Haveri News: ಹಾವೇರಿಯ ಶಾಲೆಯ“ಂದರಲ್ಲಿ ಶಾಕ್ ನೀಡುವ ದೃಶ್ಯ ಕಾಣಿಸಿದ್ದು, ಮಕ್ಕಳ ಕೈಯಲ್ಲಿ ಶಾಲೆ ಕೆಲಸಗಳನ್ನು ಮಾಡಿಸುತ್ತಿರುವ ಶಿಕ್ಷಕರ ವರ್ತನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪಾಠ ಕಲಿಯಬೇಕಾದ ವಿದ್ಯಾರ್ಥಿಗಳಿಂದ ಕಟ್ಟಡ ಕಾಮಗಾರಿಗೆ ನೀರು ಹಾಕಿಸಲಾಗುತ್ತಿದೆ. ತರಗತಿ ನಡೆಯುತ್ತಿದ್ದ ವೇಳೆಯಲ್ಲೇ ಮಕ್ಕಳಿಂದ ಈ ಕೆಲಸ ಮಾಡಿಸಲಾಗುತ್ತಿದ್ದು, ಮಕ್ಕಳನ್ನು ಮರದ ಏಣಿಯ ಮೇಲೆ ಏರಿಸಿ, ಮಕ್ಕಳಿಂದ ಬಿಲ್ಡಿಂಗ್‌ಗೆ ನೀರು ಹಾಕಿಸುವ ಕೆಲಸ ಮಾಡಿಸಲಾಗುತ್ತಿದೆ.
ಇನ್ನೂ ಶಾಕಿಂಗ್ ವಿಷಯ ಅಂದ್ರೆ, ಇಲ್ಲಿನ ಶಿಕ್ಷಕರೇ ಈ ಕೃತ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಶಿಕ್ಷಕರೇ ಮಂದೆ ನಿಂತು ಮಕ್ಕಳಿಂದ ಕೆಲಸ ಮಾಡಿಸುತ್ತಿದ್ದಾರೆ. ಇನ್ನು ಈ ದೃಶ್ಯವನ್ನು ನೋಡಿದ ಜನ, ಮಕ್ಕಳು ಏಣಿಯಿಂದ ಜಾರಿ ಬಿದ್ದರೆ, ಅವರ ಗತಿಯೇನು..? ಅವರ ಜೀವಕ್ಕೆ ಅಪಾಯವಾದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಾರೆ. ಶಿಕ್ಷಕರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಸಚಿವರು ಸೇರಿ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.




