Friday, April 25, 2025

Latest Posts

Recipe: ಫಟಾಫಟ್ ಆಗಿ ತಯಾರಿಸಬಹುದಾದ ದೋಸೆ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, 2 ಟೊಮೆಟೋ, 2 ಒಣಮೆಣಸು, ಉಪ್ಪು, ಎಣ್ಣೆ.

ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ರವಾ, ‘ಟೊಮೆಟೋ, ಉಪ್ಪು, ನೆನೆಸಿದ ಮೆಣಸನ್ನು ನೀರು ಹಾಾಕಿ ಮಿಕ್ಸಿಯಲ್ಲಿ ರುಬ್ಬಿ. ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಈರುಳ್ಳಿ, ಜೀರಿಗೆ ಹಾಕಿ ಮಿಕ್ಸ್ ಮಾಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಮಾಡಿ, ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಇದೇ ರೀತಿ ನೀವು ಪಾಲಕ್ ದೋಸೆ ಮಾಡಬಹುದು. ಪಾಲಕ್‌ನ್ನು ಚೆನ್ನಾಗಿ ತೊಳೆದು, ಕುದಿಯುವ ನೀರಿಗೆ ಹಾಕಿ 5 ನಿಮಿಷದ ಬಳಿಕ ತೆಗೆಯಬೇಕು. ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ನಂತರ ರವಾ, ಅಕ್ಕಿ ಜೊತೆ ಪಾಾಲಕ್, ಶುಂಠಿ, ಹಸಿಮೆಣಸು, ಉಪ್ಪು ಹಾಕಿ ದೋಸೆ ಹಿಟ್ಟು ತಯಾರಿಸಿ. ಬಳಿಕ ಇದೇ ರೀತಿ , ಜೀರಿಗೆ, ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಹಾಕಿ ಮಿಕ್ಸ್ ಮಾಡಿ, ದೋಸೆ ಮಾಡಿ ಸವಿಯಿರಿ.

- Advertisement -

Latest Posts

Don't Miss