Hubli News: ಹುಬ್ಬಳ್ಳಿ: ಬಾಲಕಿ ಕೊಲೆ ಮಾಡಿದ ನರ ಹಂತಕನನ್ನು ಹುಬ್ಬಳ್ಳಿ ಪೊಲೀಸರು ಎನ್ಕೌಂಟರ್ ಮಾಡಿದ್ದರು. ಆದ್ರೆ ಎಂಟು ದಿನಗಳು ಕಳೆದ್ರೂ ಕೂಡ ಆತನ ಕುಟುಂಬಸ್ಥರ ಸುಳಿವು ಕೂಡ ಸಿಗುತ್ತಿಲ್ಲ. ನಾಲ್ಕೈದು ಪೊಲೀಸ್ ತಂಡಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅವನ ಪೋಟೋ ಹಿಡಿದುಕೊಂಡು ಅಲೆದಾಡುತ್ತಿದ್ದಾರೆ.
ಕಳೆದ ರವಿವಾರ ಐದು ವರ್ಷದ ಬಾಲಕಿಯ ಮೇಲೆ, ಬಿಹಾರಿ ಮೂಲದ ರಿತೀಶಕುಮಾರ ಪೈಶಾಚಿಕ ಕೃತ್ಯ ಎಸುಗಿರುವುದು, ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಘಟನೆ ನಡೆದು ಎಂಟು ದಿನ ಕಳೆದರು ಹಂತಕ ರಿತೇಶಕುಮಾರ ನ ಕುರಿತು ಸುಳಿವು ಸಿಗುತ್ತಿಲ್ಲ. ಪೊಲೀಸ್ ತಂಡಗಳು ಬಿಹಾರ, ಪಾಟ್ನಾ ಗೋವಾ,ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುತ್ತಾಟ ನಡೆಸಿದ್ದಾರೆ.
ಆರೋಪಿ ರಿತೇಶಕುಮಾರನ ಪೋಟೋ ಹಿಡಿದು ಸುತ್ತಾಡುತ್ತ, ಸಿಕ್ಕ ಸಿಕ್ಕಲ್ಲಿ ಅಂಟಿಸುತ್ತಾ ಮಾಹಿತಿ ಕಲೆ ಹಾಕುತ್ತಿದ್ದಾರೆ ಹುಬ್ಬಳ್ಳಿಯ ಪೊಲೀಸರು. ಪಿಎಸ್ಐ ವಿನೋದ ನೇತೃತ್ವದಲ್ಲಿ ಒಂದು ಟೀಮ್ ಪಾಟ್ನಾದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪಿಎಸ್ಐ ಸುನೀಲ್ ನೇತೃತ್ವದಲ್ಲಿ ಒಂದು ಟೀಮ್ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ. ಇನ್ನೂ ಎರಡು ಟೀಮ್ ಗಳು ಗೋವಾ ಮತ್ತು ಇತರೆಡೆ ಓಡಾಡುತ್ತಿದ್ದಾರೆ. ಗಲ್ಲಿ ಗಲ್ಲಿ ಗಳಲ್ಲಿ ಕೈಯಲ್ಲಿ ಹಂತಕನ ಪೊಟೊ ಹಿಡಿದು ತಿರುಗಾಡುತ್ತಿರುವ ಹುಬ್ಬಳ್ಳಿಯ ಪೊಲೀಸರು. ಎಂಟು ದಿನ ಕಳೆದರು ಹಂತಕನ ಕುಟುಂಬದವರ ಮಾಹಿತಿ ಇನ್ನೂ ಸಿಗುತ್ತಿಲ್ಲ. ಮರಣೋತ್ತರ ಪರೀಕ್ಷೆ ಮುಗಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿರುವ ರಿತೇಶಕುಮಾರನ ಮೃತ ದೇಹ. ಇದೊಂದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.




