ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದುಕೊಂಡಿರುವುದನ್ನು ಜಗತ್ತಿನ ಅನೇಕ ರಾಷ್ಟ್ರಗಳು ವ್ಯಾಪಕವಾಗಿ ಖಂಡಿಸಿವೆ. ವಿಶ್ವದ ಹಲವಾರು ಬಲಿಷ್ಠ ದೇಶಗಳ ನಾಯಕರು ಭಾರತಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಯಾವಾಗಲೂ ಭಾರತದ ವಿರೋಧಿ ನಿಲುವನ್ನು ಒಳಗೊಳಗೆ ತೋರುವ ಚೀನಾ ಮಾತ್ರ ಕೊಳಕು ಕೆಲಸ ಮಾಡುವ ಪಾಕಿಗಳ ಜೊತೆ ಕೈಜೋಡಿಸುವ ಮೂಲಕ ತನ್ನ ನರಿ ಬುದ್ಧಿಯನ್ನು ತೋರಿಸಿದೆ.
ಪಾಕ್‌ಗೆ ಹಣಕಾಸಿನ ನೆರವು..
ಈಗಾಗಲೇ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಈ ವಾತಾವರಣದಲ್ಲೂ ಚೀನಾ ತನ್ನ ಹಲ್ಕಾ ಕೆಲಸಗಳನ್ನು ಬಿಟ್ಟಿಲ್ಲ. ಚೀನಾ ಮೊದಲಿನಿಂದಲೂ ಮಾಡುತ್ತ ಬಂದಿರುವ ಮನೆಹಾಳ್ ಕೆಲಸಗಳಲ್ಲಿ ಶಾಮೀಲಾಗುವ ಪಾಕಿಸ್ತಾನಕ್ಕೆ ತನ್ನ ಸಾರ್ವಭೌಮತ್ವ ಮತ್ತು ಭದ್ರತೆಯ ಹಿತವನ್ನು ಕಾಪಾಡುವಲ್ಲಿ ಬೆಂಬಲಿಸುವುದಾಗಿ ಘೋಷಣೆ ಮಾಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪಾಕಿಸ್ತಾನಕ್ಕೆ ಅಗತ್ಯ ಹಣಕಾಸಿನ ನೆರವನ್ನು ನೀಡುವುದಾಗಿ ಚೀನಾ ಬಾಯಿ ಬಡಿದುಕೊಂಡಿದೆ.
ಪಾಕಿಗಳ ಕೊಳಕು ಕೆಲಸಕ್ಕೆ ನರಿ ಬುದ್ಧಿಯ ಚೀನಾ ಸಾಥ್..!
ಈ ಕುರಿತು ಪಾಪಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದರ್ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಚೀನಾ ಯಾವಾಗಲೂ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಬೆಂಬಲಿಸಿದೆ. ದೃಢ ಸ್ನೇಹಿತ ಮತ್ತು ಎಲ್ಲಾ ಬೆಳವಣಿಗೆಗಳ ಕಾರ್ಯತಂತ್ರದ ಭಾಗಿದಾರನಾಗಿ, ಚೀನಾ ಪಾಕಿಸ್ತಾನದ ಕಾನೂನುಬದ್ಧ ಭದ್ರತಾ ಕಾಳಜಿಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ. ಅಲ್ಲದೆ ತನ್ನ ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತದೆ. ಚೀನಾ ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ನಿಷ್ಪಕ್ಷಪಾತ ತನಿಖೆಯನ್ನು ಬೆಂಬಲಿಸುತ್ತದೆ ಎಂದು ವಾಂಗ್ ಯಿ ಹೇಳಿದ್ದಾರೆ.
ಈ ಸಂಘರ್ಷ ಭಾರತ ಮತ್ತು ಪಾಕಿಸ್ತಾನದ ಮೂಲಭೂತ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಗಟ್ಟಿತನಕ್ಕೆ ಅನುಕೂಲಕರವಾಗಿಲ್ಲ. ಎರಡೂ ದೇಶಗಳು ಸಂಯಮದಿಂದ ವರ್ತಿಸಬೇಕು, ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಪರಿಸ್ಥಿತಿಯನ್ನು ಶಾಂತಗೊಳಿಸಲು ಉತ್ತೇಜಿಸಬೇಕು. ಎರಡೂ ದೇಶಗಳಿಗೆ ಅಗತ್ಯ ನೆರವು ನೀಡುವುದಾಗಿ ಡ್ರ್ಯಾಗನ್ ರಾಷ್ಟ್ರ ತಿಳಿಸಿದೆ.
ಈ ವಿಚಾರವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀವಿ..
ಅಲ್ಲದೆ ಭಯೋತ್ಪಾದಕ ದಾಳಿಯಿಂದಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಉದ್ವಿಗ್ನತೆಯ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ದರ್ ವಾಂಗ್‌ಗೆ ಮಾಹಿತಿ ನೀಡಿದ್ದಾನೆ. ಹಾಗೆಯೇ ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಇಸ್ಲಾಮಾಬಾದ್ ಯಾವಾಗಲೂ ದೃಢವಾಗಿದೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಕ್ರಮಗಳನ್ನು ವಿರೋಧಿಸುತ್ತದೆ. ಪಾಕಿಸ್ತಾನವು ಪರಿಸ್ಥಿತಿಯನ್ನು ಪ್ರಬುದ್ಧ ರೀತಿಯಲ್ಲಿ ನಿಭಾಯಿಸಲು ಬದ್ಧವಾಗಿದೆ. ಹೀಗಾಗಿ ಚೀನಾ ಹಾಗೂ ಜಾಗತಿಕ ಮಟ್ಟದಲ್ಲಿ ಈ ವಿಚಾರವನ್ನು ನಾವು ತೆಗೆದುಕೊಂಡು ಹೋಗಲಿದ್ದೇವೆ ಎಂದು ಅಸಹಾಯಕ ಮಾತುಗಳನ್ನಾಡಿದ್ದಾನೆ.
ಸಿಂಧೂ ನದಿ ನೀರು ಒಪ್ಪಂದ ಅಮಾನತು..
ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ, ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳು ಸೇರಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಗ್ರರಾಷ್ಟ್ರ, ನದಿ ನೀರನ್ನು ನಿರ್ಬಂಧಿಸುವುದನ್ನು ಯುದ್ಧಕ್ಕೆ ಆಹ್ವಾನಿಸಿದ್ದಂತಾಗುತ್ತದೆ ಎಂದು ಪರಿಗಣಿಸಲಾಗುವುದು ಎಂದು ಭಂಡತನ ತೋರಿದೆ. ತನ್ನ ನೀಚ ಕೃತ್ಯಕ್ಕೆ ಬೆಂಬಲಿಸಿರುವ ಚೀನಾಗೆ ಪಾಕಿಸ್ತಾನದ ವಿದೇಶಾಂಗ ಸಚಿವ ದರ್ ಚೀನಾದ ಸ್ಥಿರ ಮತ್ತು ಅಚಲ ಬೆಂಬಲಕ್ಕೆ ಬಕೆಟ್ ಹಿಡಿಯುವ ಕೆಲಸ ಮಾಡಿದ್ದಾನೆ. ಹೀಗಾಗಿ ಭಾರತದ ವಿರುದ್ಧ ಹೋರಾಡಲು ಪರಮ ಪಾಪಿಗಳ ದೇಶಕ್ಕೆ ಚೀನಾ ಸಪೋರ್ಟ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕುವ ಕೆಲಸ ಮಾಡಿದೆ. ಒಂದು ವೇಳೆ ಪಾಕಿಸ್ತಾನ ಯುದ್ಧಕ್ಕೆ ಮುಂದಾದರೆ ಪರಮ ಪಾಪಿ ರಾಷ್ಟ್ರ ಏಳೇಳು ಜನ್ಮದಲ್ಲೂ ನೆನಪಿಡುವಂತಹ ಪಾಠ ಕಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ.