Wednesday, March 12, 2025

Latest Posts

Chitradurgaನಿಧಿ ಆಸೆಗೆ ನರ ಬಲಿ ! ಮೂಡ ನಂಬಿಕೆಗೆ ಮುಗ್ದನ ಬಲಿ !

- Advertisement -

ಚಿತ್ರದುರ್ಗ : ನಾವು ಕಲಿಯುಗದಲ್ಲಿ ಇದ್ದೇವೆ ಹೇಳಿ ಕೇಳಿ ಇದು ತಂತ್ರಜ್ಞಾನ ಯುಗ ಜಗತ್ತು ಎಷ್ಟೇ ಮುಂದುವರಿದರು ಕೂಡ ಕೆಲವೊಮ್ಮೆ ಮನುಷ್ಯರು ಮಾಡುವ ಕೆಲಸಗಳು ಅಚ್ಚರಿ ಪಡುವಂತೆ ಭಯ ಪಡುವಂತೆ ಇರುತ್ತವೆ. ಮಾನವ ನಂಬಿಕೆಯ ಜೊತೆ ಮೂಢನಂಬಿಕೆಯನ್ನ ಸಹ ಹೊಂದಿದ್ದಾನೆ ಕೆಲವರು ಈ ಮೂಢನಂಬಿಕೆ ಆಚರಣೆಗಳಿಗೆ ಪ್ರಾಮುಖ್ಯತೆ ಕೊಡ್ತಾರೆ ಅದರಿಂದ ಕೆಲವೊಮ್ಮೆ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿಬಿಡುತ್ತೆ. ಅದೇ ರೀತಿಯಾಗಿ ಇಲ್ಲೊಂದು ಘಟನೆ ನಡೆದಿದೆ ನಿಧಿಯ ಆಸೆಗಾಗಿ ವ್ಯಕ್ತಿಯೊಬ್ಬ ಅಮಾಯಕನ ಪ್ರಾಣವನ್ನು ತೆಗೆದು ನರಬಲಿ ಕೊಟ್ಟಿದ್ದಾರೆ.

ಹೌದು ವ್ಯಕ್ತಿಗೆ ನರಬಲಿ ಕೊಟ್ಟರೆ ನಿನಗೆ ನಿಧಿ ಸಿಗುತ್ತೆ ಎಂದು ಒಬ್ಬ ಜ್ಯೋತಿಷಿ ಹೇಳಿದ್ದ. ಆ ಜ್ಯೋತಿಷಿಯಾ ಮಾತು ನಂಬಿ ವ್ಯಕ್ತಿಯೋರ್ವ ನಿಧಿ ಆಸೆಗಾಗಿ ಬಸ್​ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನ ಕರೆದೊಯ್ದು ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿರೋದು ಚಿತ್ರದುರ್ಗ ಜಿಲ್ಲೆಯಲ್ಲಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಈ‌ ಘಟನೆ ನಡೆದಿದೆ. ಜೆಜೆ ಕಾಲೋನಿ ನಿವಾಸಿ ಪ್ರಭಾಕರ್​ ಹತ್ಯೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಜ್ಯೋತಿಷಿ ರಾಮಕೃಷ್ಣನ ಮಾತು ಕೇಳಿ ಆನಂದ್ ರೆಡ್ಡಿ ಎಂಬಾತ ಹಿಂದೆ ಮುಂದೆ ನೋಡದೇ ನರಬಲಿ ಕೊಟ್ಟೇ ಬಿಟ್ಟಿದ್ದಾನೆ. ಆದ್ರೆ, ಇದೀಗ ಪೊಲೀಸರು, ನರಬಲಿ ಕೊಟ್ಟ ಆರೋಪಿ ಆಂಧ್ರದ ಕಲ್ಯಾಣ ದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ ಹಾಗೂ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಜ್ಯೋತಿಷಿ ರಾಮಕೃಷ್ಣ, ಆನಂದ ರೆಡ್ಡಿಗೆ ಪರಶುರಾಮಪುರ ಪಶ್ಚಿಮದಲ್ಲಿ ನರಬಲಿ ಕೊಟ್ರೆ ನಿಧಿ ಸಿಗುತ್ತೆ ನಂತರ ಆ ರಕ್ತವನ್ನು ಮಾರಮ್ಮ ದೇವಿಗೆ ಅರ್ಪಿಸಲು ಹೇಳಿದ್ದನಂತೆ ಜ್ಯೋತಿಷಿ. ಈ ಮಾತು ಕೇಳಿದ ಆನಂದ ರೆಡ್ಡಿ, ಕಳೆದ ಭಾನುವಾರ ಸಂಜೆ ಪಶ್ಚಿಮ‌ ದಿಕ್ಕಲ್ಲಿ ಬಂದ ಪ್ರಭಾಕರನ ಬರ್ಬರ ಹತ್ಯೆ ಮಾಡಿದ್ದಾನೆ. ಪ್ರಭಾಕರನನ್ನು ಬೈಕಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ಕರೆದೊಯ್ದು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ ಈ ಪಾಪಿ.

‘ಇನ್ನು ಈ ಕೊಲೆ ಆರೋಪಿ ಆನಂದ ರೆಡ್ಡಿ ಎಂಬಾತ ಪಾವಗಡದ ಡಾಬಾಲ್ಲಿ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಎಸ್‌ಪಿ ರಂಜೀತ ಕುಮಾರ್ ಬಂಡಾರು, ASP ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಂದ ಕೊಲೆಗೆ ಬಳಸಿದ್ದ ಮಚ್ಚು ಹಾಗೂ ಬಟ್ಟೆ‌ ಸೀಜ್ ಮಾಡಿದ್ದಾರೆ ಪೊಲೀಸರು.

- Advertisement -

Latest Posts

Don't Miss