ್ಸ್ 2ನೇ ಹಂತದೆ ಹೋರಾಟ ನಡೆಸುವುದಕ್ಕೆ ಬಳ್ಳಾರಿಯಲ್ಲಿ ಸಮಾವೇಶ ನಡೆಸುವ ತೀರ್ಮಾನದೊಂದಿಗೆ ತೆರಳಿದ್ದಾರೆ ಅನ್ನೋದು ಗೊತ್ತಾಗಿದೆ.
ಮಾಜಿ ಸಚಿವ ಮುನಿರತ್ನ ಕೂಡಾ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ತಮ್ಮ ವಿರುದ್ಧ ನಡೆ ಯುತ್ತಿರುವ ಸಂಚಿನ ಬಗ್ಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧದ ಪ್ರಕರಣಗಳ ಬಗ್ಗೆ ಭೇಟಿ ವೇಳೆ ಪ್ರಸ್ತಾಪಿಸಿದ ಮುನಿರತ್ನ, ಕಾಂಗ್ರೆಸ್ ಪಕ್ಷದಿಂದ ವಿನಾ ಕಾರಣ ನನ್ನನ್ನು ಗುರಿಯಾಗಿಸಿ ತೊಂದರೆ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ .
ನಿಮ್ಹಾನ್ಸ್ ಕಾರ್ಯಕ್ರಮದ ಬಳಿಕ ಕುಮಾರಕೃಪಾ ಅತಿಥಿಗೃಹಕ್ಕೆ ಆಗಮಿಸಿದ ನಡ್ಡಾ, ರಾಜ್ಯ ಬಿಜೆಪಿ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿ ತಿಯನ್ನು ಪಡೆದುಕೊಂಡಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಲೇಹರ್ ಸಿಂಗ್, ತೇಜಸ್ವಿ ಸೂರ್ಯ, ಶಾಸಕರಾದ ಡಾ. ಅಶ್ವಥನಾರಾ ಯಣ, ಮುನಿರತ್ನ, ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಎನ್. ರವಿಕು ಮಾರ್ ಸೇರಿದಂತೆ ಹಲವರ ಜತೆಗೆ ಪ್ರತ್ಯೇಕವಾಗಿ ಮುಖಾಮುಖಿ ಮಾತುಕತೆ ನಡೆಸಿದ್ದಾರೆ.
ಇನ್ನು ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಹಜವಾಗಿಯೇ ನಾವು ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆ ಸಿದ್ದೇವೆ. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಸಂಘಟ ನೆಯ ಬಗ್ಗೆ ವಿವರಣೆ ಕೇಳಿದರು, ಕೊಟ್ಟಿದ್ದೇವೆ. ವಿಪಕ್ಷ ನಾಯಕರಾಗಿ ನಾವು ಮಾಡಿರುವ ಎಲ್ಲ ಕೆಲಸಗಳ ಬಗ್ಗೆ ಮಾಹಿತಿ ಒದಗಿಸಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು. ಶನಿವಾರ ಕಲಬುರ್ಗಿ ಪ್ರತಿಭಟನೆಯಲ್ಲಿ ಯತ್ನಾಳ್ ಟೀಮ್ ಭಾಗಿ ಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ. ಇಂದು ಯತ್ನಾಳ್ ಟೀಮ್ ನಡ್ಡಾರನ್ನು ಭೇಟಿ ಮಾಡಿಲ್ಲ ಎಂದರೆ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಅಂತ ಅರ್ಥ. ಭಿನ್ನಮತ ಇದ್ದಿದ್ದರೆ ಅವರು ನಡ್ಡಾ ಅವರನ್ನು ಭೇಟಿ ಆಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.