ಮಂಡ್ಯ: ಮಂಡ್ಯ ಎಸ್ಪಿ ಕಚೇರಿ ಡಿ ಗ್ರೂಪ್ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ, ಮಂಡ್ಯದಲ್ಲಿ ಎಸ್ಪಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ. ಇನ್ನು ಕೊರೊನಾ ತಗುಲಿದ ಸಿಬ್ಬಂದಿ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಎಸ್ಪಿ ಕಚೇರಿ ಇದ್ದು, ನಗರಸಭೆ ಪೌರ ಕಾರ್ಮಿಕರಿಂದ ಎಸ್ಪಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.

ಕಚೇರಿ ಒಳಾಂಗಣ ಹಾಗೂ ಹೊರಾಂಗಣಕ್ಕೆ ಸಿಬ್ಬಂದಿಗಳಿಂದ ಕ್ರೀಮಿನಾಶಕ ಸಿಂಪಡಣೆ ಮಾಡಲಾಗಿದ್ದು, ಕಚೇರಿಗೆ ಸ್ಯಾನಿಟೈಜ್ ಹಿನ್ನಲೆ ಪಕ್ಕದಲ್ಲೆ ಪೇಂಡಲ್ ಹಾಕಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತಿದೆ.
ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಶೋಭಾರಾಣಿ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದ್ದು, ಸಿಬ್ಬಂದಿಗೆ ಸೋಂಕು ಖಚಿತವಾದ ಹಿನ್ನಲೆ ಎಸ್ಪಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.
ಇನ್ನೊಂದೆಡೆ ಮಂಡ್ಯದ ಪೊಲೀಸ್ ಕ್ವಾಟರ್ಸ್ಟ್ಗೂ ಕೊರೊನಾ ವಕ್ಕರಿಸಿದ್ದು, ಪೋಲಿಸ್ ಕ್ವಾಟರ್ಸ್ ಸೀಲ್ ಡೌನ್ ಮಾಡಲಾಗಿದೆ. ಮೂವರು ಪೊಲೀಸ್ ಪೇದೆಗಳಿಗೆ ಸೋಂಕು ಧೃಡಪಟ್ಟ ಹಿನ್ನೆಲೆ, ಬ್ಯಾರಿಕೇಡ್ ಮೂಲಕ ಪೋಲಿಸ್ ಕ್ವಾಟರ್ಸ್ ಪ್ರದೇಶ ಸೀಲ್ ಡೌನ್ ಮಾಡಲಾಗಿದ್ದು, ಪೋಲಿಸ್ ಸಿಬ್ಬಂದಿಗಳಿಗೆ ಆತಂಕ ಹೆಚ್ಚಾಗಿದೆ.
ಪ್ರಸನ್ನ, ಕರ್ನಾಟಕ ಟಿವಿ, ಮಂಡ್ಯ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




