ಈಗೆಲ್ಲ ಜನ ಫ್ಯಾಷನೇಬಲ್ ಬಟ್ಟೆ ಹಾಕಿಕೊಳ್ಳಲು ಇಷ್ಟ ಪಡ್ತಾರೆ. ಚೂಡಿದಾರ, ಲಂಗ ದಾವಣಿ, ಸಾರಿ ಬ್ಲೌಸ್‌ನಲ್ಲಿಯೂ ವೆರೈಟಿ ವೆರೈಟಿ ಡಿಸೈನ್‌ಗಳು ಇರ್ತವೆ. ಇದರ ಜೊತೆ ಗೌನ್, ಸ್ಕರ್ಟ್, ಟಾಪ್ಸ್‌ಗಳು ಕೂಡಾ ಲಭ್ಯವಿದೆ. ಇಂತಹ ಫ್ಯಾಷನೇಬಲ್ ಡ್ರೆಸ್‌ಗಳು ಮಾರುಕಟ್ಟೆಯಲ್ಲಂತೂ ಸಿಗತ್ತೆ. ಆದ್ರೆ ಅದು ನಿಮಗೆ ಬೇಕಾಗಿರುವ ಥರ ಇರಲ್ಲಾ. ಆಗ ನೀವು ನಿಮಗೆ ಬೇಕಾದ ರೀತಿಯಲ್ಲಿ ಡ್ರೆಸ್ ಸ್ಟಿಚ್ ಮಾಡಿಸೋಕ್ಕೆ ಟೇಲರ್ ಹತ್ತಿರ ಹೋಗ್ತೀರಾ. ಆದ್ರೆ ಟೇಲರ್‌ಗೆ ಬರೀ ಬ್ಲೌಸ್ ಮತ್ತು ಚೂಡಿದಾರ ಅಷ್ಟೇ ಸ್ಟಿಚ್ ಮಾಡೋಕ್ಕೆ ಬರುತ್ತೆ. ಹಾಗಾದ್ರೆ ನಿಮಗೆ ಬೇಕಾದಂಥ ಟಾಪ್, ಸ್ಕರ್ಟ್, ಗೌನ್ ಸ್ಟಿಚ್ ಮಾಡ್ಸೋಕ್ಕೆ ನೀವು ಹೋಗಬೇಕಾಗಿರೋದು ಬುಟಿಕ್ಸ್‌ಗೆ.
ಎಸ್. ಬುಟಿಕ್ಸ್‌ನಲ್ಲಿ ನಿಮಗೆ ಬೇಕಾದ ರೀತಿ ಡ್ರೆಸ್ ಡಿಸೈನ್ ಮಾಡಿಕೊಡಲಾಗುತ್ತದೆ. ನೀವು ಕೂಡ ಯಾವುದೇ ರೀತಿಯ ಡ್ರೆಸ್ ಡಿಸೈನ್ ಮಾಡೋದ್ರಲ್ಲಿ ಪರ್ಫೆಕ್ಟ್ ಆಗಿದ್ರೆ ನೀವೂ ಒಂದು ಬುಟಿಕ್ಸ್ ಓಪೆನ್ ಮಾಡಬಹುದು. ಹಾಗಾದ್ರೆ ಬುಟಿಕ್ಸ್ ಓಪೆನ್ ಮಾಡೋಕ್ಕೆ ಎಷ್ಟು ಬಂಡವಾಳ ಹೂಡಬೇಕು..? ಇದಕ್ಕೆ ಯಾವ ಕೋರ್ಸ್ ಮಾಡಿರಬೇಕು..? ಎಷ್ಟು ವಿದ್ಯಾಭ್ಯಾಸ ಪಡೆದಿರಬೇಕು ಎಂಬುದರ ಬಗ್ಗೆ ನಾವಿವತ್ತು ನಿಮಗೆ ತಿಳಿಸಿಕೊಡಲಿದ್ದೇವೆ.
ಮೊದಲನೇಯದಾಗಿ ಬುಟಿಕ್ಸ್ ಒಪೆನ್ ಮಾಡೋಕ್ಕೆ ನಿಮಗೆ ಬಟ್ಟೆ ಹೊಲಿಯುವ ಕಲೆ ಗೊತ್ತಿರಬೇಕು. 10ರಿಂದ ಪಿಯುಸಿ ತನಕ ನಿಮ್ಮ ವಿದ್ಯಾಭ್ಯಾಸವಾಗಿದ್ದರೆ ಉತ್ತಮ. ಇದರ ಜೊತೆ ಫ್ಯಾಷನ್ ಡಿಸೈನಿಂಗ್ ಅಥವಾ ಬುಟಿಕ್ ಕೋರ್ಸ್‌ಗಳನ್ನ ಮಾಡಿದ್ರೆ ಇನ್ನೂ ಉತ್ತಮ. ಅಥವಾ ಯಾವುದಾದರೂ ಬುಟಿಕ್ಸ್‌ನಲ್ಲಿ ಕೆಲಸ ಮಾಡಿ ಎಕ್ಸ್‌ಪಿರಿಯನ್ಸ್ ಪಡೆದು ನಿಮ್ಮ ಬುಟಿಕ್ಸ್‌ನ್ನ ನೀವು ಶುರು ಮಾಡಬಹುದು.
ಮನೆಯಲ್ಲಿ, ಯಾವುದಾದರೂ ಅಂಗಡಿಯನ್ನ ಬಾಡಿಗೆಗೆ ಪಡೆದು ಅಥವಾ ಆನ್‌ಲೈನ್ ಮೂಲಕ ಕೂಡ ನೀವು ನಿಮ್ಮ ಬುಟಿಕ್ ಉದ್ಯಮವನ್ನ ಶುರು ಮಾಡಬಹುದು.
ಇನ್ನು ಬುಟಿಕ್ಸ್ ಶುರು ಮಾಡುವಾಗ ನಿಮ್ಮ ಶಾಪ್ ಮುಂದೆ ಬೋರ್ಡ್ ಹಾಕಬೇಕಾಗುತ್ತದೆ. 2,3 ಥರದ ಹೊಲಿಗೆ ಮಷಿನ್, ಚೇರ್, ಟೇಬಲ್, ಫುಲ್ ಸೈಜ್ ಮಿರರ್, ನೀವು ಡಿಸೈನ್ ಮಾಡಿದ ಡ್ರೆಸ್ ಹಾಕಲು ಡಮ್ಮೀಸ್, ಐರನ್ ಬಾಕ್ಸ್, ಹ್ಯಾಂಗರ್ಸ್, ಇವೆಲ್ಲವನ್ನ ಪರ್ಚೇಸ್ ಮಾಡಬೇಕಾಗುತ್ತದೆ. ಅಲ್ಲದೇ ಅಂಗಡಿಯ ರೆಂಟ್ ಕೂಡ 20 ಸವಿರದ ತನಕ ಇರತ್ತೆ. ಇವೆಲ್ಲವನ್ನೂ ಸೇರಿಸಿ ಒಂದುವರೆಯಿಂದ ಮೂರುವರೆ ಲಕ್ಷದವರೆಗೆ ಬಂಡವಾಳ ಹೂಡಬೇಕಾಗುತ್ತದೆ.
ಇನ್ನು ನೀವು ಬುಟಿಕ್ಸ್ ಇಟ್ಟಿರುವ ಏರಿಯಾ, ನಿಮ್ಮ ಕಸ್ಟಮರ್, ನೀವು ಡಿಸೈನ್ ಮಾಡಿದ ಡ್ರೆಸ್ ಮೇಲೆ ಲಾಭ ಡಿಪೆಂಟ್ ಅವಲಂಬಿತವಾಗಿರುತ್ತದೆ.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.