Monday, December 23, 2024

Latest Posts

ಉದ್ಯಮ ಶುರು ಮಾಡುವವರಿಗೆ 10 ಐಡಿಯಾಗಳು..!

- Advertisement -

ನಾವಿವತ್ತು 10 ಉದ್ಯಮದ ಐಡಿಯಾಗಳನ್ನು ನೀಡಲಿದ್ದೇವೆ.

1.. ಪಾಪ್‌ಕಾರ್ನ್ ಮೇಕಿಂಗ್ ಮಷಿನ್: ಪಾಪ್‌ಕಾರ್ನ್ ಮೇಕಿಂಗ್ ಮಷಿನ್‌ನಿಂದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಶಾಲೆಯಲ್ಲಿ ಗ್ಯಾದರಿಂಗ್, ಯಾವುದಾದರೂ ಮೇಳ, ಅಥವಾ ಥಿಯೇಟರ್ ಬಳಿ ಈ ಅಂಗಡಿ ತೆರೆದರೆ ಒಳ್ಳೆಯ ಲಾಭ ಪಡೆಯಬಹುದು.

2.. ಪಾನೀಪುರಿ ಶಾಪ್: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಪಾನೀಪುರಿ ಅಂಗಡಿ ಇಟ್ಟವನು ಕೂಡ ಪ್ರತಿದಿನ ಒಳ್ಳೆಯ ಲಾಭ ಮಾಡುತ್ತಾನೆ. ಚಾಟ್‌ ಸ್ಟ್ರೀಟ್‌ನಲ್ಲಿ, ಥಿಯೇಟರ್, ಮಾಲ್ ಬಳಿ ಸ್ವಲ್ಪ ಒಳ್ಳೆ ಗುಣಮಟ್ಟದಲ್ಲಿ ಪಾನೀಪುರಿ ಅಂಗಡಿ ಇಡಿ. ಸ್ವಚ್ಛತೆ ಕಾಪಾಡಿ, ರುಚಿಕರ ಪಾನೀಪುರಿ ನೀಡಿದರೆ, ಗ್ರಾಹಕರ ಸಂಖ್ಯೆ ಹೆಚ್ಚಾಗಿ, ಒಳ್ಳೆಯ ಲಾಭ ಪಡಿಯಬಹುದು.

3.. ಐಸ್‌ಕ್ರೀಮ್ ಶಾಪ್: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟ. ಎಲ್ಲಾ ಸೀಸನ್‌ನಲ್ಲೂ ಜನ ಇಷ್ಟಪಟ್ಟು ತಿನ್ನೋ ಡೆಸರ್ಟ್ ಇದು. ಐಸ್‌ಕ್ರೀಮ್ ಶಾಪ್ ಇಟ್ಟರೆ ಒಳ್ಳೆಯ ಲಾಭವಿದೆ. ವೆರೈಟಿ ವೆರೈಟಿ ಐಸ್‌ಕ್ರೀಮ್ ಮಾಡಿ ಮಾರಬಹುದು. ಜನಸಂದಣಿ ಇರುವ ಸ್ಥಳದಲ್ಲಿ ಐಸ್‌ಕ್ರೀಮ್ ಶಾಪ್ ತೆರೆಯಬಹುದು.

4.. ಬೇಕರಿ: ಕೇಕ್, ಪಪ್ಸ್, ಸ್ನ್ಯಾಕ್ಸ್ ಮಾಡೋದ್ರಲ್ಲಿ ಕೆಲ ಮಹಿಳೆಯರು ಎಕ್ಸ್‌ಪರ್ಟ್ ಆಗಿರ್ತಾರೆ. ಆದ್ರೆ ತಮ್ಮ ಟ್ಯಾಲೆಂಟನ್ನ ಕಿಚನ್‌ನಲ್ಲೇ ಇರಿಸಿಬಿಡ್ತಾರೆ. ನಿಮ್ಮ ಹವ್ಯಾಸವನ್ನೇ ಉದ್ಯಮವಾಗಿ ಬದಲಾಯಿಸಿ, ಬೇಕರಿ ನಡೆಸಿ. ಇದಕ್ಕೆ ಲಕ್ಷ ಲಕ್ಷ ಬಂಡವಾಳ ಹಾಕಬೇಕಾಗುತ್ತದೆ. ಆದ್ರೆ ನಿಮ್ಮ ತಿಂಡಿಯ ಗುಣಮಟ್ಟ ಉತ್ತಮವಾಗಿದ್ರೆ, ಲಾಭ ಗ್ಯಾರಂಟಿ.

5.. ಜ್ಯೂಸ್ ಅಂಗಡಿ: ಆಫೀಸ್ ಗಲಾಟೆಯಲ್ಲಿ, ಓದಿನ ಭರಾಟೆಯಲ್ಲಿ, ಜನ ಊಟ ಮಾಡೋದನ್ನು ಮರೆತು ಹೋಗ್ತಾರೆ. ಅಂಥವರಿಗೆ ಊಟ ಮಾಡೋಕ್ಕೂ ಟೈಮ್ ಇರಲ್ಲ. ಅವರೆಲ್ಲ ಹೆಚ್ಚು ಫ್ರೂಟ್ಸ್, ಜ್ಯೂಸ್‌ಗಳನ್ನ ಸೇವಿಸುತ್ತಾರೆ. ಹಾಗಾಗಿ ಸ್ಕೂಲು ಕಾಲೇಜು, ಆಫೀಸ್ ಇರುವ ಜಾಗದಲ್ಲಿ ಜ್ಯೂಸ್ ಅಂಗಡಿ ಇಟ್ಟರೆ ಉತ್ತಮ.

6.. ಟೀ ಮತ್ತು ಕಾಫಿ ಶಾಪ್: ಕೆಲವು ಆಫೀಸ್ ಬಳಿ ಹೊಟೇಲ್, ತಿಂಡಿ ಅಂಗಡಿ ಇರುವುದಿಲ್ಲ. ಅಲ್ಲದೇ ಆಫೀಸಿನಲ್ಲಿ ಕ್ಯಾಂಟಿನ್ ಫೆಸಿಲಿಟಿಯೂ ಇರುವುದಿಲ್ಲ. ಕೆಲಸದ ಟೆನ್ಶನ್ ಮಧ್ಯೆ ರಿಲ್ಯಾಕ್ಸ್‌ ಆಗೋಕ್ಕೆ ಟೀ ಕಾಫಿ ಕುಡಿಯೋಕ್ಕೆ ಸಿಬ್ಬಂದಿಗಳು ಇಚ್ಛಿಸುತ್ತಾರೆ. ಹಾಗಾಗಿ ಆಫೀಸ್‌ಗಳ ಬಳಿ ಚಿಕ್ಕ ಟೀ, ಕಾಫಿ ಸ್ಟಾಲ್ ಇಟ್ರೆ ಒಳ್ಳೆ ಲಾಭ ಪಡಿಯಬಹುದು.

7.. ಪೂಜಾ ಸಾಮಗ್ರಿಗಳನ್ನ ಇಡುವ ಅಂಗಡಿ: ದೇವಸ್ಥಾನದ ಬಳಿ ಅಥವಾ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಅಂಗಡಿ ಇಡಬಹುದು.

8.. ಹೂವಿನ ಅಂಗಡಿ: ಹಬ್ಬ ಹರಿದಿನಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ, ದೇವಸ್ಥಾನದಲ್ಲಿ ಎಲ್ಲ ಕಡೆ ಬಳಸುವ ವಸ್ತು ಅಂದ್ರೆ ಹೂವು. ಜನ ಕೂಡ ಪ್ರತಿದಿನ ದೇವರಿಗೆ ಹೂವನ್ನ ಇಟ್ಟು ಪೂಜೆ ಮಾಡ್ತಾರೆ. ಅಲ್ಲದೇ ಬರ್ತ್‌ಡೇ ಇದ್ದಾಗ, ಫ್ಲವರ್ ಡೆಕೋರೇಶನ್‌ಗಾಗಿ ಹೂವು ಅಗತ್ಯವಾಗಿ ಬೇಕು. ಹಾಗಾಗಿ ಹೂವಿನ ಉದ್ಯಮ ಮಾಡುವುದರಿಂದ ಒಳ್ಳೆಯ ಲಾಭ ಸಿಗಬಹುದು.

9.. ತರಕಾರಿ ಅಂಗಡಿ: ಕೊರೊನಾರ್ಭಟ ಶುರುವಾದ ಮೇಲೆ ಎಲ್ಲಕ್ಕಿಂತ ಜನ ಹೆಚ್ಚು ಮೊರೆ ಹೋಗಿದ್ದು, ಫ್ರೆಶ್ ಆಗಿರುವ ಹಣ್ಣು ತರಕಾರಿಗಾಗಿ. ಅದೂ ಅಲ್ಲದೇ, ಚಿಕ್ಕ ಚಿಕ್ಕ ಅಂಗಡಿಗಳನ್ನಿಟ್ಟುಕೊಂಡವರು ನಷ್ಟ ಅನುಭವಿಸಿ, ಲಾಭದ ದಾರಿ ಹುಡುಕಿಕೊಂಡು ತರಕಾರಿ ಅಂಗಡಿಯನ್ನಿಟ್ಟು ಲಾಭ ಪಡೆದರು.

10.. ಕೇಟರಿಂಗ್: ಅಡುಗೆ ಮಾಡೋದ್ರಲ್ಲಿ ನೀವು ನಿಪುಣರಾಗಿದ್ರೆ, ನಿಮಗೆ ಬೇರೆಯವರ ಕೆಟರಿಂಗ್‌ನಲ್ಲಿ ಕೆಲಸ ಮಾಡಿ ಎಕ್ಸ್‌ಪಿರಿಯೇನ್ಸ್ ಇದ್ರೆ ನೀವು ಕೂಡ ಕೆಟರಿಂಗ್ ಉದ್ಯಮ ಶುರು ಮಾಡಬಹುದು. ನಿಮ್ಮ ಗ್ರೂಪ್‌ನಲ್ಲಿ ಒಳ್ಳೆಯ ಅಡುಗೆಭಟ್ಟರು, ಊಟ ಬಡಿಸುವ ಹುಡುಗರು, ಉತ್ತಮ ಕೆಲಸಗಾರರನ್ನಿರಿಕೊಳ್ಳಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss