ಇಂದು 5 ಗಂಟೆಗೆ ಫೇಸ್‌ಬುಕ್‌ನಲ್ಲಿ ಲೈವ್ ಬಂದ ಸಿಎಂ ಯಡಿಯೂರಪ್ಪ, ರಾಜ್ಯವನ್ನುದ್ದೇಶಿಸಿ ಮಾತನಾಡಿದ್ದಾರೆ.
ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ ಸಿಎಂ, ಮೊದ ಮೊದಲ ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೆವು. ಆದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ನೀವು ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿದ್ರೆ ಮಾತ್ರ ಕೊರೊನಾ ಸೋಂಕನ್ನ ಕಡಿಮೆ ಮಾಡಬಹುದು ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ, ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ಕೋವಿಡ್ ತಡೆಗೆ ಜೀವದ ಹಂಗು ತೊರೆದು ಹೋರಾಡಬೇಕಿದೆ. ವೈದ್ಯರು, ನರ್ಸ್‌ಗಳು ಇದಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. 5 ಟಿ ಸೂತ್ರವನ್ನು ನಾವು ಕೊರೊನಾ ತಡೆಗೆ ಬಳಸುತ್ತಿದ್ದೇವೆ. ಟಿ ಸೂತ್ರವೆಂದರೆ, ಟ್ರೇಸ್, ಟ್ರ್ಯಾಕ್, ಟೆಸ್ಟ್, ಟ್ರೀಟ್ಮೆಂಟ್, ಟೆಕ್ನಾಲಜಿ.
ಕೋವಿಡ್ ಇಲ್ಲದವರಿಗೆ ಆಸ್ಪತ್ರೆಯ ಅಗತ್ಯವಿಲ್ಲ. ಅಂಥವರಿಗೆ ಹೋಮ್ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗುತ್ತಿದೆ ಎಂದರು.
ಇನ್ನು ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಇರುವವರು ಆತ್ಮಹತ್ಯೆಗೆ ಶರಣಾಗುವ ಕೇಸ್ ಹೆಚ್ಚಾಗುತ್ತಿದೆ. ಆದ್ರೆ ಕೊರೊನಾ ಬಂದ ಹಲವರು ಗುಣಮುಖರಾಗಿದ್ದಾರೆ. ದಯವಿಟ್ಟು ಆತ್ಮಹತ್ಯೆಯ ನಿರ್ಧಾರ ಮಾಡಬೇಡಿ, ನಿಯಮವನ್ನ ಪಾಲಿಸಿ, ಚಿಕಿತ್ಸೆ ಪಡೆದರೆ ಖಂಡಿತ ಗುಣಮುಖರಾಗುತ್ತಾರೆ. ನೂರಕ್ಕೆ 98 ಜನ ಗುಣಮುಖರಾಗಿದ್ದಾರೆ. ಎಂದು ಸಿಎಂ ಹೇಳಿದ್ದಾರೆ.
ಇನ್ಮುಂದೆ ಕೋವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯಲ್ಲೇ ರಿಪೋರ್ಟ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್‌ಗಳನ್ನ ನೀಡಲು ಒಪ್ಪಿದೆ. ಬೆಂಗಳೂರಿನಲ್ಲಿ 8 ವಲಯ ಮಾಡಿ ಉಸ್ತುವಾರಿ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ, ಇಂಥ ಕಷ್ಟದ ಸಮಯದಲ್ಲಿ ಯಾರೂ ಸಹ ಟೀಕೆ ಟಿಪ್ಪಣಿ ಮಾಡಬೇಡಿ, ಎಲ್ಲ ಪಕ್ಷದ ಮುಖಂಡರು ಇದಕ್ಕೆ ಸಂಬಂಧಿಸಿದ ಸಲಹೆ ಕೊಡಿ. ಸಿದ್ದರಾಮಯ್ಯ ಆಗಿರಬಹುದು, ಡಿ.ಕೆ.ಶಿವಕುಮಾರ್ ಆಗಿರಬಹುದು ಎಲ್ಲರೂ ಕೊರೊನಾ ನಿಯಂತ್ರಣಕ್ಕೆ ಸಲಹೆ ಕೊಡಿ ಎಂದು ಹೇಳಿದ್ದಾರೆ. ಅಲ್ಲದೇ ನಿಮಗೆ ಬೇಕಾದ ಮಾಹಿತಿ ಕೂಡ ನಾವು ನೀಡಲಿದ್ದೇವೆ ಎಂದಿದ್ದಾರೆ.
ಅಲ್ಲದೇ ಪ್ರತಿಪಕ್ಷ ಮತ್ತು ಮಾಧ್ಯಮದ ಸಹಕಾರವಿದ್ದರೆ ಆದಷ್ಟು ಬೇಗ ಕೊರೊನಾವನ್ನ ನಿಯಂತ್ರಣ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಲಾಕ್‌ಡೌನ್ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ನಾಳೆಯಿಂದ ಲಾಕ್‌ಡೌನ್ ಇರುವುದಿಲ್ಲ. ಆದ್ರೆ ಕಂಟೈನ್‌ಮೆಂಟ್ ಝೋನ್‌ನಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.