Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಅಂತಾ ಇರೋದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ಬರೀ ಕೆಲಸ ಮಾಡೋದಲ್ಲ ಬದಲಾಗಿ, ಮನೆಯಲ್ಲಿ ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಅಂದ್ರೆ ಪತಿ-ಪತ್ನಿ ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು. ಕೆಲವೊಂದು ದಂಪತಿ ಹೀಗೆ ಒಂದೇ ತಟ್ಟೆಯಲ್ಲಿ ಎಂಜಿಲು ಮಾಡಿ ಊಟ ಮಾಡುತ್ತಾರೆ. ಆಗ ಇಬ್ಬರಲ್ಲೂ ಒಂದೇ ರೀತಿ ಗುಣ ಬರುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ಈ ದರಿದ್ರ ಗುಣದಿಂದ ದುರ್ಬುದ್ಧಿ ಬಂದು, ನೆಮ್ಮದಿಯ ಜೀವನ ಹಾಳಾಗುತ್ತದೆ. ಹಾಗಾಗಿ ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು.
ಎರಡನೇಯದಾಗಿ ಬೆಳಿಗ್ಗೆ ತಡವಾಗಿ ಏಳಬಾರದು. ಬೆಳಿಗ್ಗೆ ಆದಷ್ಟು ಬೇಗ ಎದ್ದು, ಮನೆಗೆಲಸ, ಪೂಜೆ ಮಾಡಬೇಕು. ಮನೆಯನ್ನು ಆದಷ್ಟು ಸ್ವಚ್ಚವಾಗಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಹಾಸಿಗೆ ಮೇಲೆ ತಿನ್ನುವುದು: ನೆಲದ ಮೇಲೆ ಚಾಪೆ ಹಾಕಿ ಕುಳಿತು ಊಟ ಮಾಡುವುದು ಮೊದಲಿನಿಂದಲೂ ಬಂದ ಪದ್ಧತಿ. ಹೀಗೆ ಊಟ ಮಾಡುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ನಮ್ಮಲ್ಲಿ ಸಾತ್ವಿಕತೆಯೂ ಬರುತ್ತದೆ. ಇದರಿಂದ ಜೀವನವೂ ನೆಮ್ಮದಿಯಾಗಿರುತ್ತದೆ. ಆದರೆ ಇಂದಿನ ಕಾಲದಲ್ಲಿ ಕೆಲವರು ಹೇಗೆ ಬೇಕೋ ಹಾಗೆ ಊಟ ಮಾಡುತ್ತಾರೆ. ಕೆಲವರು ಸೋಫಾದ ಮೇಲೆ ಕುಳಿತು ಊಟ ಮಾಡಿದರೆ, ಕೆಲವರು ಬೆಡ್ ಮೇಲೆ ಕುಳಿತು ಊಟ ಮಾಡುತ್ತಾರೆ. ಇದರಿಂದಲೇ ರೋಗ ರುಜಿನಗಳು ಹೆಚ್ಚಾಗಿ, ನೆಮ್ಮದಿಯೂ ಹಾಳಾಗಿದೆ, ಆರ್ಥಿಕ ಪರಿಸ್ಥಿತಿಯೂ ಹಾಳಾಗಿದೆ.
ಆಹಾರವನ್ನು ಹೆಚ್ಚು ದಿನ ಇಟ್ಟು ತಿನ್ನುವುದು: ಯಾವುದೇ ಆಹಾರವಾಗಲಿ ಹೆಚ್ಚು ದಿನ ಇಟ್ಟು ತಿನ್ನಬಾರದು ಅಂತಾ ಹೇಳಲಾಗುತ್ತದೆ. ಹಾಗೆ ತಿನ್ನುವುದರಿಂದ ಅದರಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರ ವೈಜ್ಞಾನಿಕ ಕಾರಣವೆಂದರೆ, ಅಂಥ ಆಹಾರಗಳು ಆರೋಗ್ಯ ಹಾಳು ಮಾಡುತ್ತದೆ. ಇದರಿಂದ ನೆಮ್ಮದಿಯೂ ಹಾಳಾಗುತ್ತದೆ.
ಸಂಜೆ ಬಳಿಕ ವಸ್ತುಗಳನ್ನು ಕೊಡುವುದು: ಸಂಜೆ ಬಳಿಕ ಕೆಲ ವಸ್ತುಗಳನ್ನು ಯಾರಿಗೂ ಕೊಡಬಾರದು ಅಂತಾ ಹೇಳಲಾಗುತ್ತದೆ. ಮೊಸರು, ಹಾಲು, ಉಪ್ಪು, ಹೀಗೆ ಕೆಲವು ವಸ್ತುಗಳನ್ನು ಸಂಜೆ ಬಳಿಕ ದಾನವಾಗಿ ನೀಡಬಾರದು. ಇದರಿಂದ ದರಿದ್ರ ಮನೆಗೆ ಬರುತ್ತದೆ.