Monday, December 23, 2024

Latest Posts

ಬೇಕರಿ ಉದ್ಯಮ ಶುರು ಮಾಡಬೇಕೆಂದಿದ್ದಿರೇ..? ಹಾಗಾದ್ರೆ ನಿಮಗಾಗಿ ಕೆಲ ಟಿಪ್ಸ್ ಇಲ್ಲಿದೆ ನೋಡಿ..!

- Advertisement -

ಕೇಕ್.. ಹಲವರ ಫೇವರಿಟ್ ತಿಂಡಿ. ಬರ್ತ್‌ ಡೇ, ಎಂಗೇಜ್‌ಮೆಂಟ್, ಮದುವೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸೆಲೆಬ್ರೇಟ್ ಮಾಡುವಾಗ ಕೇಕ್ ಕಟ್ ಮಾಡಿಸಿ, ಎಂಜಾಯ್ ಮಾಡ್ತಾರೆ. ಇಂಥ ಟೇಸ್ಟಿ, ಡಿಲಿಶಿಯಸ್ ಕೇಕ್ ಮಾಡೋದ್ರಲ್ಲಿ ನೀವು ನಿಪುಣರಾ..? ನಿಮ್ಮಲ್ಲಿರುವ ಕೇಕ್ ಮೇಕರ್‌ನಾ ಹೊರತರೋಕ್ಕೆ ನೀವು ಬೇಕರಿ ಓಪೆನ್ ಮಾಡೋಕ್ಕೆ ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ನಾವಿವತ್ತು ನಿಮಗೆ ಉಪಯೋಗವಾಗುವ ಕೆಲ ಟಿಪ್ಸ್, ಐಡಿಯಾಗಳನ್ನ ಕೊಡ್ತೀವಿ.

ಮೊದಲನೇಯದಾಗಿ ಬೇಕರಿಯಲ್ಲಿ ಬರೀ ಕೇಕ್‌ ಅಷ್ಟೇ ಅಲ್ಲ, ಪಪ್ಸ್, ಚಿಪ್ಸ್, ದಿಲ್ ಪಸಂದ್, ಪೇಸ್ಟ್ರೀಸ್, ಕುಕೀಸ್, ಚಾಕೋಲೇಟ್ಸ್, ವೆರೈಟಿ ವೆರೈಟಿ ಸ್ನ್ಯಾಕ್ಸ್ ಕೂಡಾ ಮಾರಾಟ ಮಾಡಲಾಗುತ್ತದೆ. ಇದನ್ನೆಲ್ಲವನ್ನ ನೀವು ನಿಮ್ಮ ಅಂಗಡಿಯಲ್ಲೇ ಮಾಡಿ ಮಾರಿದ್ರೆ ಇನ್ನೂ ಉತ್ತಮ.

ಬೇಕರಿ ಇಡುವುದಕ್ಕೆ ಅದಕ್ಕೆ ತಕ್ಕ ಅಂಗಡಿಯನ್ನ ಬಾಡಿಗೆಗೆ ಪಡೆಯಿರಿ. ಇನ್ನು ಕೇಕ್ ಕುಕೀಸ್ ಮಾಡುವುದಕ್ಕೆ ಕಮರ್ಷಿಯಲ್ ಬೇಕರಿ ಓವನ್ ತೆಗೆದುಕೊಳ್ಳಬೇಕಾಗುತ್ತದೆ. 2ರಿಂದ 4 ಲಕ್ಷದವರೆಗೆ ಈ ಓವನ್ ಬೆಲೆ ಇರುತ್ತದೆ.

ಎರಡನೇಯದಾಗಿ ಕಮರ್ಷಿಯಲ್ ಬೇಕರಿ ಮಿಕ್ಸರ್. ಬ್ರೆಡ್ ಬಿಸ್ಕೇಟ್, ಕುಕೀಸ್ ಮಾಡೋದಕ್ಕೆ ಈ ಮಿಕ್ಸರ್ ಅವಶ್ಯಕತೆ ಇದೆ. 50 ಸಾವಿರದಿಂದ ಒಂದು ಲಕ್ಷದವರೆಗೆ ಇದರ ಬೆಲೆ ಇರುತ್ತದೆ.

ಮೂರನೇಯದಾಗಿ ಬಿಸ್ಕೇಟ್ ಡ್ರಾಪಿಂಗ್ ಮಷಿನ್. ಬೇರೆ ಬೇರೆ ಶೇಪ್‌ನ ಬಿಸ್ಕೇಟ್ ಮಾಡುವುದಕ್ಕೆ ಈ ಮಷಿನ್ ಬಳಸುತ್ತಾರೆ. ಇದರ ಬೆಲೆ 3ರಿಂದ 4 ಲಕ್ಷ ರೂಪಾಯಿ ಇರುತ್ತದೆ.

ನಾಲ್ಕನೇಯದಾಗಿ ಪ್ಯಾಕೇಜಿಂಗ್ ಮಷಿನ್. ಬೇಕರಿಯಲ್ಲಿ ಬಳಸೋ ಪ್ಯಾಕಿಂಗ್ ಮಷಿನ್ ಬೆಲೆ 2ರಿಂದ 3 ಲಕ್ಷ ಇರುತ್ತದೆ. ನೀವು ಬೇಕಾದ್ರೆ ಸಿಂಪಲ್ ಆದ ಪ್ಯಾಕೇಜಿಂಗ್ ಮಷಿನ್ ಬಳಸಬಹುದು.

ಇದೆಲ್ಲದರ ಜೊತೆ ಮುಖ್ಯವಾಗಿ ಗಮನದಲ್ಲಿಡಬೇಕಾದ ವಿಷಯವೆಂದರೆ ಕರೆಂಟ್ ಬಿಲ್ ಬಗ್ಗೆಯೂ ಗಮನ ಹರಿಸಬೇಕು.

ಇಷ್ಟೇ ಅಲ್ಲದೇ, ಟ್ರೇ, ದೊಡ್ಡ ದೊಡ್ಡ ಬೌಲ್, ಖಾದ್ಯಗಳನ್ನ ನೀಡಲು ಪ್ಲೇಟ್‌ಗಳು, ಬೇಕರಿ ವಸ್ತುಗಳನ್ನ ಇಡಲು ಬೇಕಾದ ಕಪಾಟುಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ನೀವು ಕಡಿಮೆ ಬಂಡವಾಳದಲ್ಲೇ ಬೇಕರಿ ಶುರು ಮಾಡುವುದಿದ್ದರೆ, ಸೆಕೆಂಡ್ ಹ್ಯಾಂಡ್ ವಸ್ತುಗಳನ್ನ ತರಿಸಿಕೊಳ್ಳಬಹುದು.

ಇನ್ನು ಕೆಲಸಗಾರರನ್ನ ತೆಗೆದುಕೊಳ್ಳುವ ವಿಷಯಕ್ಕೆ ಬರೋದಾದ್ರೆ, ಈ ಮೊದಲು ಬೇಕರಿಯಲ್ಲಿ ಕೆಲಸ ಮಾಡಿ ಗೊತ್ತಿರುವ ಓರ್ವ ಸೂಪರ್‌ವೈಸರ್‌ನ್ನು ತೆಗೆದುಕೊಳ್ಳಬೇಕು. ಬೇಕರಿಯ ತಿನಿಸು ಮಾಡಲು ಬರುವ ಓರ್ವ ವ್ಯಕ್ತಿಯ ಅವಶ್ಯಕತೆ ಇರುತ್ತದೆ. ಇನ್ನು ಇವರ ಹೆಲ್ಪಿಗೆ, ಕ್ಲೀನಿಂಗ್ ಮಾಡಲು ಒಬ್ಬರು ಅಥವಾ ಇಬ್ಬರು ಹುಡುಗರನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು.

ಇನ್ನು ಬೇಕರಿ ನಡೆಸೋಕ್ಕೆ ಕೆಲವು ಕಚ್ಚಾವಸ್ತುಗಳ ಅವಶ್ಯಕತೆ ಇದ್ದೇ ಇರುತ್ತದೆ. ಮೈದಾ ಹಿಟ್ಟು, ಗೋದಿ ಹಿಟ್ಟು, ಸಕ್ಕರೆ, ಬೆಣ್ಣೆ, ಹಾಲು, ಬೇಕಿಂಗ್ ಪೌಡರ್, ರಿಫೈನಡ್ ಆಯಿಲ್, ಡ್ರೈ ಫ್ರೂಟ್ಸ್, ಚೆರ್ರಿ, ವೆನಿಲ್ಲಾ ಎಸ್ಸೆನ್ಸ್, ಈಸ್ಟ್, ಉಪ್ಪು, ತುಪ್ಪ ಅವಶ್ಯಕತೆ ಇದ್ದಲ್ಲಿ ಮೊಟ್ಟೆ. ಇವಿಷ್ಟು ಬೇಕರಿ ನಡೆಸೋಕ್ಕೆ ಬೇಕಾಗಿರುವ ಕಚ್ಚಾವಸ್ತುಗಳು.

ಇನ್ನು ನೀವು ಮಾಡೋ ಪ್ರಾಡಕ್ಟ್‌ಗಳ ಕ್ವಾಲಿಟಿ ಉತ್ತಮವಾಗಿರುವಂತೆ ನೋಡಿಕೊಳ್ಳಿ. ಅಂಗಡಿಗೆ ಬಂದ ಗ್ರಾಹಕರೆಲ್ಲ ಪದೇ ಪದೇ ಬರುವಷ್ಟು ನಿಮ್ಮ ಬೇಕರಿ ತಿಂಡಿ ರುಚಿಕರವಾಗಿರಲಿ. ಅಲ್ಲದೇ, ಸ್ವಚ್ಛತೆ ಕೂಡ ಇಲ್ಲಿ ಮುಖ್ಯವಾಗಿರುತ್ತದೆ.

ಇನ್ನು ಈ ಎಲ್ಲ ಖರ್ಚು ವೆಚ್ಚಗಳು ಸೇರಿ 15ವರೆ ಲಕ್ಷ ಬಂಡವಾಳ ಹೂಡಿ ಬೇಕರಿ ಅಂಗಡಿ ಶುರುಮಾಡಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss