ಮೇಷ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ನೂತನ ಕೆಲಸ ಕಾರ್ಯಗಳಿಗೆ ಸ್ಪಷ್ಟ ನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರದ್ಧೆ ತೋರಿಸುವುದು.
ವೃಷಭ: ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಲ್ಲಿ ಕಂಕಣಬಲಕ್ಕೆ ಪೂರಕವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳತಕ್ಕದ್ದು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿದೆ.
ಮಿಥುನ: ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿ ತಕ್ಕ ಮಟ್ಟಿಗೆ ಲಾಭವನ್ನು ತಂದುಕೊಡಲಿದೆ. ರಾಜಕೀಯ ವರ್ಗದವರಿಗೆ ಸರಕಾರದಿಂದ ಸಹಕಾರ ಸಿಗಲಿದೆ.
ಕರ್ಕಾಟಕ: ಸ್ಪಷ್ಟ ನಿರ್ಧಾರಗಳು ವೃತ್ತಿರಂಗದಲ್ಲಿ ಹೆಚ್ಚಿನ ಭದ್ರತೆ ನೀಡಲಿದೆ. ಆರ್ಥಿಕ ಅಭಿವೃದ್ಧಿಯಿಂದ ನಿರೀಕ್ಷಿತ ಕಾರ್ಯಸಿದ್ಧಿಯಾಗಲಿದೆ. ಯೋಗ್ಯ ವೈವಾಹಿಕ ಸಂಬಂಧಗಳು ಕಂಕಣಬಲಕ್ಕೆ ಪೂರವಕವಾದೀತು.
ಸಿಂಹ: ವೃತ್ತಿರಂಗದಲ್ಲಿ ಜವಾಬ್ದಾರಿಯಿಂದ ದುಡಿಯಬೇಕಾಗುತ್ತದೆ. ಅನಾವಶ್ಯಕ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಸರಕಾರದ ಕೆಲಸ ಕಾರ್ಯಗಳು ವಿಳಂಬಗತಿ ನಡೆಯಲಿದೆ. ನಿರುದ್ಯೋಗಿಗಳಿಗೆ ಅವಕಾಶ.
ಕನ್ಯಾ: ಆಗಾಗ ಕಾರ್ಯಕ್ಷೇತ್ರದಲ್ಲಿ ಅನಿಶ್ಚಿತತೆ ಕಂಡು ಬರುವುದರಿಂದ ಕಾರ್ಯಸಾಧನೆಗೆ ಅಡ್ಡಿಯಾದೀತು. ಬೇಸಾಯ ಕೃಷಿ ಪ್ರವೃತ್ತಿಯವರಿಗೆ ಆಶಾದಾಯಕ ದಿನಗಳಿವು. ನಿವೃತ್ತರು ಪ್ರವೃತ್ತಿಯಲ್ಲಿ ತೊಡಗುವುದು ಉತ್ತಮ.
ತುಲಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉದಾಸೀನತೆ ತಾಳಲಿದ್ದಾರೆ. ಮುಖ್ಯವಾಗಿ ಗೃಹಸ್ಥರು ಹೆಚ್ಚಿನ ಜವಾಬ್ದಾರಿಯಿಂದ ನಡೆಯಬೇಕಾದೀತು. ವಿವಾಹಿತರು ವೈವಾಹಿಕ ಜೀವನವನ್ನು ಗಟ್ಟಿಗೊಳಿಸಬೇಕಾದಿತು.
ವೃಶ್ಚಿಕ: ಹೆಚ್ಚಿನ ಲಾಭದಾಯಕ ಆದಾಯ ನಿಮ್ಮನ್ನು ಕಾರ್ಯಸಾಧನೆಗೆ ಅನುಕೂಲಿಸಲಿದೆ. ದೂರಸಂಚಾರದಲ್ಲಿ ಕಾರ್ಯಸಾಧನೆಯ ಯೋಗವಿದೆ. ಆಗಾಗ ಅನಾವಶ್ಯಕ ಒತ್ತಡಗಳು ಆತಂಕಕ್ಕೆ ಕಾರಣವಾಗಬಹುದು.
ಧನು: ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ, ಪ್ರಯತ್ನ ಬಲ ಮುಂದುವರಿಯಲು ಸಹಕಾರಿಯಾಗಲಿದೆ. ಖರ್ಚು ವೆಚ್ಚಗಳನ್ನ ಆದಷ್ಟು ನಿಯಂತ್ರಿಸಿದರೆ ಉತ್ತಮ. ಹಿರಿಯರೊಡನೆ ವಾದ ವಿವಾದಗಳಿಗೆ ಕಾರಣರಾಗದಂತೆ ಮುನ್ನಡೆಯಿರಿ.
ಮಕರ: ಬಹುದಿನಗಳ ಬಳಿಕ ನಿರೀಕ್ಷಿತ ಕೆಲಸ ಕಾರ್ಯಗಳು ಸಮಾಧಾನ ತರಲಿದೆ. ದಾಂಪತ್ಯ ಜೀವನದಲ್ಲಿ ಪತ್ನಿ ಮಕ್ಕಳಿಂದ ಸಮಾಧಾನ ಸಿಗಲಿದೆ. ಅನಾವಶ್ಯಕವಾಗಿ ಬಂದ ಅವಕಾಶವನ್ನು ಕಳೆದುಕೊಳ್ಳದಿರಿ.
ಕುಂಭ: ಕೌಟುಂಬಿಕವಾಗಿ ಸಮಾಧಾನವಿರದು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಯೋಗ್ಯ ವಯಸ್ಕರಿಗೆ ಒಳ್ಳೆಯ ಪ್ರಸ್ತಾವಗಳು ಬಂದಾವು. ಅವಸರಿಸದಿರಿ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.
ಮೀನ: ಆಗಾಗ ಅನಾವಶ್ಯಕವಾಗಿ ಮಾತಿನಿಂದ ನಿಷ್ಠುರಕ್ಕೆ ಕಾರಣರಾಗದಿರಿ. ವ್ಯಾಪಾರ ವ್ಯವಹಾರಗಳು ಚೇತರಿಕೆ ಪಡೆದು ಅಭಿವೃದ್ಧಿ ತಂದಾವು. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸಂಚಾರದಲ್ಲೂ ಅತೀ ಜಾಗೃತೆ ಅಗತ್ಯ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.